ತುಳುವಿನ ಬಹುನಿರೀಕ್ಷೆಯ ಸಿನಿಮಾ “ಸರ್ಕಸ್” ಟಿಕೆಟ್ ಬುಕ್ಕಿಂಗ್ ಆರಂಭ

ತುಳು ಸಿನಿಮಾರಂಗದ ರಾಕ್ ಸ್ಟಾರ್, ಬಿಗ್‍ಬಾಸ್ 9ರ ವಿಜೇತ ರೂಪೇಶ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷೆಯ ತುಳು ಸಿನಿಮಾ ಸರ್ಕಸ್ ಜೂನ್ 23ರಂದು ವಿಶ್ವದಾದ್ಯಾಂತ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದ್ದು, ಚಿತ್ರದ ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ. ಆನ್‍ಲೈನ್ ಇಲ್ಲವೇ ದೂರವಾಣಿ ಕರೆ ಮೂಲಕ ಟಿಕೆಟ್ ಬುಕ್ಕಿಂಗ್‍ಗೆ ಅವಕಾಶವಿದ್ದು ಪ್ರೇಕ್ಷಕರು ಇಚ್ಚಿಸುವ ಸಿನಿಮಾ ಮಂದಿರಗಳಲ್ಲಿ ಚಿತ್ರ ವೀಕ್ಷಿಸಬಹುದಾಗಿದೆ.

ತುಳು ಸಿನಿಮಾರಂಗದ ರಾಕ್ ಸ್ಟಾರ್, ಬಿಗ್‍ಬಾಸ್ 9ರ ವಿಜೇತ ರೂಪೇಶ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷೆಯ, ಹೊಚ್ಚ ಹೊಸ ಮತ್ತು ಹಾಸ್ಯಮಯ ಸಿನಿಮಾ ಸರ್ಕಸ್ ನೋಡಲು ಪ್ರೇಕ್ಷಕರು ಕಾತುರರಾಗಿದ್ದಾರೆ. ಈಗಾಗಲೇ ಸಿನಿಮಾ ಬಿಡುಗಡೆಗೆ ಎಲ್ಲಾ ತಯಾರಿಯನ್ನು ಚಿತ್ರತಂಡ ಮಾಡಿಕೊಂಡಿದ್ದು, ಮಂಗಳೂರು, ಸುರತ್ಕಲ್, ಪಡುಬಿದ್ರಿ, ಮಣಿಪಾಲ ಹಾಗೂ ಪುತ್ತೂರಿನಲ್ಲಿ ಸರ್ಕಸ್ ಚಿತ್ರದ ವೀಕ್ಷಣೆಗೆ ಟಿಕೇಟ್ ಬುಕ್ಕಿಂಗ್ ಆರಂಭವಾಗಿದೆ. ಬುಕ್ ಮೈ ಶೋ ಆನ್‍ಲೈನ್ ಮೂಲಕ ಟಿಕೇಟ್ ಬುಕ್ಕಿಂಗ್ ಮಾಡಬಹುದು, ಇಲ್ಲವೇ ದೂರವಾಣಿ ಕರೆ ಮೂಲಕ ಟಿಕೆಟ್ ಬುಕ್ಕಿಂಗ್‍ಗೆ ಅವಕಾಶವಿದ್ದು ಪ್ರೇಕ್ಷಕರು ಇಚ್ಚಿಸುವ ಸಿನಿಮಾ ಮಂದಿರಗಳಲ್ಲಿ ಚಿತ್ರ ವೀಕ್ಷಿಸಬಹುದಾಗಿದೆ.

ಈಗಾಗಲೇ ವಿದೇಶಗಳಲ್ಲಿ ಸಿನಿಮಾದ ಪ್ರೀಮಿಯರ್ ಶೋ ಯಶಸ್ವಿಯಾಗಿ ನಡೆದಿದ್ದು, ಸಿನಿ ಪ್ರೇಕ್ಷಕರು ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಹಾಗೂ ಸರ್ಕಸ್ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಸರ್ಕಸ್ ತುಳು ಚಿತ್ರದ ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದ್ದು ಬುಕ್ ಮೈ ಶೋ ಆನ್‍ಲೈನ್ ಮೂಲಕ ಇಂದೇ ಬುಕ್ ಮಾಡಿ. ಅಥವಾ 9606679152 ನಂಬರ್‍ಗೆ ಕರೆ ಮಾಡಿ ಟಿಕೆಟ್ ಬುಕ್ ಮಾಡಿ. ಸಿನಿಮಾ ನೋಡಿ ಎಂಜಾಯ್ ಮಾಡಿ.

Related Posts

Leave a Reply

Your email address will not be published.