Home Archive by category Fresh News (Page 98)

ಕರಾವಳಿ ಜಿಲ್ಲೆಯಾದ್ಯಂತ “ರಾಪಟ” ಅದ್ಧೂರಿ ಬಿಡುಗಡೆ

ಮಂಗಳೂರು: ಬೊಳ್ಳಿ ಮೂವೀಸ್ ಹಾಗೂ ಅವಿಕಾ ಪ್ರೊಡಕ್ಷನ್ಸ್ ನಿರ್ಮಾಣದ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು, ಅರ್ಜುನ್ ಕಾಪಿಕಾಡ್ ನಿರ್ದೇಶನದ ಚೊಚ್ಚಲ ಸಿನಿಮಾ ರಾಪಟ ಶುಕ್ರವಾರ ಮುಂಜಾನೆ ಕರಾಳಿಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಗೊಂಡಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತಾಡಿದ ಡಾ.

ಕಾರ್ಕಳ: ಜ.18ರಿಂದ 22ರ ವರೆಗೆ ಆನೆಕೆರೆ ಚತುರ್ಮುಖ ಕೆರೆ ಬಸದಿ ಪಂಚ ಕಲ್ಯಾಣ ಮಹೋತ್ಸವ

ಕಾರ್ಕಳ: ಚತುರ್ಮುಖ ಕೆರೆ ಬಸದಿ ಜೀರ್ಣೋದ್ಧಾರ ಸಮಿತಿ ಇವರ ವತಿಯಿಂದ ಜನವರಿ 18ರಿಂದ ಜ.22ವರೆಗೆ ಜರಗುವ ಪಂಚಕಲ್ಯಾಣ ಮಹೋತ್ಸವ ಪೂರ್ವಭಾವಿಯಾಗಿ ಇಂದು ಆನೆಕೆರೆ ಚತುರ್ಮುಖ ಕೆರೆ ಬಸದಿ ಬಳಿ ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಕಳ ಶಾಸಕರಾದ ವಿ ಸುನಿಲ್ ಕುಮಾರ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಆನೆಕೆರೆ ಚತುರ್ಮುಖ ಕೆರೆ ಬಸದಿ ಅತ್ಯಂತ ಪವಿತ್ರವಾದ ಸ್ಥಳ ಈ ಬಸದಿಗಳನ್ನು ನೋಡಲು ದೇಶದ ಹಲವಾರು ಕಡೆಯಿಂದ

ಪುತ್ತೂರು: ಕೆದಂಬಾಡಿಯಲ್ಲಿ ಆರಂಭಿಸಲುದ್ದೇಶಿಸಿದ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಮತ್ತೆ ಗ್ರಹಣ..!!

ಪುತ್ತೂರು ಕಡಬ ಮತ್ತು ಸುಳ್ಯ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಸಂಗ್ರಹವಾಗುವ ತ್ಯಾಜ್ಯಗಳ ನಿರ್ವಹಣೆ ಸಮಸ್ಯೆಗೊಂದು ಶಾಶ್ವತವಾದ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಳೋಡಿ ಎಂಬಲ್ಲಿ ಆರಂಭಿಸಲುದ್ದೇಶಿಸಿರುವ 5 ಟನ್ ಸಾಮರ್ಥ್ಯದ ಸಮಗ್ರ ಒಣ ತ್ಯಾಜ್ಯ ನಿರ್ವಹಣಾ ಘಟಕ (ಎಂಆರ್‍ಎಫ್) ಬಹುತೇಕ ಕಾಮಗಾರಿ 6 ತಿಂಗಳ ಹಿಂದೆಯೇ ಪೂರ್ಣಗೊಂಡಿದ್ದರೂ, ಕೊನೆ ಹಂತದ ವ್ಯವಸ್ಥೆಗೆ ಗ್ರಹಣ ಆವರಿಸಿದೆ.

