ಶಾಸಕ ರಮೇಶ ಜಾರಕಿಹೋಳಿ ಸಿಡಿ ಕೇಸ ಬೇಗ ಇತ್ಯರ್ಥವಾಗಲಿದೆ ಮತ್ತೆ ಅವರು ಸಚಿವರಾಗುತ್ತಾರೆ ಎಂದು ಕರ್ನಾಟಕ ಕೋಳಗೇರಿ ಮಂಡಳಿ ಅದ್ಯಕ್ಷರು ಮತ್ತು ಅಥಣಿ ಮತಕ್ಷೇತ್ರದ ಶಾಸಕ ಮಹೇಶ ಕುಮಟಳ್ಳಿ ಹೇಳಿದರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಭರಮಖೋಡಿ ಗ್ರಾಮದಲ್ಲಿ ಸುಮಾರು ಐವತ್ತು ಲಕ್ಷ ರಸ್ತೆ ಸುಧಾರಣೆ ಕಾಮಗಾರಿ ಮತ್ತು ಅಥಣಿ ಸೀಡ್ ಪಾರ್ಮ ಸುಮಾರು ಹನ್ನೊಂದು ಲಕ್ಷ
ಪಡುಬಿದ್ರಿ ಕಾಡಿಪಟ್ಣ ಪ್ರದೇಶದಲ್ಲಿ ಕಡಲು ಕೊರೆತ ತೀವ್ರ ಗೊಂಡಿದ್ದು ಈ ಪ್ರದೇಶದ ಹತ್ತಾರು ತೆಂಗಿನ ಮರಗಳು ಸಹಿತ ಪ್ರವಾಸೋದ್ಯಮ ಇಲಾಖೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಕಾಮಗಾರಿ ಕಡಲ ಒಡಲು ಸೇರಲು ಸನ್ನದ್ಧ ವಾಗಿದೆ. ಸ್ಥಳೀಯರ ಮಾತಿನ ಪ್ರಕಾರ ತಡೆಗೋಡೆ ನಿರ್ಮಾಣ ಪ್ರದೇಶದ ತೀರದಲ್ಲಿ ಕಡಲು ಕೊರೆತ ಸರ್ವೇಸಾಮಾನ್ಯ, ಇದೀಗ ಪಕ್ಕದಲ್ಲಿ ಬಂಡೆ ಕಲ್ಲುಗಳಿಂದ ತಡೆಗೋಡೆ ನಿರ್ಮಾಣವಾಗಿದ್ದು ಈ ಭಾಗದಲ್ಲೂ ತಡೆಗೋಡೆ ನಿರ್ಮಿಸುವಂತೆ ಈ ಭಾಗದ ಶಾಸಕರ ಗಮನಕ್ಕೆ
ದ.ಕ. ಜಿಲ್ಲೆಯಲ್ಲಿ ಇಂದಿನಿಂದ ಅನ್‍ಲಾಕ್ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 7ರಿಂದ ಅಪರಾಹ್ನ 2ರವರೆಗೆ ಎಲ್ಲ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಜಿಲ್ಲಾಡಳಿತ ಅವಕಾಶ ನೀಡಿದ್ದು, ಅದರಂತೆ ಜಿಲ್ಲೆಯ ವಾಣಿಜ್ಯ ಚಟುವಟಿಕೆಗಳು ಸುಮಾರು ಎರಡು ತಿಂಗಳ ಬಳಿಕ ಪುನಾರಂಭಗೊಂಡಿದೆ. ಈ ನಡುವೆ ಬಸ್ ಗಳ ಓಡಾಟಕ್ಕೂ ಅವಕಾಶ ಕಲ್ಪಿಸಿದ್ದರಿಂದ ಸರಕಾರಿ ಬಸ್ ಗಳು ಬೆಳಗ್ಗೆಯಿಂದ ಸಂಚಾರ ಆರಂಭಿಸಿವೆ. ಆದರೆ ಬಸ್ಸಿನ ಒಟ್ಟು ಆಸನ ಸಾಮರ್ಥ್ಯದ ಶೇ.50ರಷ್ಟು ಪ್ರಯಾಣಿಕರನ್ನು ಮಾತ್ರ
ಅಕ್ರಮವಾಗಿ ಲಕ್ಷಾಂತರ ಮೌಲ್ಯದ ನಕಲಿ ಗೊಬ್ಬರ ಸಂಗ್ರಹಿಸಿ ಇಟ್ಟಿದ್ದ ಅಡ್ಡೆಯ ಮೇಲೆ ರೈತರೆ ದಾಳಿಗೈದಿರುವ ಘಟನೆ ನಿಂಬೆನಾಡಿನಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಇಂಗಳಗಿಯ ಹೊರವಲಯದಲ್ಲಿರುವ ಮನೆಯೊಂದರಲ್ಲಿ ಲಕ್ಷಾಂತರ ಮೌಲ್ಯದ ನಕಲಿ ಗೊಬ್ಬರ ಸಂಗ್ರಹಿಸಿ ಇಟ್ಟಿದ್ದರು. ಖಚಿತ ಮಾಹಿತಿಯನ್ನು ನಿಂಬೆನಾಡಿನ ಕೃಷಿ ಅಧಿಕಾರಿಗಳಿಗೆ ಮಾಹಿತಿ ನೀಡದ್ರೂ ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ. ಅದಕ್ಕಾಗಿ ಬೇಸತ್ತ ರೈತರೇ ಅಡ್ಡೆಯ ಮೇಲೆ ದಾಳಿಗೈದು ನಕಲಿ ಗೊಬ್ಬರ
