Home Archive by category Fresh News (Page 911)

ಮಳೆಯಿಂದ ಹಾನಿಯಾಗಿರುವ ಪ್ರದೇಶಕ್ಕೆ ಮೇಯರ್ ಪ್ರೇಮಾನಂದ್ ಶೆಟ್ಟಿ ಭೇಟಿ, ಪರಿಶೀಲನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಐದಾರು ದಿನಗಳಿಂದ ಮಳೆ ಸುರಿದ ಪರಿಣಾಮ ಹಲವೆಡೆ ಹಾನಿ ಸಂಭವಿಸಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೂ ಮಳೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ನಗರದ ದೇರೆಬೈಲ್‌ನಲ್ಲಿ ವಾರ್ಡಿನ ಆಕಾಶಭವನದಲ್ಲಿ ಗುಡ್ಡ ಕುಸಿತ ಪ್ರದೇಶಕ್ಕೆ ಮೇಯರ್ ಪ್ರೇಮಾನಂದ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.ಈ ವೇಳೆ

ತುಳುಕೂಟ ಕತಾರ್ ವತಿಯಿಂದ ನಡೆದ ಬ್ಯಾಡ್ಮಿಂಟನ್ ಪಂದ್ಯಾವಳಿ

ಒಲಿಂಪಿಕ್ ಕ್ರೀಡಾ ಕೂಟ ಕೋವಿಡ್ ನಿಂದ  ಒಂದು ವರ್ಷ ಮುಂದೂಡಲ್ಪಟ್ಟು ಈ ವರ್ಷ ನಡೆಸಲು ಜಪಾನ್ ಮುಂದಾಗಿದೆ.ಹಾಗೇನೇ ಕೊಲ್ಲಿ ರಾಷ್ಟ್ರದಲ್ಲೂ ಕೋವಿಡ್ ಪ್ರಕರಣ ಕಡಿಮೆ ಯಾಗಿ  ಕ್ರೀಡಾ ಕೂಟ  ನಡೆಸಲು ಸರ್ಕಾರ ಹಸಿರು ನಿಶಾನೆ ನೀಡಿದ್ದು ಇದರಿಂದ ದೋಹಾ ಕತಾರ್ ನಲ್ಲಿ ಹೊಸಾ ಮಾರ್ಗಸೂಚಿ ಪ್ರಕಟಿಸಿ ಕ್ರೀಡಾ ಕೂಟಗಳು ನಡೆಸಲು ಅನುಮತಿ ನೀಡಿದೆ. ಈ ನಿಟ್ಟಿನಲ್ಲಿ ತುಳುಕೂಟ ಕತಾರ್ ಜುಲೈ 9 ರಂದು ದೋಹಾ ದ ಕೇಂಬ್ರಿಡ್ಜ್ ಶಾಲೆಯಲ್ಲಿ ಕರ್ನಾಟಕ ಮೂಲದ ಸಂಘ

ಕದ್ರಿ ಮಂಜುನಾಥ ಕ್ಷೇತ್ರಕ್ಕೆ ನೂತನ ವ್ಯವಸ್ಥಾಪನ ಸಮಿತಿ

ಕರಾವಳಿಯ ಪ್ರಸಿದ್ಧ ಕ್ಷೇತ್ರ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ಕ್ಷೇತ್ರಕ್ಕೆ ನೂತನ ವ್ಯವಸ್ಥಾಪನ ಸಮಿತಿಯ ರಚನೆಯಾಗಿದೆ. ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಎ.ಜೆ.ಶೆಟ್ಟಿ ಆಯ್ಕೆಗೊಂಡರೆ, ಸದಸ್ಯರಾಗಿ ರಾಘವೇಂದ್ರ ಅಡಿಗ, ಕೆ.ದೇವದಾಸ್ ಕುಮಾರ್, ಎಚ್.ಕುಸುಮಾ ದೇವಾಡಿಗ, ಎನ್.ನಿವೇದಿತ ಶೆಟ್ಟಿ, ಕೆ.ರಾಜೇಶ್ , ಎಚ್.ಕೆ.ಪುರುಷೋತ್ತಮ ಜೋಗಿ, ಮನೋಹರ್ ಸುವರ್ಣ, ನಾರಾಯಣ್ ಕೋಟ್ಯಾನ್ ಬೋಳಾರ್ ಆಯ್ಕೆಯಾಗಿದ್ದಾರೆ. ಮೂರು ವರ್ಷದ ಅವಧಿಗೆ ವ್ಯವಸ್ಥಾಪನ

