Home Archive by category Fresh News (Page 96)

🛑ಉರುಳಿದ 80 ವರುಷಗಳ ಬಿಬಿಎಂಪಿ ಶಾಲೆ

ಬೆಂಗಳೂರು ಶಿವಾಜಿನಗರದ ಕುಕ್ಸ್ ರಸ್ತೆಯ ಬಿ ಅಡ್ಡ ರಸ್ತೆಯ ಬಿಬಿಎಂಪಿ ನರ್ಸರಿ ಶಾಲೆ ಮಧ್ಯ ರಾತ್ರಿ ಬಿದ್ದು ಹೋಗಿದೆ. ಮಕ್ಕಳಾಗಲಿ, ಜನರಿಗಾಗಲಿ ಅಪಾಯವಾಗಿಲ್ಲ ಎಂಬುದು ಸಮಾಧಾನಕರ. 80 ವರ್ಷಗಳಷ್ಟು ಹಳೆಯ ಈ ಶಾಲೆಯಲ್ಲಿ ವ 80ರಷ್ಟು ಮಕ್ಕಳು ಇದ್ದರು. ಶಾಲೆಯ ಎಲ್ಲ, ಪರಿಕರ, ಮಕ್ಕಳ ಆಟದ ಸಾಮಾನುಗಳು ಮಾತ್ರವಲ್ಲ ಅಕ್ಕಪಕ್ಕಗಳಲ್ಲಿ ನಿಲ್ಲಿಸಿದ್ದ ಹಲವು ವಾಹನಗಳು

ವಿಚಿತ್ರ ತಿರುವು ಪಡೆಯುವ ಊರಿನ ಹೆಸರುಗಳು

ಭತ್ತ ಅನ್ನಕ್ಕೆಂದು ಪಿಡಿದರೆ ಬಾಳೆ ಹಣ್ಣದು ಆಯ್ತು ದೈವವೆ! ಮಂಗಳೂರಿನಲ್ಲಿ ಒಂದು ಬಾಳೆ ಬಯ್ಲು (ಬಯಲು) ಇದೆ. ಈ ಭತ್ತ ಬೆಳೆಯುವ ತುಳು ಜಾಗದ ನೆಲದ ಹೆಸರು ಬದಲಾದುದು ಬರೇ ಶತಮಾನದ ಕತೆ. ಬಾರ ಬಯ್ಲ್ ಎಂದರೆ ಭತ್ತದ ಬಯಲು. ರಾಷ್ಟ್ರೀಯ ಹೆದ್ದಾರಿ ಮಾಜೀ 17 ಹಾಲಿ 66 ಇದರ ನಡುವೆ ಹೋಗಿ, ಈಗ ಇಲ್ಲಿ ಕಟ್ಟಡಗಳು ಬೆಳೆದಿವೆ. ತುಳು ಕನ್ನಡದಲ್ಲಿ ರ ಳ ಲ ಬದಲಾವಣೆ ಬಹಳ ಇವೆ. ತುಳು ಶಬ್ದಗಳಾದ ಕೋರಿ, ಕೆರು, ತರೆ, […]

ಮಂಗಳೂರಿನಲ್ಲಿ `ಕ್ರಿಸ್ತ ಜಯಂತಿ ಜುಬಿಲಿ ಸಂಭ್ರಮಾಚರಣೆ

ಜಗತ್ತಿನಾದ್ಯಂತ ಕ್ರೈಸ್ತ ಧರ್ಮಸಭೆಯಲ್ಲಿ ಯೇಸು ಕ್ರಿಸ್ತರ ಜನನದ 2025 ವರ್ಷಗಳ ಸ್ಮರಣಾರ್ಥ `ಕ್ರಿಸ್ತ ಜಯಂತಿ ಜುಬಿಲಿ2025′ ಸಂಭ್ರಮಾಚರಣೆಯ ಪೂರ್ವ ಸಿದ್ಧತೆಗಳು ನಡೆಯುತ್ತಿದ್ದು, ಮಂಗಳೂರಿನ ರೋಮನ್ ಕೆಥೊಲಿಕ್ ಧರ್ಮಕ್ಷೇತ್ರದಲ್ಲೂ ಎರಡು ವರ್ಷಗಳ ಪೂರ್ವ ತಯಾರಿಗಳಿಗೆ ಬಿಷಪ್ ಅ.ವಂ. ಡಾ.ಪೀಟರ್ ಪಾವ್ಲ್ ಸಲ್ಡಾನ ಚಾಲನೆ ನೀಡಿದರು. ನಗರದ ಹೋಲಿ ರೋಜರಿ ಕೆಥೆಡ್ರಲ್‍ನಲ್ಲಿ `ಭರವಸೆಯ ಯಾತ್ರಿಕರು’ ಎಂಬ ಧ್ಯೇಯವನ್ನು ಒಳಗೊಂಡ ಜುಬಿಲಿ ಲಾಂಛನದ

ಸಿಎಂ ಅಪರ ಮುಖ್ಯ ಕಾರ್ಯದರ್ಶಿಯಾಗಿ ಎಲ್.ಕೆ ಅತೀಖ್ ನೇಮಕ

ರಾಜ್ಯ ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಎಲ್ ಕೆ ಅತೀಖ್ ಅವರನ್ನು ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿಯಾಗಿ ತಕ್ಷಣ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಈವರೆಗೆ ಆ ಹುದ್ದೆಯಲ್ಲಿದ್ದ ಡಾ. ರಜನೀಶ್ ಗೋಯಲ್ ಅವರನ್ನು ಆ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಎಲ್ ಕೆ ಅತೀಖ್ ಅವರು ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿಯೂ ಮುಂದಿನ ಆದೇಶದವರೆಗೆ ಹೆಚ್ಚುವರಿ ಹೊಣೆ ನಿರ್ವಹಿಸಲಿದ್ದಾರೆ.