ಸುರತ್ಕಲ್: “ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಇಡೀ ದೇಶವೇ ತಲ್ಲಣಗೊಂಡಿದ್ದು ಮಾಧ್ಯಮ ಮಿತ್ರರಿಗೆ ಹೆಚ್ಚಿನ ಸಮಸ್ಯೆ ಎದುರಾಗಿದೆ. ಹೀಗಾಗಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ವತಿಯಿಂದ ಪತ್ರಕರ್ತರ ಕ್ಷೇಮ ವಿಚಾರಿಸುವ ಕಾರ್ಯಕ್ರಮ ಕೈಗೊಂಡಿದ್ದೇವೆ. ಪ್ರತೀ ಹಂತದಲ್ಲೂ ನಿಲ್ಲುವ ಪತ್ರಕರ್ತರನ್ನು ಗುರುತಿಸುವ ಕೆಲಸ ಸಮಾಜ ಮಾಡಬೇಕು” ಎಂದು ಮಂಗಳೂರು ಉತ್ತರ ಕ್ಷೇತ್ರ ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು. ಅವರು
ಸಮಗ್ರ ಪ್ಯಾಕೇಜ್ ಮತ್ತು ತುರ್ತು ಕ್ರಮಗಳಿಗಾಗಿ ಒತ್ತಾಯಿಸಿ ಉಸ್ತುವಾರಿ ಮಂತ್ರಿ ಮತ್ತು ಶಾಸಕರುಗಳ ಕಛೇರಿ ಎದುರು ಖಾಲಿ ಚೀಲಗಳನ್ನು ಸುಟ್ಟು ಇಂದು ಜನಾಗ್ರಹ ಆಂದೋಲನವು ಹಮ್ಮಿಕೊಂಡಿದ್ದ ರಾಜ್ಯವ್ಯಾಪಿ ಪ್ರತಿಭಟನೆಯ ಭಾಗವಾಗಿ ಮಂಗಳೂರಿನ ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಮಂಗಳೂರು ಪೋಲಿಸರು ಮೊದಲಿಗೆ ಅನುಮತಿ ನಿರಾಕರಿಸಿದರೂ, ಸಂಸದರು ಮತ್ತು ಶಾಸಕರನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಭೇಟಿ ಮಾಡಿಸುವ ವ್ಯವಸ್ಥೆ
ವಿಜಯಪುರ ಜಿಲ್ಲೆ ದೇವರಹಿಪ್ಪಗಿ ತಾಲೂಕಿನಲ್ಲಿ ಮರ್ಯಾದ ಹತ್ಯೆ ನಡೆದಿದೆ. ಇಂತಹದೊಂದು ಅಮಾನವೀಯ ಕೃತ್ಯ ನಡೆದಿರೋದು ಭೀಮಾತೀರದಲ್ಲಿ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಸಲಾದಹಳ್ಳಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಬಸವರಾಜ್ ಮಡಿವಾಳಪ್ಪ ಬಡಿಗೇರ್ ಎಂಬ ಯುವಕ ದವಾಲಬಿ. ಬಂದಗಿಸಾಬ ತಂಬಡ. ಎಂಬ ಯುವತಿಯ ಜೊತೆ ಪ್ರೀತಿ ಮಾಡುತ್ತಿದ್ದರು. ಇಬ್ಬರೂ ಯುವಕ-ಯುವತಿಯರು ಕಬ್ಬಿನ ತೋಟದಲ್ಲಿ ಭೇಟಿಯಾಗಿ ಮಾತನಾಡುತ್ತಿರುವಾಗ ಅದನ್ನು ನೋಡಿದ ಅಪರಿಚಿತ
