ಪ್ರಧಾನಿ ಮೋದಿಯವರದು ಮಾತು ಮಾತ್ರ ಎಂದು ತಿಳಿದ ಬಳಿಕ ಕಳೆದ ತಿಂಗಳು ಕಾಶ್ಮೀರದ ಪಂಡಿತರ ಸಂಘಟನೆಯವರು ಕಾಂಗ್ರೆಸ್ಸಿಗೆ ಸೇರಿದರು. ಮಾಹಿತಿ ಹಕ್ಕಿನಡಿ ಶ್ರೀನಗರದ ಎಸ್‍ಪಿ ಕಚೇರಿ ನೀಡಿರುವ ಲೆಕ್ಕದಂತೆ ಕೊಲೆಯಾದ ಪಂಡಿತರ ಸಂಖ್ಯೆ 89 ಹಾಗೂ ಕೊಲೆಯಾದ ಇತರರ ಸಂಖ್ಯೆ 1,635. ಕಾಶ್ಮೀರಿ ಪಂಡಿತರ ಕೊಲೆ ನಡೆದುದು 1990ರ ಜನವರಿ ಫೆಬ್ರವರಿಯಲ್ಲಿ. ಆಗ ರಾಷ್ಟ್ರಪತಿ ಆಡಳಿತ
ಕೊಕ್ಕಡದ ಶಿಬಾಜೆ ಗ್ರಾಮದ ಅಜಿರಡ್ಕ ಶ್ರೀಧರ ರಾವ್ ರವರ ತೋಟಕ್ಕೆ ತಡರಾತ್ರಿ ಕಾಡಾನೆ ದಾಳಿ ಮಾಡಿ ಪಸಲಿಗೆ ಬರುವ ತೆಂಗಿನ ಗಿಡ, ಕೊಕ್ಕೋ ಗಿಡ, ಬಾಳೆಗಿಡ ಅಪಾರ ಪ್ರಮಾಣದಲ್ಲಿ ನಾಶ ಮಾಡಿದೆ. ಈ ಹಿಂದೆಯೂ ಇವರ ತೋಟಕ್ಕೆ ಧಾಳಿ ಮಾಡಿದ್ದು ಕೃಷಿ ಹಾನಿ ಉಂಟು ಮಾಡಿತ್ತು, ಮೇ 6ರಂದು ಶಿಶಿಲ ಗ್ರಾಮದ ಕಳ್ಳಾಜೆ ದಿವಾಕರ ಗೌಡ ಇವರ ತೋಟಕ್ಕೂ ಧಾಳಿ ಮಾಡಿರುವ ಬಗ್ಗೆ ಮಾಹಿತಿ ಲಭಿಸಿದೆ. ವರದಿ: ಪ್ರಶಾಂತ್ ನೆಲ್ಯಾಡಿ
ಸುಳ್ಯ: ಪುನಃ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಮುಳುಗೆದ್ದ ಮಂಡೆಕೋಲಿನ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಇದೀಗ ವಾರ್ಷಿಕ ಜಾತ್ರೋತ್ಸವಕ್ಕೆ ಸಿದ್ಧಗೊಂಡಿದ್ದು ಗುರುವಾರ ಬೆಳಿಗ್ಗೆ ಕ್ಷೇತ್ರದಲ್ಲಿ ದರ್ಶನಬಲಿ ಉತ್ಸವ ನಡೆಯಿತು. ದೇವರ ವಿಗ್ರಹ ಹೊತ್ತ ಪ್ರಸಾದ ಅಡಿಗರು ದರ್ಶನ ಬಲಿ ಉತ್ಸವದ ವಿಧಿ ವಿಧಾನಗಳನ್ನು ನೆರವೇರಿಸಿದರು.ದೇಗುಲದ ಪ್ರಧಾನ ಅರ್ಚಕ ಅನಂತಕೃಷ್ಣ ಪಾಂಗಣ್ಣಾಯ ಹಾಗೂ ಇತರ ಅರ್ಚಕರು ಸಹಕರಿಸಿದರು. ಕೊಂಬು, ವಾದ್ಯ, ಚೆಂಡೆ,
ಅಮೆರಿಕ ಸಂಯುಕ್ತ ಸಂಸ್ಥಾನದ ಎಲ್ಲ ವಿಶ್ವವಿದ್ಯಾನಿಲಯಗಳಲ್ಲೂ ಪ್ಯಾಲೆಸ್ತೀನ್ ಬೆಂಬಲಿಸಿ, ಇಸ್ರೇಲ್ ದಾಳಿ ಖಂಡಿಸಿ ಚಳವಳಿ ಮುಂದುವರಿದಿದೆ. ಇಂದು ಸಿಟಿ ಕಾಲೇಜಿನ 300 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ನ್ಯೂಯಾರ್ಕಿನ ಪೋಲೀಸರು ಕೊಲಂಬಿಯಾ ವಿಶ್ವವಿದ್ಯಾನಿಲಯದ ಸಿಟಿ ಕಾಲೇಜಿನ 300 ವಿದ್ಯಾರ್ಥಿಗಳನ್ನು ಗುರುವಾರ ಪ್ರತಿಭಟನೆ ಸಂಘಟಿಸಿದ್ದಕ್ಕಾಗಿ ಬಂಧಿಸಿದರು. ಎಲ್ಲ ವಿವಿ ಕ್ಯಾಂಫಸ್‍ಗಳಲ್ಲೂ ಟೆಂಟ್ ಹಾಕಿ ಪ್ರತಿಭಟನೆ ನಡೆಸುವುದು ವ್ಯಾಪಕಗೊಂಡಿದೆ.
