ಗೃಹಲಕ್ಷ್ಮೀ ಗೆ ಅಡ್ಡಿಯಾಗುತ್ತಿದ್ದಾನೆ ಸರ್ವರ್ ಡೌನ್ ಎಂಬ ಭೂತ..!

ಸರ್ಕಾರದ ಯೋಜನೆಗಳು ಉತ್ತಮವಾಗಿದ್ದರೂ ಅದು ಕಾರ್ಯಗತವಾಗಲು ನೂರೆಂಟು ಅಡ್ಡಿ ಆತಂಕಗಳು.ಗೃಹಜ್ಯೋತಿ ಬಹಳಷ್ಟು ಕುಟುಂಬಗಳ ಮನೆಮನ ಬೆಳಗಿದೆ, ಕಾರಣ ಅದರ ಅನುಷ್ಠಾನಕ್ಕೆ ಯಾವುದೇ ಸರ್ವರ್ ಡೌನ್ ಎಂಬ ಸೈಬರ್ ಗಳ ಸ್ಲೋ ಗನ್ ಅಡ್ಡಿ ಮಾಡಿಲ್ಲ. ಇದೀಗ ಒಂದೊಂದು ಸೈಬರ್ ಶಾಪ್ ಗಳಲ್ಲಿ ಗೃಹಲಕ್ಷ್ಮೀ ಯೋಜನೆಯನ್ನು ಅನುಷ್ಠಾನಗೊಳಿಸಲು ಹತ್ತಾರು ಮಹಿಳೆಯರ ಗುಂಪು ಕಾಯುತ್ತಿರುವುದು ಕಾಣ ಬಹುದು, ಕಾರಣ ಸರ್ವರ್ ಡೌನ್….ಈ ಸರ್ವರ್ ಡೌನ್ ಎಂಬುದು ಯಾರ ಸೃಷ್ಠಿ..? ಗೃಹಜ್ಯೋತಿ ಯೋಜನೆಗೆ ಇಲ್ಲದ ಈ ಸರ್ವರ್ ಡೌನ್ ಗೃಹಲಕ್ಷ್ಮೀ ಯೋಜನೆಗೆ ಯಾಕೆ ಅಂಟಿಕೊಂಡಿದೆ. ಸುಖಸುಮ್ಮನೆ ಮನೆ ಮಹಿಳೆಯರನ್ನು ದಿನನಿತ್ಯ ಸೈಬರ್ ಕಾಯಿಸುವ ಬದಲು ಯೋಜನೆಗಳ ಅನುಷ್ಠಾನಕ್ಕೆ ಪೂರಕ ವ್ಯವಸ್ಥೆ ಕಲ್ಪಿಸಿದ ಬಳಿಕ ಮಾಹಿತಿ ಪ್ರಕಟಿಸಲಿ ಎಂಬುದು ಗೃಹಲಕ್ಷ್ಮೀ ಗಳ ಮಾತು.

Related Posts

Leave a Reply

Your email address will not be published.