ಕಾಂತಾರ ಚಾಪ್ಟರ್-1 ಫಸ್ಟ್ ಲುಕ್, ಟೀಸರ್ ಬಿಡುಗಡೆ

ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾದ ಪ್ರೀಕ್ವೆಲ್ ಕಾಂತಾರ ಚಾಪ್ಟರ್ ಫಸ್ಟ್ ಲುಕ್ ಹಾಗೂ ಟೀಸರ್ ಬಿಡುಗಡೆಯಾಗಿದೆ. ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಬಂಗಾಳಿ ಭಾಷೆಯಲ್ಲಿ ಬಿಡುಗಡೆಯಾಗಿದ್ದು ಹೊಂಬಾಳೆ ಫಿಲ್ಮ್ಸ್ ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದೆ. ಯುಟ್ಯೂಬ್‍ನಲ್ಲಿ ಟೀಸರ್ ಬಿಡುಗಡೆಯಾಗಿದ್ದು ಕಾಂತಾರ ಪ್ರೀಕ್ವೆಲ್ ಕತೆ ಕದಂಬರ ಕಾಲಕ್ಕೆ ಕರೆದುಕೊಂಡು ಹೋಗಲಿದೆ ಎಂದು

ಕೊಟ್ಟಾರಚೌಕಿ ಸರ್ಕಲ್‍ಗೆ ವೀರಯೋಧ ಕ್ಯಾಪ್ಟನ್ ಪ್ರಾಂಜಲ್ ಹೆಸರು

ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗೆ ಹೋರಾಡಿ ದೇಶಕ್ಕಾಗಿ ತನ್ನ ಪ್ರಾಣವನ್ನೇ ಬಲಿದಾನಗೈದ ಕರುನಾಡಿನ ವೀರಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಹೆಸರನ್ನು ಹೆದ್ದಾರಿ ಮತ್ತು ನಗರ ಸಂಪರ್ಕಿಸುವ ಕೊಟ್ಟಾರಚೌಕಿ ಜಂಕ್ಷನ್ ಸರ್ಕಲ್‍ಗೆ ಇಡಲಾಗುವುದು ಎಂದು ಶಾಸಕ ಭರತ್ ಶೆಟ್ಟಿ ತಿಳಿಸಿದ್ದಾರೆ. ಕೊಟ್ಟಾರಚೌಕಿಯಲ್ಲಿ ಅಮರ್ ಜವಾನ್ ಥೀಮ್ ಪಾರ್ಕ್ ನಿರ್ಮಾಣವಾಗಲಿದೆ. ಇದರ ಜೊತೆಗೆ ಮಂಗಳೂರಿನಲ್ಲಿ ಕಲಿತು, ಬೆಳೆದು ಅವಿನಾಭಾವ ಸಂಬಂಧ ಹೊಂದಿರುವ ಕ್ಯಾ. ಪ್ರಾಂಜಲ್

ಬೆಂಗಳೂರು ಕಂಬಳದಲ್ಲಿ ಕಾಂತಾರ ಕೋಣಕ್ಕೆ ಚಿನ್ನದ ಪದಕ

ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರದಲ್ಲಿ ಬಳಸಿಕೊಂಡಿದ್ದ ಕೋಣಗಳು ಚಿನ್ನದ ಪದಕಕ್ಕೆ ಭಾಜನವಾಗಿದೆ. ಬೆಂಗಳೂರು ಕಂಬಳದಲ್ಲಿ ಬೈಂದೂರಿನ ಕೋಣ ಪ್ರಥಮ ಚಿನ್ನ ಗೆದ್ದ ಕೋಣ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದೆ. ಬೊಳಂಬೆಳ್ಳದ ಪರಮೇಶ್ವರ ಭಟ್ ಮಾಲೀಕತ್ವದ ಕೋಣಗಳು 6.5 ಕೋಲು ನೀರು ಎತ್ತರಕ್ಕೆ ನೀರು ಚಿಮ್ಮಿಸಿ ಚಿನ್ನದ ಪಡೆದಿವೆ. ಬಾನೆತ್ತರಕ್ಕೆ ನೀರು ಚಿಮ್ಮಿಸುತ್ತಾ ಈ ಕೋಣಗಳ ಓಟ ನೋಡುಗರ ಮೈನವಿರೇಳಿಸುವಂತಿತ್ತು. ಈ ಕುರಿತು ಕೋಣಗಳ ಮಾಲೀಕರು

