ಪಡುಬಿದ್ರಿ ಖಾಸಗಿ ಬಸ್‍ನ ಟಯರ್ ಸ್ಪೋಟ, ಪ್ರಯಾಣಿಕನಿಗೆ ಗಾಯ

ಖಾಸಗಿ ವಿಶಾಲ್ ಬಸ್ಸಿನ ಟಯರ್ ಸ್ಫೋಟಗೊಂಡ ಪರಿಣಾಮ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನ ಕಾಲಿಗೆ ಗಂಭೀರ ಹೊಡೆತ ಬಿದ್ದ ಘಟನೆ ಇದೀಗ ಸಂಜೆ ಪಡುಬಿದ್ರಿ ಬಸ್ ತಂಗುದಾಣದಲ್ಲಿ ನಡೆದಿದೆ. ಗಾಯಾಗೊಂಡವರು ಪ್ರಯಾಣಿಕ ಧನರಾಜ್, ಕಾರ್ಕಳದಿಂದ ಮಂಗಳೂರು ಕಡೆಗೆ ಹೋಗಲು ಪಡುಬಿದ್ರಿ ಬಸ್ ತಂಗುದಾಣದಲ್ಲಿ ಬಂದು ನಿಲ್ಲುತ್ತಿದಂತೆ, ಬಸ್ಸಿನ ಬಲ ಬದಿಯ ಹಿಂದಿನ ಟಯರ್ ಬಾರೀ ಸದ್ದಿನೊಂದಿಗೆ ಸ್ಫೋಟಗೊಂಡಿದ್ದು, ಬಸ್ಸಿನ ಟಯರ್ ನ ಮೇಲ್ಭಾಗ ಪ್ಲಾಟ್ ಪಾರ್ಮ್ ಛಿಂದಿಯಾಗಿ ಕುಳಿತಿದ್ದ ಪ್ರಯಾಣಿಕನ ಕಾಲಿಗೆ ಗಂಭೀರ ಗಾಯಗೊಂಡು ಸ್ಥಳೀಯ ಸಿದ್ದಿವಿನಾಯಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಲಾಗಿದೆ.