ಧರ್ಮಸ್ಥಳ : ಗ್ರಾಮ ಪಂಚಾಯತ್ ನೌಕರರಿಗೆ ಸಿ ಮತ್ತು ಡಿ ದರ್ಜೆ ಸ್ಥಾನಮಾನ

ನಗರ ಮತ್ತು ಪಟ್ಟಣ ಪಂಚಾಯಿತಿ ನೌಕರರ ಮಾದರಿಯಲ್ಲಿ ಸೇವಾ ನಿಯಮಾವಳಿ ಹಾಗೂ ವೇತನ ಶ್ರೇಣಿ ನಿಗದಿಪಡಿಸಬೇಕು. ಜಿಲ್ಲಾ ಪಂಚಾಯತ್ ಅನುಮೋದನೆ ಬಾಕಿ ಇರುವ ಎಲ್ಲಾ ಪಂಚಾಯತ್ ನೌಕರರನ್ನು ವಯಸ್ಸಿನ ವಯೋಮಿತಿ ಹಾಗೂ ವಿದ್ಯಾರ್ಹತೆಯನ್ನು ಪರಿಗಣಿಸದೆ ಅವರ ಸೇವೆಯನ್ನು ಪರಿಗಣಿಸಿ ಒಂದು ಬಾರಿ ಜಿಲ್ಲಾ ಪಂಚಾಯತ್ ಅನುಮೋದನೆ ನೀಡಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪಂಚಾಯತ್ ನೌಕರರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ದಿ ಸಂಘ ಆಗ್ರಹಿಸಿದೆ.ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ದಿ ಸಂಘ ಡಾ. ದೇವಿಪ್ರಸಾದ್ ಬೊಲ್ಮ ಅವರು ಧರ್ಮಸ್ಥಳದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಹೊಸ ಹೊಸ ಯೋಜನೆಗಳನ್ನು ಪ್ರಪ್ರಥಮವಾಗಿ ಗ್ರಾಮೀಣ ಭಾಗದ ಜನರ ಮನೆ ಬಾಗಿಲಿಗೆ ತಲುಪಿಸುವಂತ ನೌಕರರು.
ಕನಿಷ್ಠ ವೇತನಕ್ಕೆ ಗರಿಷ್ಠ ಸೇವನೆ ನೀಡುತ್ತಿರುವಂತಹ ಸ್ಥಳೀಯ ಸರ್ಕಾರದ ನೌಕರರು.ಯಾವುದೇ ಸರಕಾರಿ ಸವಲತ್ತುಗಳು ಆರೋಗ್ಯ ಭದ್ರತೆ ಭವಿಷ್ಯ ನಿಧಿ, ಸೇವಾ ಭದ್ರತೆ ಯಾವುದನ್ನು ಹೊಂದದೆ ವಂಚಿತರಾಗಿ ಕಾರ್ಯನಿರ್ವಹಿಸುತ್ತಿರುವ ಅಂತ ನೌಕರರುಎಂದು ಪರಿಗಣಿಸಿ

deviprasad bolma

ಸ್ಥಳೀಯ ಆಡಳಿತ ಸರಕಾರದ ಜನಪ್ರತಿನಿಧಿಗಳ ಕನಸುಗಳನ್ನು ಗ್ರಾಮೀಣ ಭಾಗದಲ್ಲಿ ಶ್ರದ್ಧೆಯಿಂದ ಸಾಕಾರಗೊಳಿಸುತ್ತಿರುವಂತ ನೌಕರರು. ಗ್ರಾಮೀಣ ಭಾಗದಲ್ಲಿ ನರೇಗಾ, ಬಾಪೂಜಿ ನೂರು ಸೇವೆಗಳು, ವಸತಿ ಯೋಜನೆ, ಸ್ವಚ್ಛ ಭಾರತ್ ಮಿಷನ್, ಇತರ ನೂರಾರು ತಂತ್ರಾಂಶಗಳ ನಿರ್ವಹಣೆ, ವ್ಯವಸ್ಥಿತ ರೀತಿಯಲ್ಲಿ ನೀರು ಸರಬರಾಜು, ಗ್ರಾಮ ನೈರ್ಮಲ್ಯ ಕಾಪಾಡುವದು, ಕರ ಸಂಗ್ರಹಣೆ ಜೊತೆಗೆ ಸಂಪನ್ಮೂಲ ಕ್ರೂಡೀಕರಣ ಮಾಡುವುದು. ಜೊತೆಗೆ ನಮ್ಮ ಎಲ್ಲಾ ಬೇಡಿಕೆಗಳನ್ನು ಮಾನ್ಯ ರಾಜ್ಯ ಸರಕಾರ, ಮುಖ್ಯಮಂತ್ರಿ, ಹಾಗೂ ಸಂಭಂದಪಟ್ಟ ಇಲಾಖೆ ಹಾಗೂ ಉನ್ನತ ಅಧಿಕಾರಿ ವರ್ಗನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತಿದ್ದೇವೆ. ಮುಂದಿನ ದಿನಗಳಲ್ಲಿ ಯಾವುದೇ ಬೇಡಿಕೆಗಳನ್ನು ಈಡೇರಿಸದೆ ಇದ್ದಲ್ಲಿ ಮುಂದಿನ ದಿನದಲ್ಲಿ ಉಗ್ರವಾದ ಪ್ರತಿಭಟನೆಯನ್ನು ರಾಜ್ಯಾದ್ಯಂತ ಮಾಡಲಿದ್ದೇವೆ ಎಂದು ಎಚ್ಚರಿಸಿದರು.

deviprasad bolma

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗ್ರಾಮ ಪಂಚಾಯತ್ ನೌಕರರ ಹೋರಾಟ ಸಮಿತಿಯ ಅಧ್ಯಕ್ಷರಾದ ದಯಾನಂದ ಮಠತಡ್ಕ ಉಪಸ್ಥಿತರಿದ್ದರು

Related Posts

Leave a Reply

Your email address will not be published.