ಹೊಸ ವರ್ಷದ ಸಂದರ್ಭದಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆ:ರಾಜ್ಯಾದ್ಯಂತ ಸೇವೆ ನೀಡಲಿರುವ ಇಎಮ್‌ಆರ್‌ಐ ಗ್ರೀನ್ ಹೆಲ್ತ್ ಸರ್ವೀಸಸ್

ಹೊಸ ವರ್ಷಚಾರಣೆಯ ವೇಳೆ ಸಂಭವಿಸಬಹುದಾದ ರಸ್ತೆ ಅಪಘಾತಗಳಿಂದ ಉಂಟಾಗುವ ಜೀವ ಹಾನಿಯನು ತಡೆಯುವ ದೃಷ್ಟಿಯಿಂದ 108 ಆರೋಗ್ಯ ಕವಚ ಅಂಬುಲೆನ್ಸ್, ಇಎಮ್‌ಆರ್‌ಐ EMRI GREEN HEALTH SERVICES ಕರ್ನಾಟಕ ರಾಜ್ಯಾದ್ಯಂತ ಸುಸಜ್ಜಿತಗೊಂಡಿರುತ್ತದೆ. ಸಾಮಾನ್ಯ ದಿನಗಳಿಗಿಂತ ಹೊಸ ವರ್ಷದ ಆಚರಣೆಗಳಲ್ಲಿ ಸರಾಸರಿ ೩೦ರಿಂದ ೩೫ ಪರ್ಸೆಂಟ್ ಅಪಘಾತ ಪ್ರಕರಣಗಳು ವರದಿಯಾಗಿವೆ.

108 ಅಂಬುಲೆನ್ಸ್ ಸೇವೆಯು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯೊಂದಿಗೆ ನಿಕಟ ಸಹಕಾರವನ್ನು ಹೊಂದಿರುತ್ತದೆ. ಹೆಚ್ಚಿನ ತುರ್ತುಪರಿಸ್ಥಿತಿಯನ್ನು ನಿರೀಕ್ಷಿಸುವ ಪ್ರದೇಶಗಳಲ್ಲಿ ಹೆಚ್ಚುವರಿ ಅಂಬುಲೆನ್ಸ್ ಅನ್ನು ನಿಯೋಜಿಸಲಾಗುವುದು. ಹೆಚ್ಚುವರಿ ಸೇವೆಗಾಗಿ ಆಂಬುಲೆನ್ಸ್ ಸಿಬ್ಬಂದಿಯ ಸಾಪ್ತಾಯಿಕ ರಜೆಯನ್ನು ರದ್ದುಗೊಳಿಸಲಾಗಿದೆ ಮುಂಜಾಗೃತ ವಾಗಿಯೇ ಎಲ್ಲಾ ಆಂಬುಲೆನ್ಸ್ ನಲ್ಲಿ ಇಂಧನ , ಆಮ್ಲಜನಕ, ವೈದ್ಯಕೀಯ ಉಪಕರಣಗಳನ್ನು ಇಡಿಸಲಾಗಿದೆ. ಜಿಲ್ಲೆಯಲ್ಲಿ 52 ಅಂಬುಲೆನ್ಸ್ ಗಳನ್ನು ತಜ್ಞ ಸಿಬ್ಬಂದಿಗಳೊಂದಿಗೆ ನಿಯೋಜಿಸಲಾಗಿದೆ. ತುರ್ತುಪರಿಸ್ಥಿತಿಗಳಲ್ಲಿ 108 ಫ್ರೀ ಸಂಖ್ಯೆ ಡಯಲ್ ಮಾಡಬಹುದು.

ಜೀವನ್ಮರಣದ ಗಾಯಗಳಿಂದ ನರಳುತ್ತಿರುವ ಗಾಯಳುಗಳನ್ನು ಸುರಕ್ಷಿತವಾಗಿ ಆಂಬುಲೆನ್ಸ್ ಗಳು ಲಭ್ಯ ಇರುವುದನ್ನು ಖಚಿತಪಡಿಸುತ್ತದೆ. ಹೆಚ್ಚಿನ ಸಂಖ್ಯೆ ಸಾವು-ನೋವುಗಳು ಅನಾಹುತಗಳು ಮಾಹಿತಿ ಪೊಲೀಸ್ ಅಗ್ನಿಶಾಮಕ ಸೇವೆ ಮತ್ತು ಆರೋಗ್ಯ ಇಲಾಖೆಗಳೊಂದಿಗೆ ಹಂಚಿಕೊಳ್ಳಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕ-
ಮೊಹಮ್ಮದ್ ಆಸಿಫ್, 8548013139

ಪ್ರಾದೇಶಿಕ ವ್ಯವಸ್ಥಾಪಕ-
ಯತೀಶ್. ಎನ್, 9886550108
ಬೆಂಗಳೂರು ನಗರ ಜಿಲ್ಲೆ
108 Emergency,  EMRI GREEN HEALTH Services

Related Posts

Leave a Reply

Your email address will not be published.