Mangaluru ; ಪಂಚಾಯತ್ ಮಟ್ಟದ ಪುಸ್ತಕ ದಾಖಲೆ ಇಡುವವರಿಂದ ಪ್ರತಿಭಟನೆ

ಮಂಗಳೂರಿನ ಗಡಿಯಾರ ಗೋಪುರದ ಎದುರು ಪಂಚಾಯತ್ ಮಟ್ಟದ ಬುಕ್ ಕೀಪಿಂಗ್ ಕೆಲಸ ಮಾಡುವ ಮಹಿಳೆಯರು ಸಿಪಿಎಂ ಸಂಘಟನೆಯ ಮೂಲಕ ಪ್ರತಿಭಟನೆ ಮಾಡಿದರು. ಸಿಪಿಎಂ ನಾಯಕ ಸುನಿಲ್ ಕುಮಾರ್ ಬಜಾಲ್ ಅವರು ಹೋರಾಟದ ಅಗತ್ಯದ ಬಗೆಗೆ ಮಾತನಾಡಿದರು. ಬುಕ್ ಕೀಪಿಂಗ್ ಮಹಿಳೆಯರಿಗೆ ಪಂಚಾಯತ್ ಮಟ್ಟದಿಂದ ಮೂರರಿಂದ ಐದು ಸಾವಿರ ಮಾತ್ರ ಸಂಬಳ ಕೊಡುತ್ತಿದ್ದಾರೆ. ಇದು ಕೆಲವರ ಸಾರಿಗೆ ವೆಚ್ಚ ಕೂಡ ಆಗುವುದಿಲ್ಲ. ಕನಿಷ್ಠ ಹತ್ತು ಸಾವಿರ ಸಂಬಳ ಕೊಡತಕ್ಕದ್ದು ಎಂದು ಪ್ರತಿಭಟನಾಕಾರರು ಒತ್ತಾಯ

ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಅಸ್ಮಿತಾಯ್

ಮಾಂಡ್ ಸೊಭಾಣ್ ನಿರ್ಮಾಣದ ಅಸ್ಮಿತಾಯ್’ ಕೊಂಕಣಿ ಚಲನಚಿತ್ರವು ಅಮೇರಿಕಾದ ವಾಷಿಂಗ್ಟನ್ ಡಿಸಿಯಲ್ಲಿ ನಡೆಯುವ, ಡಿಸಿ ಸೌತ್ ಏಶಿಯನ್ ಫಿಲ್ಮ್ ಫೆಸ್ಟಿವಲಲ್ಲಿ, 2023 ಡಿಸೆಂಬರ್ 02 ರಂದು ಪೂರ್ವಾಹ್ನ 11.00 ಗಂಟೆಗೆ, ಎ ಎಮ್ ಸಿ ಥಿಯೆಟರ್ ನಲ್ಲಿ ಪ್ರದರ್ಶನಗೊಳ್ಳಲಿದೆ. ಸೆಪ್ಟೆಂಬರ್ 15 ರಂದು ತೆರೆಗೆ ಬಂದ ಅಸ್ಮಿತಾಯ್ ಚಲನಚಿತ್ರದ 400ಕ್ಕೂ ಮಿಕ್ಕಿ ದೇಖಾವೆಗಳು ನಡೆದಿದ್ದು, ಇದುವರೆಗೆ ವಿಶ್ವದಾದ್ಯಂತ 13 ದೇಶಗಳಲ್ಲಿ ಪ್ರದರ್ಶನಗೊಂಡಿದೆ. ಕೊಂಕಣಿ ಚಲನಚಿತ್ರ

ಬರ ಪರಿಹಾರ, ಉದ್ಯೋಗ ಖಾತರಿ ಬಿಜೆಪಿ ತಾರಮ್ಮಯ್ಯ : ನಮ್ಮ ತೆರಿಗೆ ಪಾಲು ನೀಡಲು ಕೇಂದ್ರ ಸರಕಾರದ ಕ್ಯಾತೆ

