ಜಿಲ್ಲಾ ಮಟ್ಟದ ಕರೋಕೆ ಸಂಗೀತ ರಿಯಾಲಿಟಿ ಶೋ ಸ್ಪರ್ಧೆ : ಬಂಟ್ವಾಳದ ಸಾತ್ವಿಕ್ ವಿನ್ನರ್

ಮೂಡುಬಿದಿರೆ: ಜೇಸಿಐ ಮೂಡುಬಿದಿರೆ ತ್ರಿಭುವನ್ ವತಿಯಿಂದ ಜೇಸಿ ಸಪ್ತಾಹದಂಗವಾಗಿ ನಿಶ್ಮಿತಾ ಪ್ಯಾರಡೈಸ್‍ನಲ್ಲಿ ನಡೆದ ಅವಿಭಜಿತ ದ.ಕ.ಜಿಲ್ಲಾ ಮಟ್ಟದ ಕರೋಕೆ ಸಂಗೀತ ರಿಯಾಲಿಟಿ ಶೋ ಸ್ಪರ್ಧೆಯಲ್ಲಿ ಬಂಟ್ವಾಳದ ಸಾತ್ವಿಕ್ ವಿನ್ನರ್ ಆಗಿ ಮೂಡಿ ಬಂದರು. ಹೆಬ್ರಿಯ ಸಂದೀಪ್ ರನ್ನರ್ ಅಪ್ ಹಾಗೂ ಮಂಗಳೂರಿನ ಅಭಿನವ್ ಎಸ್. ಭಟ್ ತೃತೀಯ ಬಹುಮಾನ ಗಳಿಸಿದರು. ರವಿ ಮಿಜಾರು, ಮುರಾರಿ ರಾವ್ ಹೊಸಬೆಟ್ಟು ಹಾಗೂ ಅನುಷಾ ಉಡುಪಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಜೇಸಿಐ ತ್ರಿಭುವನ್‍ನ ಅಧ್ಯಕ್ಷೆ ಶಾಂತಲಾ ಎಸ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಅಧ್ಯಕ್ಷ ಮಹಮ್ಮದ್ ಆರಿಫ್, ಉದ್ಯಮಿಗಳಾದ ಮದ್ದೂಲ್ ಹುಸೇನ್, ದಿನೇಶ್‍ಕುಮಾರ್ ಆ ನಡ್ಕ, ಅನಂತವೀರ್ ಜೈನ್, ಜೇಸಿ ವಲಯ ಸಂಯೋಜಕ ಸಂತೋಷ್ ಕುಮಾರ್ ಭಾಗವಹಿಸಿದರು. ತೀರ್ಪುಗಾರರಾಗಿ ಛಾಯಾಪತಿ ಬೆಂಗಳೂರು, ವಿಜಯಶ್ರೀ ಮುಳಿಯ, ಟಿ.ವಿ.ಗಿರಿ ಸಹಕರಿಸಿದರು. ಕಾರಕ್ರಮ ಸಂಯೋಜಕ ನವೀನ್ ಐ.ಆರ್, ಕಾರ್ಯದರ್ಶಿ ಸುನಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿನಯಚಂದ್ರ ಕಾರ್ಯಕ್ರಮ ನಿರ್ವಹಿಸಿದರು.