ಜಾಗತಿಕ ಹಳೆಯ ವಿದ್ಯಾರ್ಥಿಗಳ ಕೂಟ – ನಿಟ್ಟೆ ನೆಕ್ಸಸ್ 2025 ಆಹ್ವಾನ ಪತ್ರ ಬಿಡುಗಡೆ
ಜಾಗತಿಕ ಹಳೆಯ ವಿದ್ಯಾರ್ಥಿಗಳ ಕೂಟ – ನಿಟ್ಟೆ ನೆಕ್ಸಸ್ 2025 ಕಾರ್ಯಕ್ರಮದ ಅಧಿಕೃತ ಆಹ್ವಾನ ಪತ್ರವನ್ನು ಇಂದು ನಿಟ್ಟೆ ಎಜುಕೇಶನ್ ಟ್ರಸ್ಟ್ ಕಚೇರಿ, ರಾಂಭವನ್, ಕೊಡಿಯಾಲ್‌ಬೈಲ್, ಮಂಗಳೂರು ಇಲ್ಲಿ ಬಿಡುಗಡೆ ಮಾಡಲಾಯಿತು.
ಈ ಆಹ್ವಾನ ಪತ್ರವನ್ನು ಶ್ರೀ ವಿಷಾಲ್ ಹೆಗ್ಡೆ, ಕಾರ್ಯದರ್ಶಿ, ನಿಟ್ಟೆ ಎಜುಕೇಶನ್ ಟ್ರಸ್ಟ್ ಅವರಿಂದ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಕ್ಯಾಪ್ಟನ್ ಗಣೇಶ್ ಕಾಣಿಕ್ ಶ್ರೀ ಮುಲ್ಕಿ ಜೀವನ್ ಕೆ. ಶೆಟ್ಟಿ (ಅಧ್ಯಕ್ಷರು, WENAMITAA – NMAMIT ಹಳೆಯ ವಿದ್ಯಾರ್ಥಿಗಳ ಸಂಘ), ಹಾಗೂ ಪ್ರಮುಖ ಹಳೆಯ ವಿದ್ಯಾರ್ಥಿಗಳು _ ಶ್ರೀ ಸಂದೀಪ್ ರಾವ್ ಇಡ್ಯಾ ಮತ್ತು ಶ್ರೀ ಮಹೇಶ್ ಕಾಮತ್ ಉಪಸ್ಥಿತರಿದ್ದರು.
ಜಾಗತಿಕ ಹಳೆಯ ವಿದ್ಯಾರ್ಥಿಗಳ ಕೂಟ – ನಿಟ್ಟೆ ನೆಕ್ಸಸ್ 2025 ಕಾರ್ಯಕ್ರಮವನ್ನು ಡಿಸೆಂಬರ್ 20, 2025 ರಂದು ಸಂಜೆ 4.00 ಗಂಟೆಗೆ ಮುಲ್ಕಿ ಸುಂದರ ರಾಮ ಶೆಟ್ಟಿ ಕಾನ್ವೆನ್ಷನ್ ಸೆಂಟರ್, ಮುಲ್ಕಿ ಇಲ್ಲಿ ಆಯೋಜಿಸಲಾಗಿದೆ.
ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಎಂಎಎಂಐಟಿ) ಸಂಸ್ಥೆ 1986ರಲ್ಲಿ ಸ್ಥಾಪನೆಯಾಗಿ, ಈಗ ತನ್ನ ನಲವತ್ತನೇ ವರ್ಷದ ಪಯಣದತ್ತ ಹೆಜ್ಜೆ ಇಡುತ್ತಿದೆ. ವಿಶ್ವದಾದ್ಯಂತ 25,000ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳ ಬಲವಾದ ಜಾಲವನ್ನು ಹೊಂದಿರುವ ಈ ಸಂಸ್ಥೆ, ತಮ್ಮ ಹಳೆಯ ವಿದ್ಯಾರ್ಥಿಗಳ ಸಾಧನೆಗಳ ಬಗ್ಗೆ ಹೆಮ್ಮೆಪಡುತ್ತದೆ.
ಈ ಬರುವ ಹಳೆಯ ವಿದ್ಯಾರ್ಥಿಗಳ ಜಾಗತಿಕ ಕೂಟವು, ಕಳೆದ ನಾಲ್ಕು ದಶಕಗಳ ನಿಟ್ಟೆ ಪರಂಪರೆಯನ್ನು ಸಂಭ್ರಮಿಸುವ ಉತ್ಸವವಾಗಿದ್ದು, ವಿಶ್ವದ ವಿವಿಧ ಭಾಗಗಳಿಂದ ಸುಮಾರು 1,000 ಹಳೆಯ ವಿದ್ಯಾರ್ಥಿಗಳು ಈ ಕೂಟದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ

















