ವಿಕಲ ಚೇತನರಿಗೆ ಸೌಲಭ್ಯಗಳನ್ನು ತಲುಪಿಸಿ: ನ್ಯಾ. ಜೈಬುನ್ನಿಸಾ |ಐಕ್ಯಂ ಸಂಸ್ಥೆಯಲ್ಲಿ ವಿಕಲಚೇತನರ ದಿನಾಚರಣೆ

ಮಂಗಳೂರು : ವಿಕಲಚೇತನರಿಗಾಗಿ ಉಚಿತವಾಗಿ ಕಾನೂನು ನೆರವಿನ ಸೌಲಭ್ಯ ಒದಗಿಸಲಾಗಿದೆ ಈ ಪ್ರಯೋಜನವನ್ನು ವಿಕಲಚೇತನರಿಗೆ ತಲುಪಿಸುವ ನಿಟ್ಟಿನಲ್ಲಿ ನಾಗರಿಕರು ಸ್ಪಂದಿಸಬೇಕು ಎಂದು ಜಿಲ್ಲಾ ನ್ಯಾಯಾಲಯದ ಸೀನಿಯರ್ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಶ್ರೀಮತಿ ಜೈಬುನ್ನಿಸಾ ಅವರು ಹೇಳಿದರು.

ಅವರು ಮಂಗಳೂರಿನ ಕುಲ ಶೇಖರ ಕಲ್ಪನೆಯಲ್ಲಿ ಐಕ್ಯಂ ವಿಕಲಚೇತನರ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾದ ವಿಕಲಚೇತನರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿಕಲಚೇತನರಿಗೆ ಅನೇಕ ರೀತಿಯ ಸೌಲಭ್ಯಗಳನ್ನು ಸರ್ಕಾರದಿಂದ ಒದಗಿಸಲಾಗುತ್ತಿದ್ದು, ಆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳು ಶ್ರಮಿಸಬೇಕು ಎಂದು ಶ್ರೀಮತಿ ಜೈಬುನ್ನಿಸಾ ಅವರು ಈ ಸಂದರ್ಭದಲ್ಲಿ ಹೇಳಿದರು.
ಸಮಾರಂಭದಲ್ಲಿ ಜಯಶ್ರೀ ಆಸ್ಪತ್ರೆಯ ಪುನರ್ವಸತಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಹರೀಶ್ ಎಸ್. ಕೃಷ್ಣ, ಮಂಗಳ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಡಾ. ಭರತ್ ಕೆ.ಎಚ್., ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ಚಂದ್ರಕಲಾ ಡಿ.ರಾವ್ ಶುಭ ಕೋರಿ ಮಾತನಾಡಿದರು.
ಡಾ. ಶೈಲಜಾ ಪೋಷಕರ ಪರವಾಗಿ ಮಾತನಾಡಿದರು. ಸಂಸ್ಥೆಯ ಗೌರವಾಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಪ್ರಸ್ತಾವಿಕ ಮಾತನಾಡಿದರು.
ಸಂಸ್ಥೆಯ ಸ್ಥಾಪಕ ಅಧ್ಯಕ್ಷೆ ಕಮಲಾಕ್ಷಿ ಕುಂದರ್ ಸ್ವಾಗತಿಸಿದರು, ಟ್ರಸ್ಟಿ ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related Posts

Leave a Reply

Your email address will not be published.