ಸ್ವಸ್ತಿಕಾ ನ್ಯಾಷನಲ್ ಸ್ಕೂಲ್ ನಲ್ಲಿ ಉಚಿತ ಕೋವಿಡ್ ಲಸಿಕಾ ಶಿಬಿರ

ಮಂಗಳೂರಿನಲ್ಲಿರುವ ಸ್ವಸ್ತಿಕಾ ನ್ಯಾಷನಲ್ ಸ್ಕೂಲ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಗಳೂರು ಇವರ ಸಹಭಾಗಿತ್ವದಲ್ಲಿ ಕೋವಿಡ್ ಲಸಿಕಾ ಶಿಬಿರವನ್ನು ಆಯೋಜಿಸಲಾಗಿತ್ತು. ‘ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಉರ್ವಸ್ಟೋರಿನ 25 ಮತ್ತು 26ನೇ ವಾರ್ಡಿನ ಕಾರ್ಪೊರೇಟರುಗಳಾದ ಗಣೇಶ ಕುಲಾಲ್ ಹಾಗೂ ಶ್ರೀಮತಿ ಜಯಲಕ್ಷ್ಮೀ ಶೆಟ್ಟಿ ಅವರು ನೆರವೇರಿಸಿದರು. ಆರೋಗ್ಯ ಅಧಿಕಾರಿ ಡಾ.ಇಲಂಗೊ, ಸ್ವಸ್ತಿಕಾ ನ್ಯಾಷನಲ್ ಸ್ಕೂಲ್‌ನ ಸಂಸ್ಥಾಪಕರಾದ

ಮುಂದಿನ 6 ತಿಂಗಳಲ್ಲಿ ಮಾಧ್ಯಮಗಳ ಮೇಲೆ ನಿಯಂತ್ರಣ ತರುತ್ತೇವೆ: ಅಣ್ಣಾಮಲೈ ವಿವಾದಿತ ಹೇಳಿಕೆ

ಮುಂದಿನ 6 ತಿಂಗಳಲ್ಲಿ ಮಾಧ್ಯಮಗಳ ಮೇಲೆ ನಿಯಂತ್ರಣ ತರುತ್ತೇವೆ ಎನ್ನುವ ಮೂಲಕ ತಮಿಳುನಾಡು ಬಿಜೆಪಿ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ವಿವಾದಿತ ಹೇಳಿಕೆ ನೀಡಿದ್ದಾರೆ. ಕೊಯಮತ್ತೂರಿನಿಂದ ಚೆನ್ನೈವರೆಗೆ ನಡೆದ ರೋಡ್ ಶೋನಲ್ಲಿ ಇಂತಹ ಹೇಳಿಕೆ ನೀಡಿದ್ದಾರೆ. “ಮಾಧ್ಯಮವು ನಮ್ಮ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿದೆ ಎಂಬ ಚಿಂತೆಗಳನ್ನು ಮರೆತುಬಿಡಿ. ಮುಂದಿನ ಆರು ತಿಂಗಳಲ್ಲಿ ನಾವು ಮಾಧ್ಯಮದ ಮೇಲೆ ನಿಯಂತ್ರಣ ಮತ್ತು ಅವುಗಳನ್ನು ನಮ್ಮ ಅಡಿಯಲ್ಲಿ

ಕುಲಶೇಖರದ ಕೊಂಗೂರಿನಲ್ಲಿ ಗುಡ್ಡ ಕುಸಿತ: ರೈಲ್ವೇ ಹಳಿಯ ಮೇಲೆ ಬಿದ್ದ ಮಣ್ಣು: ರೈಲು ಸಂಚಾರ ಸ್ಥಗಿತ

ಕರಾವಳಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಂಗಳೂರು ನಗರದ ಕುಲಶೇಖರದ ಬಳಿಯ ಕೊಂಗೂರಿನಲ್ಲಿ ಗುಡ್ಡ ಕುಸಿತವಾಗಿದ್ದು, ರೈಲ್ವೆಯ ಹಳಿಯ ಮೇಲೆ ಮಣ್ಣು ಬಿದ್ದಿದೆ. ಇದರಿಂದಾಗಿ  ರೈಲ್ವೆ ಸಂಚಾರ ಸ್ಥಗಿತಗೊಂಡಿದೆ. ಕುಲಶೇಖರದ ಬಳಿಯಲ್ಲಿ ರೈಲ್ವೆ ಇಲಾಖೆ ರೈಲ್ವೆಹಳಿ ಪಕ್ಕದಲ್ಲಿ ತಡೆಗೋಡೆಯನ್ನು ನಿರ್ಮಾಣ ಮಾಡುತ್ತಿದೆ. ಆದ್ರೆ ಭಾರೀ ಮಳೆಯ ಹಿನ್ನೆಲೆಯಲ್ಲಿ ಗುಡ್ಡ ಕುಸಿದು, ನಿರ್ಮಾಣಗೊಂಡಿದ್ದ ತಡೆಗೋಡೆ ಕಾಮಗಾರಿ ಕುಸಿದು ಬಿದ್ದಿದೆ.