ಮಂಗಳೂರು: ಕ್ ಡೌನ್ ಅವಧಿಯಲ್ಲಿ ಜನ ಸಾಮಾನ್ಯರಿಗೆ ಅನ್ನ ಕೊಡಲಿಲ್ಲ, ಅಕ್ಕಿ ಕೊಡಲಿಲ್ಲ, ಬೇಳೆ ಕೊಡಲಿಲ್ಲ, ನಮ್ಮ ಮಕ್ಕಳ ಶಾಲಾ ಫೀಸು ಕೊಡಲಿಲ್ಲ, ಬ್ಯಾಂಕಿಗೆ ಕಟ್ಟಬೇಕಾದ ಸಾಲದ ಕಂತನ್ನು ಬಿಡದೆ ವಸೂಲಿ ಮಾಡಿದಿರಿ, ಈಗ ಕನಿಷ್ಟ ಈ ಮೂರು ತಿಂಗಳ ಅವಧಿಯ ವಿದ್ಯುತ್ ಬಿಲ್ , ನೀರಿನ ಬಿಲ್ಲನ್ನಾದರೂ ಮನ್ನ ಮಾಡಬೇಕೆಂದು ಡಿವೈಎಫ್ಐ ರಾಜ್ಯಾದ್ಯಕ್ಷರಾದ ಮುನೀರ್ ಕಾಟಿಪಳ್ಳ ನಿನ್ನೆ ಡಿವೈಎಫ್ಐ ರಾಜ್ಯಾದ್ಯಂತ ವಿದ್ಯುತ್ ದರ ಏರಿಕೆಯನ್ನು ವಿರೋಧಿಸಿ ಹಾಗೂ ಮೂರು ತಿಂಗಳ
ಹೆಜಮಾಡಿಯ ನದಿ ಹಾಗೂ ಸಮುದ್ರ ಒಂದಾಗುವ ಅಳುವೆ ಬಾಗಿಲಿಗೆ ಮೀನುಗಾರಿಕೆಗೆ ತೆರಳಿದ ಮೀನುಗಾರರೋರ್ವರು ಸಮುದ್ರದ ಬೃಹತ್ ಅಲೆಯ ದಾಳಿಗೆ ತುತ್ತಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಮೃತರು ಹೆಜಮಾಡಿ ಕೋಡಿ ಮಾನಂಪಾಡಿ ನಿವಾಸಿ ಜಯಂತ್ (51).ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ಹೊಂದಿದ್ದ ಇವರು ಮುಂಜಾನೆ ತೀರ ಮೀನುಗಾರಿಕೆ ನಡೆಸುವುದಕ್ಕಾಗಿ ಅಳವೆ ಪ್ರದೇಶಕ್ಕೆ ತೆರಳಿದಾಗ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಬಂದ ಪಡುಬಿದ್ರಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು,
ಜಪ್ಪಿನಮೊಗರು ಗ್ರಾಮದ ಕೊಪ್ಪರಿಗುತ್ತು ಎಂಬಲ್ಲಿ ಸಾಕು ದನಗಳನ್ನು ಹೊರಗಡೆ ಕಟ್ಟಿ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಗಿ ತಂದೆಯೇ ತನ್ನ ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎನ್ನುವ ಘಟನೆ ನಡೆದಿದೆ. ಕೊಪ್ಪರಿಗೆಗುತ್ತು ನಿವಾಸಿ ಆರೋಪಿ ವಿಶ್ವನಾಥ ಶೆಟ್ಟಿ (52) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸ್ವಾಮೀತ್ ಶೆಟ್ಟಿ (25) ಸುಟ್ಟ ಗಾಯಗೊಂದಿಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸಾಕುದನಗಳನ್ನು ಹೊರಗಡೆ ಕಟ್ಟಿಹಾಕಿದ್ದ ಬಗ್ಗೆ


