ದುಬಾಯಿಯಲ್ಲಿ ಅಸ್ಥಿರ ಹವಾಮಾನ ಮುಂದುವರಿದಿದ್ದು ಸುರಕ್ಷತೆಯ ದೃಷ್ಟಿಯಿಂದ ನಾಗರಿಕರು ಬೀಚ್‍ಗಳಿಗೆ ಹೋಗದಂತೆ ಮತ್ತು ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ದುಬಾಯಿ ಪೋಲೀಸರು ಎಚ್ಚರಿಕೆ ನೀಡಿದ್ದಾರೆ. ಎಎಇ- ಅರಬ್ ಅಮೀರರ ಎಮಿರೇಟ್ಸ್ ಇನ್ನಷ್ಟು ಹವಾಮಾನ ವೈಪರೀತ್ಯಗಳನ್ನು ಕಾಣಲಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. ಈಗಾಗಲೇ ದುಬಾಯಿಯಲ್ಲಿ ಮಳೆಯಾಗುತ್ತಿದ್ದು, ಅದು ಭಾರೀ ಗಾಳಿ ಮಳೆಯಾಗುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆಯು ಹೇಳಿದೆ. ದೊಡ್ಡ
ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಗ್ರಾಮದೇವರಾದ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ನಡೆಯಿತು. ಶ್ರೀ ಕ್ಷೇತ್ರದಲ್ಲಿ ಏಪ್ರಿಲ್ 13ರಿಂದ ಮೇ 4ರ ವರೆಗೆ ವಿವಿಧ ವೈದಿಕ, ತಾಂತ್ರಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ, ಶ್ರೀ ದೇವರ ಗಂಧ ಮತ್ತು ಅನ್ನ ಪ್ರಸಾದವನ್ನು ಸ್ವೀಕರಿಸಿ ಪುನೀತರಾಗಿದ್ದಾರೆ.