ಜುಲೈ 20ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಜುಲೈ 20 ರಂದು ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ತಾಣದಲ್ಲಿ ಪ್ರಕಟವಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಕೊರೊನಾವೈರಸ್ ಸೋಂಕು ಕಾರಣದಿಂದ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಪಡಿಸಲಾಗಿತ್ತು. ಪ್ರಥಮ ಪಿಯುಸಿ ಅಂಕ ಆಧರಿಸಿ ದ್ವಿತೀಯ ಪಿಯುಸಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ ಮಾಡುವುದಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಕಟಿಸಿದ್ದರು.ಈ ಕುರಿತು ಹೇಳಿಕೆ ನೀಡಿರುವ ಪದವಿ

ಉಪ್ಪಳಿಗೆಯಲ್ಲಿ ಮನೆ ತಡೆಗೋಡೆ ಕುಸಿತ-ಲಕ್ಷಾಂತರ ರೂಪಾಯಿ ನಷ್ಟ

ಪುತ್ತೂರು: ಕಳೆದ ಕೆಲ ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು ಜು.16ರಂದು ಇರ್ದೆ ಗ್ರಾಮದ ಉಪ್ಪಳಿಗೆ ಎಂಬಲ್ಲಿ ಧನಂಜಯರವರ ಮನೆಯ ತಡೆಗೋಡೆ ಕುಸಿದು ಬಿದ್ದಿದೆ. ಮನೆ ಅಂಗಳದ ಬದಿಯಲ್ಲಿ ನಿರ್ಮಿಸಲಾದ ತಡಗೋಡೆಯು ಮುಂಜಾನೆಯ ವೇಳೆಗೆ ಹೂವಿನ ಗಾರ್ಡನ್ ಸಹಿತ ಕುಸಿದು ಬಿದ್ದಿದೆ. ಅಂಗಳದಲ್ಲಿ ಬಿರುಕು ಬಿಟ್ಟಿದ್ದು ಮತ್ತಷ್ಟು ಕುಸಿಯುವ ಅಪಾಯದಲ್ಲಿದೆ. ಘಟನೆಯಿಂದಾಗಿ ಲಕ್ಷಾಂತರ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.

ಕೊಳ್ನಾಡುವಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಅನುದಾನ ಮಂಜೂರು: ಎಂ.ಎಸ್.ಮಹಮ್ಮದ್

ವಿಟ್ಲ : ಕೊಳ್ನಾಡು ಜಿ.ಪಂ. ವ್ಯಾಪ್ತಿಯ ಕನ್ಯಾನ, ಕರೋಪಾಡಿ, ಕೊಳ್ನಾಡು, ಸಾಲೆತ್ತೂರು ಗ್ರಾ.ಪಂ.ಗಳಿಗೆ ಒಟ್ಟು ಜಲಜೀವನ್ ಮಿಷನ್ ಯೋಜನೆಯಡಿ 7.81 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಜಿ.ಪಂ.ಮಾಜಿ ಎಂ.ಎಸ್.ಮಹಮ್ಮದ್ ತಿಳಿಸಿದರು.ಅವರು ವಿಟ್ಲ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾನು ಪ್ರತಿನಿಧಿಸಿದ ಕೊಳ್ನಾಡು ಜಿ.ಪಂ.ಕ್ಷೇತ್ರವು ದ.ಕ.ಜಿಲ್ಲೆಯಲ್ಲೇ ಅತೀ ಹೆಚ್ಚು ಅನುದಾನ ಪಡೆದಿದೆ. ಗ್ರಾ.ಪಂ.ನ ನೀರು ಮತ್ತು ನೈರ್ಮಲ್ಯ ಸಮಿತಿಯು

ಒಕ್ಕೆತ್ತೂರು ಹೊಳೆಯ ಸುರುಂಬಡ್ಕ ಕಿರು ಸೇತುವೆ ಮುಳುಗಡೆ

ವಿಟ್ಲ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ಹೊಳೆಯ ಸುರುಂಬಡ್ಕ ಕಿರು ಸೇತುವೆ ಮುಳುಗಡೆಯಾಗಿದೆ. ಕಳೆದ ಭಾರಿಯ ಮಳೆಗೆ ಎರಡು ಬಾರಿ ಕಿಂಡಿ ಅಣೆಕಟ್ಟು ಮುಳುಗಡೆಯಾಗಿತ್ತು. ಇದರಿಂದ ಸುತ್ತಮುತ್ತಲಿನ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಆಗಿನ ಶಾಸಕಿ ಶಕುಂತಾಳ ಶೆಟ್ಟಿ ಅವರ ಮೂಲಕ ಒಂದು ಕೋಟಿ ರೂ. ಅನುದಾನದಲ್ಲಿ ಈ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲಾಗಿತ್ತು. ಕಳೆದ ವರ್ಷ ಈ ಹೊಳೆಯಲ್ಲಿ ಕೊಚ್ಚಿಕೊಂಡು