ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಹಿನ್ನೆಲೆ-ರೂ.25ಲಕ್ಷ ದೇಣಿಗೆ ಸಮರ್ಪಣೆ
ಪುತ್ತೂರು: ಇತಿಹಾಸ ಪ್ರಸಿದ್ಧ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಹಿನ್ನೆಲೆ-ಈಶಾನ್ಯ ಬದಿಯ ಕಟ್ಟೆ ನಿರ್ಮಾಣಕ್ಕೆ ಬೆಂಗಳೂರಿನ ಉದ್ಯಮಿ ನಾಗೇಶ್ ರಾವ್ ಅತ್ತಾಳ ಸುಜಾತ ದಂಪತಿಯಿಂದ ರೂ.25ಲಕ್ಷ ದೇಣಿಗೆ ಸಮರ್ಪಣೆ.
ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಬಗ್ಗೆ ದೇವಳದ ಈಶಾನ್ಯ ಬದಿಯ ಕಟ್ಟೆ ನಿರ್ಮಾಣಕ್ಕಾಗಿ ನಾಗೇಶ್ ರಾವ್ ಅತ್ತಾಳ ಮತ್ತು ಸುಜಾತ ರಾವ್ ಅವರು ರೂ.25 ಲಕ್ಷ ದೇಣಿಗೆಯನ್ನು ದೇವಳಕ್ಕೆ ಸಮರ್ಪಣೆ ಮಾಡಿದರು.ದೇವಳದ ಪ್ರಧಾನ ಅರ್ಚಕ ವೇ.ಮೂ.ವೆಂಕಟೇಶ್ ಸುಬ್ರಮಣ್ಯ ಭಟ್ ರವರು ಶ್ರೀದೇವರ ಪ್ರಸಾದ ನೀಡಿ ಪ್ರಾರ್ಥಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ರವರು ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ್ ಸುವರ್ಣ, ದಾನಿಗಳ ಸಹೋದರ ಶಶಿಧರ ರಾವ್ ಅತ್ತಾಳ, ವಿಜಯಲಕ್ಷ್ಮೀ ಸಿ ಯಚ್, ಶ್ರೀಶ ರಾವ್, ಯಶಸ್ ರಾವ್ ಬೆಂಗಳೂರುರವರು ಉಪಸ್ಥಿತರಿದ್ದರು.


















