ಯಕ್ಷಕಲಾ ವಿಭೂಷಣ ಜಿ.ಕೆ ಶ್ರೀನಿವಾಸ್ ಸಾಲ್ಯಾನ್ ಗೆ ರಾಷ್ಟ್ರೀಯ ರತ್ನ ಪ್ರಶಸ್ತಿ

ಮಂಗಳೂರು: ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಮೇಳದಲ್ಲಿ ಯಕ್ಷಗಾನ ಕಥೆ ಬರಹಗಾರರಾದ
ಯಕ್ಷಕಲಾ ವಿಭೂಷಣ ಜಿ.ಕೆ ಶ್ರೀನಿವಾಸ್ ಸಾಲ್ಯಾನ್ ರಾಷ್ಟ್ರೀಯ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸೆ.24ರಂದು ನವ ದೆಹಲಿಯ ಚಾಣಕ್ಯಪುರದ ಡಾ.ಶಿವರಾಮ ಕಾರಂತ ವೇದಿಕೆಯಲ್ಲಿ ನಡೆಯುವ 17ನೇ ರಾಷ್ಟ್ರೀಯ ಕನ್ನಡ ಸಂಸ್ಕ್ರತಿ ಸಮ್ಮೇಳನದಲ್ಲಿ ಭಾರತ ಸರಕಾರದ ಸಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ಎ.ನಾರಾಯಣಸ್ವಾಮಿ ಹಾಗೂ ಕರ್ನಾಟಕದ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿಯವರು ಪ್ರಶಸ್ತಿ ಪ್ರದಾನ ಮಾಡಲ್ಲಿದ್ದಾರೆ.

ಜಿ.ಕೆ ಶ್ರೀನಿವಾಸ್ ಸಾಲ್ಯಾನ್ ರವರು ಮಂಗಳೂರಿನ ಬೊಂದೆಲ್ ಕೃಷ್ಣನಗರ ನಿವಾಸಿಯಾಗಿದ್ದು ಸರ್ವಧರ್ಮಿಯರಿಗೆ ಪ್ರೀತಿಪಾತ್ರರಾಗಿದ್ದು ಉದ್ಯಮದ ಜೊತೆಗೆ ಸಮಾಜ ಸೇವೆ, ನಾಟಕ ಯಕ್ಷಗಾನ, ಕಿರು ಚಿತ್ರ ಹಾಗೂ ಅಲ್ಬಾಂ ಸ್ವಾಂಗ್ ಸೇರಿದಂತೆ ಹಲವು ಮಜಲುಗಳಲ್ಲಿ ಸೇವೆಸಲ್ಲಿಸಿದ್ದಾರೆ‌

Related Posts

Leave a Reply

Your email address will not be published.