ಫಾಝಿಲ್ ಕೊಲೆ ಪ್ರಕರಣ ಮರು ತನಿಖೆಗೆ ಆಗ್ರಹ – ಡಿವೈಎಫ್‌ಐ

ಫಾಝಿಲ್ ಕೊಲೆಯನ್ನು ಪ್ರತಿಕಾರದ ಕೊಲೆ ಎಂದು ಹೇಳಿಕೆ ಕೊಟ್ಟ ಶರಣ್ ಪಂಪ್ ವೆಲ್ ಬಂಧನಕ್ಕೆ ಒತ್ತಾಯಿಸಿ, ಫಾಝಿಲ್ ಕೊಲೆ ಪ್ರಕರಣ ಮರು ತನಿಖೆಗೆ ಆಗ್ರಹಿಸಿ ಡಿವೈಎಫ್ಐ ಸಂಘಟನೆಯು (ಇಂದು 3-2-23)ನಗರದ ಮಿನಿವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿ ಶರಣ್ ಪಂಪ್ ವೆಲ್ ಹೇಳಿಕೆಯನ್ನು ಖಂಡಿಸಿದರು.

ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಮಾತನಾಡುತ್ತಾ ತುಮಕೂರಿನ ಕಾರ್ಯಕ್ರಮವೊಂದರಲ್ಲಿ ಬಜರಂಗದಳದ ಮುಖಂಡ ಶರಣ್ ಪಂಪ್ ವೆಲ್ ಹೇಳಿಕೆ ನಾಗರೀಕ ಸಮಾಜ ಒಪ್ಪುವಂತದಲ್ಲ. ಪಾಝಿಲ್ ಕೊಲೆಯು ನೆಟ್ಟಾರ್ ಕೊಲೆಗೆ ಪ್ರತಿಕಾರ ಎಂಬ ಹೇಳಿಕೆಯಿಂದ ಫಾಝಿಲ್ ಕೊಲೆಯಲ್ಲಿ ಶರಣ್ ಪಂಪ್ವೆಲ್ ಪಾತ್ರವೂ ಇವೆ ಎಂಬುದು ಸಾರ್ವಜನಿಕವಾಗಿ ಬಯಲಾಗಿದೆ . ಮಾತ್ರವಲ್ಲ ಗುಜರಾತ್ ಹಿಂಸಾಚಾರವನ್ನೂ ಕೂಡಾ ಸಮರ್ಥಿಸಿರೋದರಿಂದ ಜನಾಂಗೀಯ ಹತ್ಯೆಗೆ ಕರೆ ನೀಡಿದಂತಿದೆ ಇಂತಹ ಹೇಳಿಕೆ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಲಿದ್ದು ಈ ಹಿನ್ನಲೆಯಲ್ಲಿ ಪೊಲೀಸ್‌ ಇಲಾಖೆ ಈ ಕೂಡಲೇ ಮತೀಯವಾದಿ ಶರಣ್ ಪಂಪ್ ವೆಲ್ ನನ್ನು ಬಂಧಿಸೋದು ಮಾತ್ರವಲ್ಲ ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.

ಮುಂದುವರಿದು ಮಾತನಾಡುತ್ತಾ ಬಜರಂಗದಳ ಯಾವತ್ತೂ ಬಡತನ, ಉದ್ಯೋಗ, ವೇತನ, ಆರೋಗ್ಯ, ಶಿಕ್ಷಣ ಮತ್ತು ಜನರ ದಿನನಿತ್ಯದ ಬದುಕಿನ ಸಮಸ್ಯೆಗಳ ವಿರುದ್ದ ಮಾತಾಡೋದಿಲ್ಲ ಅಂತಹ ವಿಚಾರಗಳಲ್ಲಿ ಮಾತಡೋದು ಡಿವೈಎಫ್ಐ ಸಂಘಟನೆ ಮಾತ್ರ. ನಿಮ್ಮಯ ಮತೀಯ ರಾಜಕಾರಣವನ್ನು ಯಾವುದೇ ಮುಲಾಜಿಲ್ಲದೆ ವಿರೋಧಿಸುತ್ತೇವೆ ಇಂತಹ ಮತೀಯ ರಾಜಕಾರಣದ ವಿರುದ್ಧದ ಹೋರಾಟದಲ್ಲಿ ಸಂಗಾತಿ ಶ್ರೀನಿವಾಸ್ ಬಜಾಲ್, ಭಾಸ್ಕರ್ ಕುಂಬಳೆ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಹುತಾತ್ಮರಾಗಿದ್ದಾರೆ ನೆನಪಿರಲಿ ಎಂದು ಎಚ್ಚರಿಸಿದರು.

ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡುತ್ತಾ ದೈಹಿಕ ಶಕ್ತಿ ಸಾಮರ್ಥ್ಯದಿಂದಲ್ಲ ಆತ್ಮಶಕ್ತಿಯಿಂದ ವಿಧ್ವಂಸಕ ಕೃತ್ಯದಿಂದಲ್ಲ ಶಾಂತಿ ಮತ್ತು ಪ್ರೀತಿಯಿಂದಲೇ ಭಾರತ ಮೇಲೆದ್ದು ಬರುತ್ತದೆ ಎಂದು ಸಾರಿದ ಸ್ವಾಮಿ ವಿವೇಕಾನಂದರ ಆಶಯವನ್ನು ಶರಣ್ ಪಂಪ್ ವೆಲ್ ತಿಳಿಯಬೇಕು. ಶರಣ್ ಪಂಪ್ವೆಲ್ ಗೆ ಗೊತ್ತಿರಲಿ ಫಾಝಿಲ್ ಕೊಲೆ ಹಿಂದೂ ಯುವಕರ ಶೌರ್ಯವಲ್ಲ ಅದೊಂದು ಕ್ರೌರ್ಯ. ಇಂತಹ ಹೇಳಿಕೆಯು ಹಿಂದೂ ಸಮಾಜದ ಮೇಲೆ ಕಳಂಕವನ್ನು ತಂದೊಡ್ಡಿದೆ. ಅಮಾಯಕ ಮುಸಲ್ಮಾನರನ್ನು ಕೊಲ್ಲುವುದು ಶೌರ್ಯವೆಂದಾದರೆ ನಿಮ್ಮದೇ ಯುವಕರು ಕೊಲೆ ಮಾಡಿದ ಬಂಟ್ವಾಳದ ಹರೀಶ್ ಪೂಜಾರಿ, ಉಡುಪಿಯ ಪ್ರವೀಣ್ ಪೂಜಾರಿ ಮತ್ತು ಆರ್ ಎಸ್ ಎಸ್ ಕಾರ್ಯಕರ್ತ ವಿನಾಯಕ ಬಾಳಿಗರನ್ನು ನಡೆಸಿರುವ ಕೊಲೆಗಳೆಲ್ಲಾ ಎನೆನ್ನಬೇಕೆಂದು ಶರಣ್ ಪಂಪ್ವೆಲ್ ಉತ್ತರಿಸಬೇಕೆಂದರು.

ಡಿವೈಎಫ್ಐ ಜಿಲ್ಲಾ ಮುಖಂಡರಾದ ಶ್ರೀನಾಥ್ ಕಾಟಿಪಳ್ಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಡಿವೈಎಫ್ಐ ನಗರ ಅಧ್ಯಕ್ಷರಾದ ನವೀನ್ ಕೊಂಚಾಡಿ, ಜಿಲ್ಲಾ ಮುಖಂಡರಾದ ನಿತಿನ್ ಕುತ್ತಾರ್, ಸಾಧಿಕ್ ಕಣ್ಣೂರು, ಅಶ್ಪಕ್ ಹಳೇಕಲ, ಎಸ್ಎಫ್ಐ‌ ಜಿಲ್ಲಾ ಕಾರ್ಯದರ್ಶಿ ರೇವಂತ್ ಕದ್ರಿ, ಅಸುಂತ ಡಿಸೋಜ, ಯೋಗಿತಾ, ಮುಸ್ತಫಾ ಕಲ್ಲಕಟ್ಟೆ, ಸಾಮಾಜಿಕ ಮುಖಂಡ ಮಹಮ್ಮದ್ ಸಾಲಿ ಬಜಪೆ, ಹನೀಫ್ ಬೆಂಗರೆ, ತಯ್ಯೂಬ್ ಬೆಂಗರೆ, ಜಗದೀಶ್ ಬಜಾಲ್ , ನೆಲ್ಸನ್ ರೋಚ್ ಮುಂತಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.