ಬಿರಿಯಾನಿ ನುಡಿ ಯಾವ ಭಾಷೆಯಿಂದ ಬಂದಿದೆ

ಪರ್ಶಿಯನ್ ನುಡಿ ಬಿರಿಯನ್ ಎನ್ನುವುದರಿಂದ ಬಿರಿಯಾನಿ ನುಡಿ ಹುಟ್ಟಿದೆ. ಇಂಗ್ಲಿಷಿನಲ್ಲಿ ಬಿರಿಯಾನಿಯನ್ನು ಮಿಕ್ಸೆಡ್ ರೈಸ್ ಡಿಶ್ ಎನ್ನುವರು.ಪರ್ಶಿಯನ್ನಿನ ಬಿರಿಯನ್ ಎನ್ನುವುದಕ್ಕೆ ಬೇಯಿಸುವುದಕ್ಕೆ ಮೊದಲು ಹುರಿದದ್ದು ಎಂದು ಅರ್ಥ. ಪರ್ಶಿಯಾದಿಂದ ಮೊಗಲ ಅಡುಗೆ ಮನೆಗೆ ಬಂದ ಬಿರಿಯಾನಿ ಇಂದು ಭಾರತ ಉಪಖಂಡದ ಬೀದಿ ಬೀದಿಗಳಲ್ಲಿ ಕೂಡ ಸಿಗುತ್ತದೆ.

ಮಾಂಸ, ಉತ್ತಮ ಅಕ್ಕಿ, ತರಕಾರಿ, ಸಮಗ್ರ ಮಸಾಲೆ ಹಾಗೂ ತುಪ್ಪದ ಬಗೆ ಬೆರೆಸಿ ಮಾಡಿದ್ದು ಬಿರಿಯಾನಿ. ಕೊನೆಯಲ್ಲಿ ಇಕ್ಕಡೆ ಶಾಖದಿಂದ ನೀರು ಒಳಗಡೆಯೇ ಇಂಗಿಸುತ್ತಾರೆ.ಹೈದರಾಬಾದ್, ಮಲಬಾರ್, ಕೊಲ್ಕತ್ತಾ, ಅವಧ್, ಲಕ್ನೋವಿ, ಸಿಂಧಿ, ಪಾಕಿಸ್ತಾನಿ, ಅಫಘಾನಿ ಬಿರಿಯಾನಿಗಳೆಂದು ಹಲವು ವಿಧಗಳೂ ಇವೆ. ಸಾಮಾನ್ಯ ಎಣ್ಣೆ, ಸಾಮಾನ್ಯ ಅಕ್ಕಿಯ ಸರಳ ಬಿರಿಯಾನಿ ಸಹ ಇದೆ. ಇದನ್ನು ರೈತ, ಸಲಾಡ್, ಕರಿ ಜೊತೆ ಬಡಿಸುತ್ತಾರೆ. ಕ್ಯಾಲೊರಿ ಹೆಚ್ಚು ಇರುವುದರಿಂದ ಮುಕ್ಕುವುದರಲ್ಲಿ ಲೆಕ್ಕ ತಪ್ಪಬಾರದು.
