ಎಸ್.ಡಿ.ಎಂ ಬಿ.ವೋಕ್‌ನಿಂದ ‘ಸೀನ್ ಟು ಸ್ಕ್ರೀನ್’ ಸಿನಿಮಾ ಕಾರ್ಯಾಗಾರ

ಉಜಿರೆ : ಸಿನಿಮಾದ ಪ್ರಾಯೋಗಿಕಜ್ಞಾನ ವಿದ್ಯಾರ್ಥಿಗಳ ಬೌದ್ಧಿಕ ಸಂಪತ್ತನ್ನು ವೃದ್ಧಿಸುತ್ತದೆ ಎಂದು ಖ್ಯಾತ ಚಿತ್ರಕಥೆ ಬರಹಗಾರ ರಾಷ್ಟ್ರ ಪ್ರಶಸ್ತಿ ವಿಜೇತ ಶ್ರೀನಿಧಿ ಡಿ.ಎಸ್. ಅಭಿಪ್ರಾಯಪಟ್ಟರು. ಶ್ರೀ.ಧ.ಮ ಸ್ನಾತಕೋತ್ತರ ಕಾಲೇಜಿನ ಬಿವೋಕ್ ‌ಡಿಜಿಟಲ್ ಮೀಡಿಯಾ ಮತ್ತು ಫಿಲ್ಮ್ ಮೇಕಿಂಗ್ ವಿಭಾಗದ ವತಿಯಿಂದ ಸಿದ್ಧವನ ಗುರುಕುಲದ ಅಮೃತ ಸಿದ್ಧಿ ಸಭಾಂಗಣದಲ್ಲಿಆಯೋಜಿಸಲಾದ ನಾಲ್ಕು ದಿನಗಳ ಚಲನಚಿತ್ರ ನಿರ್ಮಾಣ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಸಿನಿಮಾಕ್ಕೆ ಸಂಬಂಧಿಸಿದಂತೆ ಪಡೆಯುವ ಪ್ರಾಯೋಗಿಕ ಜ್ಞಾನವು ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ರೂಢಿಸುತ್ತದೆ. ಪ್ರಾಯೋಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಲೇ ಇರಬೇಕುಎಂದು ಸಲಹೆ ನೀಡಿದರು. ರಾಜ್ಯದಲ್ಲಿ ಸಿನೆಮಾ ನಿರ್ಮಾಣದ ಪ್ರಾಯೋಗಿಕ ಶಿಕ್ಷಣವನ್ನು ನೀಡುವ ಅಧಿಕೃತ ಸಂಸ್ಥೆಗಳಿರುವುದು ಬೆರಳೆಣಿಕೆಯಷ್ಟು ಮಾತ್ರ. ಹಾಗಾಗಿ ವಿದ್ಯಾರ್ಥಿಗಳು ಕಾರ್ಯಗಾರದ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ.ಧ.ಮ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುಮಾರ್ ಹೆಗ್ಡೆ ಬಿ.ಎ ಮಾತನಾಡಿದರು. ಪ್ರತಿಯೊಬ್ಬರೂ ಕುತೂಹಲ ಮತ್ತು ವಿಭಿನ್ನದೃಷ್ಟಿಕೋನದಿಂದ ನೋಡುವ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕು. ಅದು ನಮ್ಮನ್ನು ಕ್ರಿಯಾಶೀಲರನ್ನಾಗಿಸುತ್ತದೆ,ಹೊಸತನದ ಅಭಿರುಚಿಯೊಂದಿಗೆ ಸಾಹಿತ್ಯವನ್ನು ನಿರಂತರವಾಗಿ ಓದಬೇಕು ಎಂದು ಕಿವಿಮಾತು ಹೇಳಿದರು. ಎಸ್.ಡಿ.ಎಂ ಬಿವೋಕ್ ನ ಸಂಯೋಜಕರಾದ ಸುವೀರ್‌ ಜೈನ್ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಗಾರಗಳು ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕಿರುವ ವೇದಿಕೆಗಳು ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನಿರ್ಮಿಸಿದ ಐದುಕಿರು ಚಿತ್ರಗಳನ್ನು ಸಾಂಕೇತಿಕವಾಗಿ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದ ಸಂಯೋಜಕರಾದ ಬಿವೋಕ್ ನ ಮುಖ್ಯಸ್ಥ ಮಾಧವ ಹೊಳ್ಳ ಸ್ವಾಗತಿಸಿ, ಸಹಾಯಕ ಪ್ರಾಧ್ಯಾಪಕ ಇಂದುಧರ ವಂದಿಸಿದರು. ಕಾರ್ಯಕ್ರಮದಲ್ಲಿ ಆಸಕ್ತ ವಿದ್ಯಾರ್ಥಿಗಳು ಮತ್ತುಉಪನ್ಯಾಸಕರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.