ಪಡುಬಿದ್ರಿ: ಆದ್ಯಾ ಫೌಂಡೇಷನ್ ವತಿಯಿಂದ ಉದ್ಯೋಗ ಮೇಳ

ನಿರಂತರ ಸಮಜೋಮುಖಿ ಕಾರ್ಯಗಳನ್ನೇ ತನ್ನ ಉಸಿರಾಗಿಸಿಕೊಂಡ ಪಡುಬಿದ್ರಿಯ ಆದ್ಯಾ ಫೌಂಡೇಷನ್ ವತಿಯಿಂದ ಎರಡು ದಿನಗಳ ಬೃಹತ್ ಉದ್ಯೋಗ ಮೇಳ ಪಡುಬಿದ್ರಿ ಪಾದೆಬೆಟ್ಟು ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಈ ಉದ್ಯೋಗ ಮೇಳದ ಉದ್ಘಾಟನೆಯನ್ನು ಸರಳ ಸಭಾ ಕಾರ್ಯಕ್ರಮದಲ್ಲಿ ಸ್ಥಳೀಯ ಪಾದೆಬೆಟ್ಟು ಸುಬ್ರಹ್ಮಣ್ಯ ದೇವಸ್ಥಾನ ಮುಕ್ತೇಸರರಾದ ಜೀತೇಂದ್ರ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ವಿವಿಧ ಉದ್ಯೋಗ ಆಕಾಂಕ್ಷೀ ಗಳಿಗಾಗಿ ರಾಕೇಶ್ ಅಜಿಲ ಸಾರಥ್ಯದ ಆದ್ಯಾ

ಎಲ್ಲಿಯ ಗಾಜನೂರು, ಎಲ್ಲಿಯ ಪೇರೂರು ಸಂಬಂಧ

ವರನಟ ಡಾ. ರಾಜ್‌ಕುಮಾರ್ ಅವರ ಹುಟ್ಟೂರು ಗಾಜನೂರಿಗೂ, ಜಾರ್‌ಕುಮಾರ್ ಅವರ ಪೇರೂರು ಗ್ರಾಮಕ್ಕೂ ಏನು ಸಂಬಂಧ? ಈ ಪ್ರಶ್ನೆ ಹಲವರ ಹುಬ್ಬೇರಿಸಬಹುದು. ಪೇರೂರು ಪೆರಿಯ ಊರು. ಪೆರಿಯ ಪಿರಿಯ ಪ್ರಾಯದ ಹಳೆಯ ಊರು. ಹಾಗಾಗಿ ತೆಂಕಣ ಭಾರತದ ಇನ್ನೂರಕ್ಕೂ ಹೆಚ್ಚು ಪೇರೂರು (ಕನ್ನಾಡಿನ ಕೆಲವೆಡೆ ಹೇರೂರು ಆಗಿದೆ) ಗ್ರಾಮಗಳು ನದಿಯ ದಡಗಳಲ್ಲಿಯೇ ಇವೆ.ಗಾಜನೂರುಗಳು ಕೂಡ ಹಲವು ಇದ್ದು ಅವು ಕೂಡ ನದಿ ತೊರೆಯ ನೆರೆಯ ಊರುಗಳಾಗಿವೆ. ಗಾಜಿನ ಬಳೆ ತಯಾರಿಸುತ್ತಿದ್ದ ಊರುಗಳು

ಕುಂದಾಪುರ: ಬಿಲ್ಲವ ಸಮುದಾಯದಲ್ಲಿ ಒಗ್ಗಟ್ಟಿಲ್ಲ: ರವಿಕುಮಾರ್ ಎಚ್. ಆರ್ ಕಳವಳ

ಕುಂದಾಪುರ: ಸಾಕಷ್ಟು ಬಲಿಷ್ಠವಾಗಿದ್ದ ಬಿಲ್ಲವ ಸಮಾಜ 26 ಉಪಪಂಗಡಗಳಾಗಿ ಹರಿದು ಹಂಚಿ ಹೋಗಿದೆ. ಎಲ್ಲರೂ ಒಗ್ಗೂಡಿದರೆ ನಾವು ಇಡೀ ರಾಜ್ಯವನ್ನೇ ಆಳಬಹುದು. ಆದರೆ ನಮ್ಮಲ್ಲಿ ಒಗ್ಗಟ್ಟಿಲ್ಲ ಎಂದು ಶ್ರೀ ಕ್ಷೇತ್ರ ಸಿಗಂಧೂರು ಚೌಡೇಶ್ವರಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್. ಆರ್ ಕಳವಳ ವ್ಯಕ್ತಪಡಿಸಿದರು. ನಗರದ ನಾರಾಯಣ ಗುರು ಸಭಾಭವನದಲ್ಲಿ ಜರುಗಿದ ಬಿಲ್ಲವ ಸಮಾಜ ಸೇವಾ ಸಂಘ (ರಿ) ಕುಂದಾಪುರ ಇದರ 31 ನೇ ವರ್ಷದ ವಿದ್ಯಾರ್ಥಿವೇತನ ವಿತರಣೆ ಮತ್ತು