ಜಿಂಕೆ ಬೇಟೆಯಾಡಿದ ಆರೋಪಿ ಬಂಧನ
ಗುಂಡ್ಲುಪೇಟೆ: ಕಾಡಿನಲ್ಲಿ ಜಿಂಕೆ ಬೇಟೆಯಾಡಿ ಮಾಂಸ ಸಾಗಾಣಿಕೆ ಅರಣ್ಯಾಧಿಕಾರಿಗಳು ದಾಳಿ ಒಬ್ಬನ ಬಂಧನ ಇಬ್ಬರು ಪರಾರಿ.. ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಮದ್ದೂರು ವಲಯದ ಮಾವಿನ ಮರದ ಹಳ್ಳ ಅರಣ್ಯ ಪ್ರದೇಶದಲ್ಲಿ ಮೂವರು ಅರಣ್ಯ ಪ್ರದೇಶದಲ್ಲಿ ಒಂಟಿ ನಳಿಕೆ ಬಂದೂಕಿನಿಂದ ಒಂದು ಜಿಂಕೆಯನ್ನು ಕೊಂದು ಮಾಂಸವಾಗಿ ಪರಿವರ್ತಿಸಿ ಹೊತ್ತಿಕೊಂಡು ಬರುತ್ತಿರುವುದನ್ನು ಕಂಡುಬಂದು ಆರೋಪಿಗಳನ್ನು ಸುತ್ತುವರೆದು ಹಿಡಿಯುವ ಪ್ರಯತ್ನ ಮಾಡಿದಾಗ, ಒಬ್ಬ ಆಸಾಮಿಯು ಕಾಡಿನಲ್ಲಿ ಸಿಕ್ಕಿಬಿದ್ದು ಉಳಿದ ಇಬ್ಬರೂ ಒಂಟ ನಳಿಕೆ ಬ0ದೂಕಿನೊಂದಿಗೆ ತಪ್ಪಿಸಿಕೊಂಡು ಓಡಿ ಹೋಗಿರುತ್ತಾರೆ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ ಒಳಗೆ ಜಿಂಕೆಮಾಂಸವಿದ್ದು ಆರೋಪಿಯು ತಾಲೂಕಿನ ಬೇರಂಬಾಡಿ ಗ್ರಾಮದ ವಿಷಕಂಠ ( 46) ಚಿಂಕೆ ಮಾಂಸವನ್ನು ತಾನು ತಿನ್ನಲು ಹಾಗೂ ಮಾರಾಟ ಮಾಡುವ ಉದ್ದೇಶಕ್ಕಾಗಿ ವನ್ಯ ಪ್ರಾಣಿಯಾದ ಜಿಂಕೆಯನ್ನು ಬೇಟೆಯಾಡಿ ಮಾಂಸವನ್ನು ಕಳ್ಳ ಸಾಗಾಣಿಕೆ ಮಾಡುತ್ತಿದಿದ್ದು ಎಂದು ಆರೋಪಿಯು ವಿಚಾರಣೆಯಲ್ಲಿ ಒಪ್ಪಿಕೊಂಡಿದು ಆರೋಪಿಯ ಮೇಲೆ ಅರಣ್ಯ ಮೊಕದ್ದಮೆ ಯನ್ನು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮುಂದುವರೆದು ಸದರಿ ಪ್ರಕರಣಕ್ಕೆ ಸಂಬಂದಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯಕ್ಕೆ ತಂಡವನ್ನು ರಚಿಸಲಾಗಿದೆ ಈ ಸಂದರ್ಭದಲ್ಲಿ ಗುಂಡ್ಲುಪೇಟೆ ಎಸಿಎಫ್ ರವೀಂದ್ರ ಆರ್ .ಎಫ್.ಓ.ಗಳಾದ ನವೀನಕುಮಾರ್ ಮಲ್ಲೇಶ,ಡಿ.ಆರ್. ಎಫ್.ಓ ಗಳಾದ ಕಿರಣ್ ಕುಮಾರ್,ರಮೇಶ ಮಠಪತಿ,ಹಾಗೂ ಇತರೆ ಸಿಬ್ಬಂದಿಗಳು ಭಾಗವಹಿಸಿದರು..