ನಿಟ್ಟೆ ಕ್ಷೇಮದಲ್ಲಿ ಮದ್ಯವರ್ಜನ ಶಿಬಿರದ ಉದ್ಘಾಟನೆ
ಉಳ್ಳಾಲ: ದಾನ ಧರ್ಮದ ಸೇತುವೆಯನ್ನು ಕಟ್ಟಿ, ಸಂಪತ್ತು ಸೌಭಾಗ್ಯದ ಐರಾವತವನ್ನು ಈ ಧರೆಗಿಳಿಸಿ ಎಲ್ಲರೂ ಅವರ ಕರ್ತವ್ಯ, ದಾನ, ವಸತಿ, ಆರೊಗ್ಯ, ವಿದ್ಯೆ, ಈ ಪಂಚಮೂಲ ಅವಶ್ಯಕತೆಗೆ ಪೂರಕವಾಗಿ ನೆಮ್ಮದಿಯ ಜೀವನ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವ ಎಂದು ರಾಜ್ಯ ಸಭಾಸದಸ್ಯ, ಧರ್ಮಸ್ಥಳ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಹೇಳಿದರು.
ನಿಟ್ಟೆ ವಿಶ್ವವಿದ್ಯಾಲಯ ಕಾಲೇಜಿನ ಕ್ಷೇಮ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ,ಜಿಲ್ಲಾ ಜನಜಾಗೃತಿ ವೇದಿಕೆ ಮಂಗಳೂರು,ನಿಟ್ಟೆ ಸಹಭಾಗಿತ್ವದಲ್ಲಿ ನಡೆದ ೧೬೬೧ ನೇ ಮದ್ಯವರ್ಜನ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿಟ್ಟೆ ವಿದ್ಯಾಸಂಸ್ಥೆಯ ಕುಲಪತಿ ವಿನಯ್ ಹೆಗ್ಡೆ ಮಾತನಾಡಿ, ಶಿಕ್ಷಣ ಮತ್ತು ಜ್ಞಾನದ ಜ್ಯೋತಿಯನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಬಹಳ ಅತ್ಯುತ್ತಮವಾದ ಜವಾಬ್ದಾರಿಯನ್ನು ತೆಗೆದುಕೊಂಡು ಸಮುದಾಯಕ್ಕೆ ಅಗತ್ಯ ಸೇವೆಯನ್ನು ನೀಡುವಂತಹ ವ್ಯಕ್ತಿತ್ವ ವೀರೇಂದ್ರ ಹೆಗಡೆ ಯವರಲ್ಲಿ ಇದೆ ಎಂದರು.
ಸುಮಾರು ೬೧ ಜನ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನಿಟ್ಟೆ ಕುಲಪತಿ ಶಾಂತರಾಂ ಶೆಟ್ಟಿ, ಡಾ ಮೂಡಿತ್ತಾಯ, ಡಾ ಎಲ್ ಎಚ್ ಮಂಜುನಾಥ್,ಡಾ ಸುಮಲತಾ ಶೆಟ್ಟಿ, ಪದ್ಮನಾಭ ಶೆಟ್ಟಿ, ರವೀಂದ್ರ ಶೆಟ್ಟಿ ಉಳಿದೊಟ್ಟು, ಚಂದ್ರಶೇಕರ ಉಚ್ಚಿಲ್, ಶ್ರೀನಿವಾಸ ಭಟ್,ಮಹಾಬಲ ಕುಲಾಲ್, ಸತೀಶ್ ದೀಪಂ,ಚನ್ನಕೇಶವ ಇದ್ದರು.
ಕಾರ್ಯಕ್ರಮ ನಿರ್ವಹಣೆ ಧರ್ಮಸ್ಥಳ ಯೋಜನಾ ಅಧಿಕಾರಿ ಎಮ್ ಸಿ ಗಣೇಶ್ ಆಚಾರ್ಯ, ಧರ್ಮಸ್ಥಳ ಸ್ವಸಾಹಯ ಸಂಘ ಮೇಲ್ವಿಚಾರಕಿ ಜಯಂತಿ ನಿರ್ವಹಿಸಿದರು.
ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸ್ಂಟ್ ಪಾಯಸ್ ಡಿಸೋಜ ವಂದನಾರ್ಪಣೆ ಗ್ಯೆದರು.