ಗೋಳಿತ್ತೊಟ್ಟು: ಕಾಡಾನೆ ದಾಳಿ-ಕೃಷಿ ನಾಶ
ನೆಲ್ಯಾಡಿ: ಗೋಳಿತ್ತೊಟ್ಟು ಪರಿಸರದಲ್ಲಿ ಕಳೆದ 1 ವಾರದಿಂದ ಕಾಡಾನೆಯೊಂದು ಕೃಷಿ ತೋಟಗಳಿಗೆ ದಾಳಿ ನಡೆಸಿ ಅಪಾರ ಕೃಷಿ ನಾಶಗೊಳಿಸಿರುವುದಾಗಿ ವರದಿಯಾಗಿದೆ.
ಗೋಳಿತ್ತೊಟ್ಟು ಗ್ರಾಮದ ಚೆನ್ನಪ್ಪ ಗೌಡ ಕುದ್ಕೋಳಿ, ಚಿದಾನಂದ ಗೌಡ ಅನಿಲ, ಪಿಲಿಫ್ ಬಳಕ ಹಾಗೂ ಪರಿಸರದ ನಿವಾಸಿಗಳ ತೋಟಗಳಿಗೆ ಕಾಡಾನೆ ದಾಳಿ ನಡೆಸಿದ್ದು ಅಪಾರ ಪ್ರಮಾಣದ ಕೃಷಿ ನಾಶಗೊಳಿಸಿದೆ.
ಗ್ರಾಮಸ್ಥರ ದೂರಿನ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಎ.11ರಂದು ಪರಿಸರಕ್ಕೆ ಭೇಟಿ ನೀಡಿದ್ದು ಅರಣ್ಯದಂಚಿನಲ್ಲಿ ಕಾಡಾನೆಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಯಾವುದೇ ಸುಳಿವು ದೊರೆತಿಲ್ಲ ಎಂದು ವರದಿಯಾಗಿದೆ.