ಕಡಬ : ಓಮ್ನಿ-ಕ್ರೆಟಾ ಕಾರು ಡಿಕ್ಕಿ; ಓಮ್ನಿ ಚಾಲಕ ಮೃತ್ಯು, 8 ಮಂದಿ ಗಂಭೀರ ಗಾಯ

ಓಮ್ನಿ ಹಾಗೂ ಕ್ರೆಟಾ ಕಾರು ಢಿಕ್ಕಿಯಾದ ಪರಿಣಾಮ ಓರ್ವ ಮೃತಪಟ್ಟು, ಓಮ್ನಿಯಲ್ಲಿದ್ದ 8 ಮಂದಿ ಗಂಭೀರ ಗಾಯಗೊಂಡ ಘಟನೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಡಿ.23ರ ಶನಿವಾರ ಮಧ್ಯಾಹ್ನ ನಡೆದಿದೆ.

ಓಮ್ನಿ ಚಲಾಯಿಸುತ್ತಿದ್ದ ಸೋಮವಾರ ಪೇಟೆಯ ಚೌಡ್ಲು ಗ್ರಾಮದ ಕೆಂಚುಮನೆ ನಿವಾಸಿ ರವಿ (53) ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟಿದ್ದಾರೆ. ರವಿ ಅವರ ತಾಯಿ ಮಣಿಯಮ್ಮ(75), ಪತ್ನಿ ವಾಣಿ (47), ಪುತ್ರಿ ರಿಷಾ (19), ಪುತ್ರ ಶರಣ್ (10), ಸಹೋದರ ಯೋಗೇಶ್ (55), ಅವರ ಪತ್ನಿ ನೀತು (45), ಪುತ್ರಿ ನೇಹಾ (24), ಪುತ್ರ ಅಂಜನ್ (14) ಗಾಯಗೊಂಡಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.

ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಓಮ್ನಿ ಹಾಗೂ ವಿರುದ್ಧ ದಿಕ್ಕಿನಿಂದ ತೆರಳುತ್ತಿದ್ದ ಕ್ರೆಟಾ ನಡುವೆ ಮರ್ಧಾಳ ಸಮೀಪದ ಅಳೇರಿ ಎಂಬಲ್ಲಿ ತಿರುವಿನಲ್ಲಿ ಅಪಘಾತ ಸಂಭವಿಸಿದೆ.

ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ತಿರುವಿನಲ್ಲಿ ರಸ್ತೆ ಕಿರಿದಾಗಿದ್ದು ರಸ್ತೆಗೆ ತಾಗಿದಂತೆ ಇರುವ ವಿದ್ಯುತ್ ಕಂಬದಿಂದಾಗಿ ಅಲ್ಲಿ ಹಲವು ಅಪಘಾತಗಳು ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ ನುಡಿದರು.

ಕಾರ್ಯಕ್ರಮದಲ್ಲಿ ಶ್ರೀ ರಶೀದ್ ವಿಟ್ಲ, ಸ್ಥಾಪಕರು, ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು; ಶ್ರೀ ಯೋಗೀಶ್ ವಿ. ಸಾಲಿಯಾನ್, ಮಾಲಿಕರು, ಅಮ್ಮಾ ಎಲೆಕ್ಟ್ರಾನಿಕ್ಸ್ ತೊಕ್ಕೊಟ್ಟು ಮತ್ತು ಶ್ರೀ ಟೈಟಸ್ ನೊರೊನ್ಹಾ, ಮಾಲಿಕರು, ರಾಹುಲ್ ಜಾಹೀರಾತು ಸಂಸ್ಥೆ, ಮಂಗಳೂರು ಸೇರಿದಂತೆ ಹಲವಾರು ಗಣ್ಯ ಅತಿಥಿಗಳು ಭಾಗವಹಿಸಿದ್ದರು.

ಗೌರವ ಅತಿಥಿಗಳಾಗಿ ಶ್ರೀಮತಿ ಜಿಯಾನ್ ಲವಿನಾ ಮೊಂತೇರೊ, ಅಧ್ಯಕ್ಷರು, ಮಂಜೇಶ್ವರ ಗ್ರಾಮ ಪಂಚಾಯತ್; ಶ್ರೀ ಸ್ಟ್ಯಾನಿ ಬೆಳಾ, ನಿರ್ಮಾಣ ನಿರ್ದೇಶಕರು, ದಾಯ್ಜಿವರ್ಲ್ಡ್ ಟಿವಿ; ರೆ. ಸಿರಿಲ್ ಡಿಸೋಜಾ, ಸ್ನೇಹಾಲಯದ ಚಾಪ್ಲಿನ್; ಶ್ರೀ ಸ್ಟ್ಯಾನಿ ಫೆನಾಂಡಿಸ್ ಮತ್ತು ಶ್ರೀಮತಿ ವಿದ್ಯಾ ಫೆನಾಂಡಿಸ್, ಬಾಹ್ರೇಯ್ನ್, ಶ್ರೀ ವಿನ್ಸೆಂಟ್ ಜೆರೋಮ್ ಡಿಸಿಲ್ವಾ ಮತ್ತು ಶ್ರೀಮತಿ ಸಿಲ್ವಿಯಾ ರೀಟಾ ಡಿಸಿಲ್ವಾ ಹಾಗೂ ಶ್ರೀ ಡೆನ್ಜಿಲ್ ಮೊನಿಸ್ ಮತ್ತು ಶ್ರೀಮತಿ ಮರಿಟಾ ಮೊನಿಸ್ (ಕುವೇಯ್ಟ್) ಉಪಸ್ಥಿತರಿದ್ದರು.

ಆಚರಣೆಗಳು ಮುಕ್ತಾಯಗೊಳ್ಳುತ್ತಿದ್ದಂತೆ, ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರವು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮತ್ತು ನಿರಂತರ ಬೆಂಬಲದೊಂದಿಗೆ, ಕ್ರಿಸ್‌ಮಸ್ ಸಮಯದಲ್ಲಿ ಮಾತ್ರವಲ್ಲದೆ ವರ್ಷವಿಡೀ ನಿವಾಸಿಗಳ ಜೀವನವನ್ನು ನಡೆಸಲು ಅಗತ್ಯವಾದ ಆರೈಕೆ ಮತ್ತು ಪುನರ್ವಸತಿಯನ್ನು ಒದಗಿಸಲು ಸಹಕರಿಸಿದ ಎಲ್ಲಾ ಕೊಡುಗೆದಾರರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿತು.

Kadaba Accident

Related Posts

Leave a Reply

Your email address will not be published.