ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ

ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲ ನೂತನ ಪಧಾದಿಕಾರಿಗಳ ಪದಗ್ರಹಣ ಸಮಾರಂಭ ಕಾವೂರಿನಲ್ಲಿ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಜೆಪಿ ಜಿಲ್ಲಾಧ್ಯಕ್ಷ್ಷ ಸತೀಶ್ ಕುಂಪಲ ಅವರು, ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೩ ಲಕ್ಷಕ್ಕೂ ಅಂಕ ಮತಗಳಿಂದ ಜಯ ಗಳಿಸುವುದು ನಿಶ್ಚಿತ. ಇದಕ್ಕೆ ಕಾರ್ಯಕರ್ತರ ಪರಿಶ್ರಮದಿಂದ ಸಾಧ್ಯವಾಗುತ್ತದೆ ಎಂಬ ನಂಬಿಕೆಯಿದೆ ಎಂದರು.

ಬಳಿಕ ಮಾತಾಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್. ವೈ. ಶೆಟ್ಟಿ ಅವರು ಜನನಾಯಕನಾಗಿ ಬೆಳೆಯಬೇಕಾದರೆ ಹುದ್ದೆ ಅಗತ್ಯವಿಲ್ಲ. ನಿಮ್ಮ ನಿಮ್ಮ ಸ್ಥಳದಲ್ಲಿ ನೀವು ಜನರ ಸಂಕಷ್ಟಗಳಿಗೆ ಸ್ಪಂದಿಸಿದರೆ ಸಾಕು. ನಿಮ್ಮನ್ನು ಪಕ್ಷದ ಪ್ರಮುಖರು ಗುರುತಿಸುತ್ತಾರೆ. ಆದ್ದರಿಂದ ಪಕ್ಷದ ಕಾರ್ಯಕರ್ತರು ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು. ತಳಮಟ್ಟದ ಕಾರ್ಯಕರ್ತರು ಕೆಲಸ ಮಾಡಿದರೆ ಮಾತ್ರ ನಮ್ಮ ಅಭ್ಯರ್ಥಿ ಗೆಲುವು ಸಾಧಿಸಲು ಸಾಧ್ಯ ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ಸಂಘದ ಕಾರ್ಯಕರ್ತನಾಗಿ ಬಿಜೆಪಿಯ ವಿವಿಧ ಹುದ್ದೆಗಳನ್ನು ಅಲಂಕರಿಸಿ ವಿಚಾರಧಾರೆ ಮತ್ತು ನಿಷ್ಠೆಗೆ ಸ್ಪಷ್ಟವಾದ ಉದಾಹರಣೆ ರಾಜೇಶ್ ಕೊಟ್ಟಾರಿ ಎಂಬ ಸಮರ್ಥ ಕಾರ್ಯಕರ್ತನಿಗೆ ಇವತ್ತು ಜವಾಬ್ದಾರಿ ಲಭಿಸಿದೆ ಎಂದರು.

ಮಾಜಿ ಸಚಿವರಾದ ನಾಗರಾಜ ಶೆಟ್ಟಿ, ಕೃಷ್ಣ ಜೆ.ಪಾಲೇಮಾರ್, ಶಾಂತಿ ಪ್ರಸಾದ್ ಹೆಗ್ಡೆ, ಕ್ಯಾ.ಬ್ರಿಜೇಶ್ ಚೌಟ ಮಾತನಾಡಿದರು.ಉತ್ತರಮಂಡಲದ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ ಅವರು ನೂತನ ಅಧ್ಯಕ್ಷ ರಾಜೇಶ್ ಕೊಠಾರಿ ಅವರಿಗೆ ಬಿಜೆಪಿ ಧ್ವಜ ಹಸ್ತಾಂತರಿಸಿ ಶುಭಹಾರೈಸಿದರು. ನೂತನ ತಂಡವು ಸಾಮಾನ್ಯ ಕಾರ್ಯಕತರ ಜತೆಯಾಗಿ ಕೆಲಸ ಮಾಡುವುದೇ ನಮ್ಮ ಗುರಿ ಎಂದು ರಾಜೇಶ್ ಕೊಠಾರಿ ನುಡಿದರು.

ವೇದಿಕೆಯಲ್ಲಿ ಬಿಜೆಪಿ ಮುಖಂಡರಾದ ಪೂಜಾ, ರಣ್‌ದೀಪ್ ಕಾಂಚನ್, ಉಪಮೇಯರ್ ಸುನೀತಾ, ತಿಲಕ್ ರಾಜ್ ಕೃಷ್ಣಾಪುರ, ಕಾರ್ಪೋರೇಟರ್‌ಗಳಾದ ಶ್ವೇತಾ ಪೂಜಾರಿ, ಕಿರಣ್ ಕೋಡಿಕಲ್, ಶೋಭ ರಾಜೇಶ್, ಲಕ್ಷ್ಮಿ ಶೇಖರ್ ದೇವಾಡಿಗ, ಸುಮಂಗಲ, ಗಾಯತ್ರಿ ರಾವ್, ನಯನ ಕೋಟ್ಯಾನ್, ಸುಮಿತ್ರಾ ಕರಿಯ, ಜಯಾನಂದ ಅಂಚನ್, ಸರಿತಾ ಶಶಿಧರ್, ಸಂಗೀತಾ ಆರ್.ನಾಯಕ್, ಮನೋಜ್, ಲೋಹಿತ್ ಅಮೀನ್,ಲೋಕೇಶ್ ಬೊಳ್ಳಾಜೆ, ಭರತ್ ರಾಜ್ ಕೃಷ್ಣಾಪುರ, ಹಾಗೂ ಬಿಜೆಪಿ ನಗರ ಉತ್ತರ ಮಂಡಲದ ವಿವಿಧ ವಿಭಾಗದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪುಷ್ಪರಾಜ್ ಕರ್ಕೇರ ಅತಿಥಿಗಳನ್ನು ಸ್ವಾಗತಿಸಿದರು.

Related Posts

Leave a Reply

Your email address will not be published.