ಈ ಮಳೆಗಾಲ ಸರಿಯಾಗಿರದೆ ಕರ್ನಾಟಕದ 223 ತಾಲೂಕುಗಳು ಬರಪೀಡಿತ. ಸೋಮಾರಿ ಕೇಂದ್ರ ಸರಕಾರ ಪರಿಹಾರ ಪರಿಗಣನೆಗೆ ತೆಗೆದುಕೊಂಡಿಲ್ಲ. ಸದ್ಯ ಬಾಧಿತ ರೈತರಿಗೆ ರೂಪಾಯಿ 2,000ದಷ್ಟಾದರೂ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮನೆಕಚೇರಿ ಕೃಷ್ಣದಲ್ಲಿ ಅವರು ಮಂತ್ರಿ ಮತ್ತು ಅಧಿಕಾರಿಗಳ ಸಭೆ ನಡೆಸಿ ಈ ಸೂಚನೆ ನೀಡಿದರು. ಕೇಂದ್ರ ಸರಕಾರವು ತನ್ನ ಕಿಸೆಯಿಂದ ಪರಿಹಾರ ನೀಡುವುದಿಲ್ಲ. ರಾಜ್ಯದ ತೆರಿಗೆ ಪಾಲು ನೀಡದೆ ಬಾಕಿ

ಬಿಸಿ ಮಟ್ಟದಿಂದಾಗಿ ಜಗತ್ತು ಹತಾಶೆ, ವಿನಾಶದತ್ತ ಸಾಗಿದೆ

2023ರಲ್ಲಿ ಜಗತ್ತಿನ ತಾಪಮಾನವು ಜಾಗತಿಕ ದಾಖಲೆ ಬರೆದಿದೆ. ಅತಿರೇಕದ ಹವಾಮಾನದ ವೈಪರೀತ್ಯಗಳು ಲೋಕವನ್ನು ವಿನಾಶ ಮತ್ತು ಹತಾಶೆಗೆ ದೂಡಿದೆ ಎಂದು ವಿಶ್ವ ಸಂಸ್ಥೆಯ ಹವಾಮಾನ ವಿಭಾಗದ ಮುಖ್ಯಸ್ಥ ಪ್ಯಾಟೆರಿ ಟಾಲನ್ ಹೇಳಿದರು. 2023ರಲ್ಲಿ ಪ್ರಪಂಚದ ಬಿಸಿ ಮಟ್ಟವು ಹಿಂದಿನೆಲ್ಲ ದಾಖಲೆಗಳನ್ನು ಮುರಿದಿದೆ. ಹಸಿರು ಮನೆ ಅನಿಲದ ಪ್ರಮಾಣ ಅತಿಯಾಗಿದೆ. ಅಂಟಾರ್ಕ್ಟಿಕ್‌‌ನಲ್ಲಿ ಹೊಸದಾಗಿ ಬೀಳುವ ಮಂಜು ಪ್ರಮಾಣ ತೀರಾ ಕಡಿಮೆ ಆಗಿದೆ. ಕಳೆದ 9 ವರುಷಗಳಿಂದ ಬಿಸಿ ಮಟ್ಟ ಏರುತ್ತ

ಜೀವನಬಿಮಾ ನಗರ ಭೀಮ ಆಗಿದ್ದು ಎಂತು?

ಬೆಂಗಳೂರಿನ ದೊಮ್ಮಲೂರಿನ ಜೀವನಭೀಮನಗರಕ್ಕೆ ಹೋಗುಬ ಬಸ್ಸು ನೋಡಿರುತ್ತೀರಿ. ಹೆಸರು ಹಲಗೆ, ಬಾಯಿ ಮಾತಲ್ಲೂ ಜೀವನಭೀಮನಗರ ಕೇಳಿರುತ್ತೀರಿ. ಆದರೆ ಇದು ಜೀವನಬಿಮಾ ನಗರ. ನಾವು ವಿಮೆ ಎನ್ನುವುದೇ ಬಡಗಣ ಭಾರತದ ಬಿಮಾ. ಪೀಣ್ಯದಲ್ಲಿ ಎಂಟನೆಯ ಮೈಲಿ ಇದೆ. ಬಿಎಂಟಿಸಿ ಕನ್ನಡದಲ್ಲಿ ಮೈಲಿ ಎಂದು ಸರಿ ತೋರಿಸಿದರೂ ಇಂಗ್ಲಿಷಿನಲ್ಲಿ mile ಬದಲು ಮೇಲ್ (mail) ಎಂದು ತಪ್ಪು ತೋರಿಸುತ್ತದೆ.ಬೆಂಗಳೂರಿನ ಸಾಲು ಐಯ್ಯಂಗಾರ್ ತಪ್ಪು ಫಲಕಗಳಿಗೆ ಜೊತೆಯಾಗಿ ಕೆಲವು ಐಯ್ಯರ್ ಮೆಸ್

