ಕಡಬದಲ್ಲಿ ಪ್ರಕೃತಿ ವಿಕೋಪದ ಮುನ್ನೆಚ್ಚರಿಕೆ ಕ್ರಮದ ಕುರಿತು ಸಭೆ

ನೆರೆಪೀಡಿತ ಪ್ರದೇಶಗಳನ್ನು ಗುರುತಿಸಿಕೊಂಡು ಅವುಗಳಲ್ಲಿ ಸಮಸ್ಯೆಗಳು ಉದ್ಬವವಾಗದಂತೆ ಮುನ್ನೆಚ್ಚರಿಕೆವಹಿಸುವ ಕಾರ್ಯ ಗ್ರಾಮ ಮಟ್ಟದಿಂದಲೇ ಆಗಬೇಕು ಎಂದು ದ.ಕ. ಜಿಲ್ಲಾಧಿಕಾರಿ ಮುಲೈ ಮುಹಿಲನ್ ಹೇಳಿದರು.

ಅವರು ಕಡಬ ತಾಲೂಕು ಸೌಧದಲ್ಲಿ ಪ್ರಕೃತಿವಿಕೋಪ ಮುನ್ನೆಚ್ಚರಿಕೆ ಕ್ರಮವಹಿಸುವ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಗ್ರಾಮ ಮಟ್ಟದಲ್ಲಿಯೇ ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಎಲ್ಲೆಲ್ಲಿ ಪ್ರಕೃತಿವಿಕೋಪಗಳು ನಡೆದ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಈ ಹಿಂದೆ ಏನಾಗಿದೆ ಎಂದು ಅಲ್ಲಿನ ಇತಿಹಾಸ ತಿಳಿದುಕೊಂಡು ಮುಂದೆ ಅನಾಹುತಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಸನ್ನದ್ದರಾಗಬೇಕು, ಎಲ್ಲಿ ಏನು ಅವಶ್ಯಕತೆ ಇದೆಯೋ ಅಲ್ಲಿ ನಾಡ ದೋಣಿಗಳು, ಜೆಸಿಬಿ, ಹಿಟಾಚಿಗಳು ಅಥವಾ ಇನ್ನಿತರ ಮುಳುಗು ತಜ್ಞರು ಹಾಗೂ ಸ್ಥಳೀಯವಾಗಿ ದೊರೆಯುವ ಸಮಾಜ ಸೇವಕರುಗಳನ್ನು ಬಳಸಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು, ಯಾವುದೇ ಸಮಸ್ಯೆ ಬಂದಾಗ ತಕ್ಷಣ ಸ್ಪಂದಿಸುವ ನಿಟ್ಟಿನಲ್ಲಿ ಕಂಟ್ರೋಲ್ ರೂಂ ಗೆ ಮಾಹಿತಿ ರವಾನೆ ಮಾಡಬೇಕು, ಮೊಬೈಲ್ ನೆಟ್‍ವರ್ಕ್ ಸಿಗದ ಪ್ರದೇಶಗಳನ್ನು ಗುರುತಿಸಿ ಪರ್ಯಾಯ ಸಂಪರ್ಕ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದರು.

ಪೆÇ್ರಬೊಷನರಿ ಜಿಲ್ಲಾಧಿಕಾರಿ ಮುಕುಲ್ ಜೈನ್, ಪುತ್ತೂರು ಸಹಾಯಕ ಆಯುಕ್ತ ಮಹೇಶ್ಚಂದ್ರ, ಕಡಬ ತಹಸೀಲ್ದಾರ್ ರಮೇಶ್ ಬಾಬು, ಉಪತಹಸೀಲ್ದಾರ್‍ಗಳಾದ ಗೋಪಾಲ್ ಕಲ್ಲುಗುಡ್ಡೆ, ಮನೋಹರ ಕೆ.ಟಿ, ` ಲೊಕೋಪಯೋಗಿ ಎಇಇ ರಾಜಾರಾಮ್, ಜಿ.ಪಂ.ಎಇಇ ಭರತ್ ಬಿ.ಎಂ., ಇಂಜಿನಿಯರ್ ಸಂಗಪ್ಪ ಹುಕ್ಕೇರಿ, ತಾಲೂಕು ಆರೋಗ್ಯಾಧಿಕಾರಿ ಡಾ|ದೀಪಕ್ ರೈ, ಕಡಬ ಮೆಸ್ಕಾಂ ಎಇಇ ಸಜಿಕುಮಾರ್, ಸುಬ್ರಹ್ಮಣ್ಯ ಎಇಇ ವಸಂತ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಪಶು ವೈದ್ಯಾಧಿಕಾರಿ ಡಾ| ಮಲ್ಲಿಕಾ, ಕಂದಾಯ ನಿರೀಕ್ಷಕ ಪೃಥ್ವಿರಾಜ್, ತಾ.ಪಂ. ಸಹಾಯಕ ನಿರ್ದೆಶಕ ಚೆನ್ನಪ್ಪ ಗೌಡ ಕಜೆಮೂಲೆ ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.