ದೆಹಲಿ : ಹೈಕೋರ್ಟ್‌ಗೆ ಮುಖ್ಯ ನ್ಯಾಯಾಧೀಶರಾಗಿ ಗುಜರಾತಿನ ಎನ್. ವಿ. ಅಂಜಾರಿಯಾ ನೇಮಕ
ಇದೇ ಫೆಬ್ರವರಿ 24ರಂದು ನಿವೃತ್ತರಾಗುವ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಕನ್ನಡಿಗರೆ ಆದ ದಿನೇಶ್ ಕುಮಾರ್ ಅವರ ಜಾಗಕ್ಕೆ ಎನ್. ವಿ. ಅಂಜಾರಿಯಾ ಅವರನ್ನು ನೇಮಕ ಮಾಡಲಾಗಿದೆ.
ಸುಪ್ರೀಂ ಕೋರ್ಟ್ ಕೊಲಿಜಿಯಂ ಈ ಮುಖ್ಯ ನ್ಯಾಯಮೂರ್ತಿ ಆಯ್ಕೆಯನ್ನು ಸೂಚಿಸಿದೆ. ಗುಜರಾತ್ ರಾಜ್ಯದವರಾದ ಎನ್. ವಿ. ಅಂಜಾರಿಯಾ ಅವರು ಸದ್ಯ ಗುಜರಾತ್ ಹೈಕೋರ್ಟಿನಲ್ಲಿ ನ್ಯಾಯಾಧೀಶರಾಗಿ ಇದ್ದಾರೆ.