ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 12 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಇಮ್ರಾನ್ ಮಂಜಿಲ್ ಬಂಧನ

ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಮಂಗಳೂರು ಉತ್ತರ ಪೊಲೀಸ್ ಠಾಣಾ ಅಕ್ರ 412/2004 U/s 143,147,148,323,427,506,149 ಐಪಿಸಿ ಪ್ರಕರಣದ ಹಾಗೂ ಮಾನ್ಯ 2 ನೇ ಸಿ.ಜೆ.ಎಂ ನ್ಯಾಯಾಲಯ ಮಂಗಳೂರು ಸಿ. ಸಿ ನಂಬ್ರ 12-2007 ರಲ್ಲಿ ಆರೋಪಿ ಅಲ್ತಾಪ್ ಪ್ರಾಯ 47 ವರ್ಷ ತಂದೆ : ಇಸ್ಮಾಯಿಲ್ @ ಮೊಹಮ್ಮದ್ ವಾಸ: 25-82, ಇಮ್ರಾನ್ ಮಂಜಿಲ್, ಎಮ್ ಜಿ ಎಮ್ -967, ಕಸಬ ಬೆಂಗ್ರೆ ಮಂಗಳೂರು ತಾಲೂಕು ಎಂಬಾತನು ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆ ಸಮಯ ಹಾಜರಾಗದೆ ಸುಮಾರು 12 ವರ್ಷಗಳಿಂದ ತಲೆ ಮರೆಸಿಕೊಂಡಿದ್ದು ಮಾನ್ಯ ನ್ಯಾಯಾಲಯವು LPC ಪ್ರಕರಣವೆಂದು ಪರಿಗಣಿಸಿರುತ್ತದೆ. ಅದರಂತೆ ಆರೋಪಿಯ ಪತ್ತೆಯ ಬಗ್ಗೆ ಉತ್ತರ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಎ ಎಸ್ ಐ ಬಾಬು & ಪಿ ಸಿ 3264 ನೇ ಗುರು ಬಿ ಟಿ ಹಾಗೂ ಪಿ ಸಿ 311 ನೇ ಸುನಿಲ್ ಕುಮಾರ್ ಎನ್ ರವರೊಳಗೊಂಡ ತಂಡ ಕಾರ್ಯಾಚರಿಸಿ ದಿನಾಂಕ 05/10/2025 ರಂದು ಆರೋಪಿಯನ್ನು ಖಚಿತ ಮಾಹಿತಿ ಮೇರೆಗೆ ಮಂಗಳೂರು ನಗರದ ಬಂದರು ಪರಿಸರದಲ್ಲಿ ದಸ್ತಗಿರಿ ಮಾಡಿ ಮಂಗಳೂರಿನ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.