ರಾಜ್ ಬಿ ಶೆಟ್ಟಿ ನಟನೆಯ ಟೋಬಿ ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್

ರಾಜ್ ಬಿ ಶೆಟ್ಟಿ ನಟನೆಯ ಹೊಸ ಸಿನಿಮಾ ಟೋಬಿಯ ಫಸ್ಟ್ ಲುಕ್ ಟೀಸರ್ ಬಿಡುಗಡೆಗೊಂಡಿದೆ. ವಿಭಿನ್ನ ಗೆಟಪ್‍ನಲ್ಲಿ ರಾಜ್ ಬಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಟೀಸರ್ ತುಂಬೆಲ್ಲ ರಕ್ತದ ಕೆಂಪು ರಾರಾಜಿಸುತಿದೆ. ಶೆಟ್ಟರ್ ಮೂಗಿನ ಹೊಳೆವ ಮೂಗುತಿಯ ಗುಟ್ಟು ಚಿತ್ರ ನೋಡಿಯೇ ತಿಳಿಯಬೇಕಿದೆ.
ರಾಜ್ ಬಿ ಶೆಟ್ಟಿ ಅವರು ಯಾವುದೇ ಸಿನಿಮಾ ಮಾಡಿದರೂ ತುಂಬಾ ಕುತೂಹಲ ಉಂಟಾಗುವಂತೆ ಇರುತ್ತದೆ. ಅದಕ್ಕೆ ಸಾಕ್ಷಿಯೇ ಎಂಬುದಕ್ಕೆ `ಟೋಬಿ’ ಸಿನಿಮಾದ ಪೆÇೀಸ್ಟರ್‍ಗಳು. ಸದ್ಯ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಪೆÇೀಸ್ಟರ್ ಸಿನಿಮಾ ಪ್ರೇಕ್ಷಕರನ್ನು ಅಚ್ಚರಿಗೆ ದೂಡಿದೆ. ಪೆÇೀಸ್ಟರ್‍ನಲ್ಲಿ ಬಳೆಯಾಕಾರದ ದೊಡ್ಡದೊಂದು ಮೂಗುತಿ ಧರಿಸಿರುವ ರಾಜ್ ಬಿ ಶೆಟ್ಟಿ, ಕಣ್ಣಲ್ಲಿ ಬೆಂಕಿಯುಗುಳುವಂತೆ ಕಾಣಿಸಿಕೊಂಡಿದ್ದಾರೆ. ಅವರ ಮುಖದಲ್ಲಿ ಗಾಯಗಳಿವೆ. ಎದೆಯಲ್ಲಿ ಬೆಂಕಿಯುರಿಯುವಂತೆ ಪೆÇೀಸ್ಟರ್‍ನಲ್ಲಿ ಭಾಸವಾಗುತ್ತಿದೆ.
ಟಿ.ಕೆ ದಯಾನಂದ ಅವರ ಕತೆ ಆಧರಿಸಿದ ಸಿನಿಮಾ ಟೋಬಿ, ದಯಾನಂದ್ ಅವರ ಕತೆಯನ್ನು ಚಿತ್ರಕತೆ ರೂಪಕ್ಕೆ ತಂದಿದ್ದು ಖುದ್ದು ರಾಜ್ ಬಿ ಶೆಟ್ಟಿ. ಆ ಚಿತ್ರಕತೆಯನ್ನಿಟ್ಟುಕೊಂಡು ಬಾಸಿಲ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಒಟ್ಟಿನಲ್ಲಿ ಟೋಬಿ ಸಿನಿಮಾದ ಫಸ್ಟ್ ಲುಕ್ ವಿಭಿನ್ನವಾಗಿದ್ದು, ಚಿತ್ರ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ ಸಿನಿ ಪ್ರೇಕ್ಷಕರು.