ಗರ್ಭಾವಸ್ಥೆ ಜಗತ್ತಿನ ಎಲ್ಲಾ ಮಹಿಳೆಯರು ಬಯಸುವಂತಾ ಒಂದು ಭಾಗ್ಯ ಮತ್ತು ದೇವರು ಮನುಸಂಕುಲಕ್ಕೆ ನೀಡಿದ ಒಂದು ವರದಾನ. ಸಾಮಾನ್ಯವಾಗಿ ಗರ್ಭಧರಿಸಿದ ಬಳಿಕ ಗರ್ಭಿಣಿ ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಮುಖ್ಯ ಕಾರಣವೆಂದರೆ ಹಾರ್ಮೋನು ವ್ಯತ್ಯಾಸ ಹಾಗೂ ವೈಪರೀತ್ಯ. ಹೆಚ್ಚಿನ ಮಹಿಳೆಯರು ಗರ್ಭಿಣಿಯರಾದಾಗ ರಸದೂತ ಏರಿಳಿತದ ಸ್ರವಿಕೆಯ ಕಾರಣದಿಂದಲೇ ರಕ್ತದೊತ್ತಡ, ಕಾಲಿನ ವಾತ, ಕಾಲಿನಲ್ಲಿ ನೀರು ತುಂಬಿಕೊಳ್ಳುವುದು,
ಬಾಯಿಯ ಒಳಗಿನ ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆದು, ಗಡ್ಡೆಗಳ ರೂಪದಲ್ಲಿ ಬೆಳೆಯುವುದಕ್ಕೆ ಬಾಯಿಯ ಅರ್ಬುದ ರೋಗ ಅಥವಾ ಬಾಯಿಯ ಕ್ಯಾನ್ಸರ್ ಎಂದು ಹೇಳುತ್ತೇವೆ. ಅರ್ಬುದ ರೋಗ ಎನ್ನುವುದು ಒಂದು ವಿಶ್ವವ್ಯಾಪ್ತಿ ಹರಡಿರುವ ಒಂದು ಭೀಕರವಾದ ರೋಗ. ಗಂಡಸರಲ್ಲಿ ಶ್ವಾಸಕೋಶ, ಕರುಳು ಮತ್ತು ಬಾಯಿಯ ಕ್ಯಾನ್ಸರ್ ಹೆಚ್ಚು ಹೆಚ್ಚು ಕಾಣ ಸಿಗುತ್ತದೆ. ಹೆಂಗಸರಲ್ಲಿ ಜನನಾಂಗ, ಎದೆ ಮತ್ತು ಗರ್ಭಕೋಶದ ಕ್ಯಾನ್ಸರ್ ಹೆಚ್ಚು ಕಾಣಬರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ತಂಬಾಕು,
ವಿಶ್ವ ಹಿಮೋಫಿಲಿಯಾ ಸೊಸೈಟಿ ಹಿಮೋಫಿಲಿಯಾ ರೋಗದಿಂದ ಬಳಲುತ್ತಿರುವ ರೋಗಿಗಳ ಜೀವನ ಮಟ್ಟದ ಸುಧಾರಣೆ ಮಾಡಲು ಮತ್ತು ರೋಗದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ, 1989ರಲ್ಲಿ ಎಪ್ರಿಲ್ 17ರಂದು ‘ವಿಶ್ವ ಹಿಮೋಫಿಲಿಯಾ ದಿನ” ಆಚರಣೆಯನ್ನು ಜಾರಿಗೆ ತಂದಿತು. 1963ರಲ್ಲಿ ಪ್ರಾಂಕ್ ಶ್ಯಾನ್‍ಬೆಲ್ ಎಂಬವರಿಂದ ಆರಂಭಗೊಂಡ ಈ ವಿಶ್ವ ಹಿಮೋಫಿಲಿಯಾ ಸೊಸೈಟಿ, ವಿಶ್ವದಾದ್ಯಂತ ಹಿಮೋಫಿಲಿಯಾ ರೋಗಿಗಳ ಶುಶ್ರೂಷೆ ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು
ಕನ್ನಡ ಚಿತ್ರರಂಗದಲ್ಲಿ ಕಳ್ಳ ಕುಳ್ಳ ಎಂದು ಖ್ಯಾತರಾಗಿದ್ದ ಜೋಡಿಯಲ್ಲಿ ಕುಳ್ಳ ದ್ವಾರಕೀಶ್ 81ರ ಪ್ರಾಯದಲ್ಲಿ ಈಗ ನಿಧನರಾಗಿದ್ದಾರೆ. ಪ್ರಚಂಡ ಕುಳ್ಳ ಇತ್ಯಾದಿ ಬಿರುದಾಂಕಿತ ದ್ವಾರಕೀಶ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಹಸ ಸಾಧಕರೂ ಹೌದು, ಗುಂಪುಗಾರಿಕೆಯನ್ನು ಸಾಧಿಸಿದವರೂ ಹೌದು. ಸಾಕಷ್ಟು ಯಶಸ್ಸು ಕಂಡರೂ ಕೊನೆಗೆ ಕಳೆದುಕೊಂಡುದೇ ಹಣೆಬರಹ. ಹಿಂದಿನ ಕಾಲದ 80 ಶೇಕಡಾಕ್ಕೂ ಹೆಚ್ಚು ನಟನಟಿಯರ ಪಾಡು ಇದೇ ಆಗಿತ್ತು. ಈಗಿನ ನಟ ನಟಿಯರು ಬಹುತೇಕ ಹುಶಾರು. ಅವರು