ಖ್ಯಾತ ಗಾಯಕ ಪದ್ಮಶ್ರೀ ಪುರಸ್ಕೃತ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ “ಡಾ. ಕದ್ರಿ ಗೋಪಾಲನಾಥ್ ಜೀವಮಾನ ಸಾಧನೆ ಪ್ರಶಸ್ತಿ 2023”

ಅಂತರಾಷ್ಟ್ರೀಯ ಖ್ಯಾತಿಯ ಸ್ಯಾಕ್ಸೋಫೋನ್ ಕಲಾವಿದರಾದ ಪದ್ಮಶ್ರೀ ಪುರಸ್ಕೃತ ಡಾ.ಕದ್ರಿ ಗೋಪಾಲನಾಥ್ ರವರ ಹೆಸರಿನಲ್ಲಿ ನಡೆಯುತ್ತಿರುವ “ಡಾ. ಕದ್ರಿ ಗೋಪಾಲನಾಥ್ ಅಕಾಡೆಮಿ ಫಾರ್ ಆರ್ಟ್ಸ್ (ರಿ)” ವತಿಯಿಂದ ದಿನಾಂಕ : 23.12.2023 ರಂದು ” ಕದ್ರಿ ಸಂಗೀತ ಸೌರಭ 2023″ ಕಾರ್ಯಕ್ರಮವನ್ನು ಡಾ. ಬಿ.ಆರ್. ಅಂಬೇಡ್ಕರ್ ಭವನ, ಉರ್ವ ಸ್ಟೋರ್ಸ್, ಮಂಗಳೂರು ಇಲ್ಲಿ ಆಯೋಜನೆ ಮಾಡಲಾಗಿದೆ. ಅಂದು ಬೆಳಗ್ಗಿನಿಂದ ಉದಯೋನ್ಮುಖ ಕಲಾವಿದರಿಗೆ ವೇದಿಕೆ,

ಮಂಗಳೂರು: ಡಿ.24 ಮತ್ತು 25 ರಂದು ಕೃಷ್ಣಾಪುರದಲ್ಲಿ ಕ್ರಿಕೆಟ್ ಗ್ರೂಪ್ ಹಬ್ಬ

ಕ್ರಿಕೆಟ್ ಗ್ರೂಪ್‌ನ 6ನೇ ವಾರ್ಷಿಕೋತ್ಸವದ ಅಂಗವಾಗಿ ಕ್ರಿಕೆಟ್ ಗ್ರೂಪ್ ಹಬ್ಬ ಎನ್ನುವ ಲೀಗ್ ಮಾದರಿಯ ಪಂದ್ಯಾಕೂಟವು ಡಿ.24 ಮತ್ತು 25 ರಂದು ಕೃಷ್ಣಾಪುರ ಶಾಲಾ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಾಟದಲ್ಲಿ ಬಿಎಂಆರ್ ಸ್ಟ್ರೈಕರ್‍ಸ್, ರೂಫ್‌ಟೆಕ್, ಕೆಕೆಆರ್ ಕೃಷ್ಣಾಪುರ, ಟ್ರೆಸ್ಕಾನ್, ಜಿ ಗೈಸ್, ಟೀಮ್, ಫಿಫ್ತ್ ಲೆವೆಲ್ ಹೀಗೆ 6 ಮಾಲಕರ ತಂಡದ ಕ್ರಿಕೆಟ್ ಗ್ರೂಪಿನ ಸದಸ್ಯರಿಗೆ ಮಾತ್ರ ಅವಕಾಶವಿದ್ದು, ಪಂದ್ಯಾಟದಲ್ಲಿ ಮ್ಯಾನ್ ಆಫ್ ದ ಮ್ಯಾಚ್, ಮ್ಯಾನ್ ಆಫ್