ವಿಟ್ಲ ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅವರಣದಿಂದ ದನ ಕಳ್ಳತನ ಪ್ರಕರಣ

ವಿಶ್ವ ಹಿಂದೂ ಪರಿಷದ್‌ ವತಿಯಿಂದ ಭೇಟಿ, ಶೀಘ್ರ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಪೋಲಿಸ್ ಇಲಾಖೆಗೆ ಮನವಿ ಕೇರಳ ಗಡಿ ಪ್ರದೇಶವಾಗಿರುವ ವಿಟ್ಲದ ಪೆರುವಾಯಿ ಗ್ರಾಮದ ಅಶ್ವಥನಗರ ಬಳಿಯಿರುವ ವ್ಯವಸಾಯ ಸೇವಾ ಸಹಕಾರಿ ಸಂಘದ ಅವರಣದಿಂದ ನಾಲ್ಕು ಗೋವುಗಳ ಕಳ್ಳತನವಾಗಿ ಇಂದಿಗೆ ಆರು ದಿನವಾಗಿದ್ದು ಎಫ್ ಐ ಆರ್ ದಾಖಲಿಸಿ ಇಂದಿಗೆ ನಾಲ್ಕು ದಿನ ಕಳೆದರು ಇಂದಿಗೂ ಗೋವು ಪತ್ತೆಯಾಗಿಲ್ಲ ಈ ನಿಟ್ಟಿನಲ್ಲಿ ಇಂದು ವಿಶ್ವ ಹಿಂದೂ ಪರಿಷದ್‌ ಪುತ್ತೂರು ಜಿಲ್ಲೆಯ ವತಿಯಿಂದ ಗೋವು ಕಳೆದುಕೊಂಡ ಪೆರುವಾಯಿಯ ಗಣೇಶ್ ಎಂಬವರ ಮನೆಗೆ ಭೇಟಿ ಮಾಡಿ ಘಟನೆ ಬಗ್ಗೆ ವಿಚಾರಿಸಿ ನಂತರ ವಿಟ್ಲ ಪೋಲಿಸ್ ಠಾಣೆಗೆ ತೆರಳಿ ತನಿಖೆಯ ಪ್ರಗತಿ ಬಗ್ಗೆ ಪೋಲಿಸ್ ಅಧಿಕಾರಿಗಳಲ್ಲಿ ಮಾಹಿತಿ ಪಡೆದುಕೊಂಡು ಶೀಘ್ರವಾಗಿ ಗೋಕಳ್ಳ ಆರೋಪಿಗಳನ್ನು ಪತ್ತೆ ಹಚ್ಚಬೇಕು ಹಾಗೂ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳದ ವತಿಯಿಂದ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್‌ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ,ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ,ಜಿಲ್ಲಾ ಮಠ ಮಂದಿರ ಆರ್ಚಕ ಪುರೋಹಿತ ಸಂಪರ್ಕ ಪ್ರಮುಖರಾದ ಪದ್ಮನಾಭ ಕಟ್ಟೆ, ಪ್ರಮುಖರಾದ ಯತೀಶ್ ಪೆರುವಾಯಿ ಮತ್ತು ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.