ಬಿಳಿನೆಲೆ: ಯುವತಿ ಚೈತನ್ಯ (19) ಅಸೌಖ್ಯದಿಂದ ನಿಧನ
ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಸೂಡ್ಲು ನಿವಾಸಿ ತಿಮ್ಮಪ್ಪ ಗೌಡರ ಪುತ್ರಿ ಚೈತನ್ಯ (19) ಅವರು ಅಸೌಖ್ಯಕ್ಕೆ ಒಳಗಾಗಿ ಡಿಸೆಂಬರ್ 4ರಂದು ಸ್ವಗೃಹದಲ್ಲೇ ದುರ್ಮರಣ ಹೊಂದಿದ್ದಾರೆ.
ಮೃತರು ತಂದೆ, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ.
ಶಿಕ್ಷಣ ಮುಗಿಸಿದ ನಂತರ ಪುತ್ತೂರಿನಲ್ಲಿ ಪ್ರಥಮ ವರ್ಷದ ಫ್ಯಾಷನ್ ಡಿಸೈನ್ ಅಧ್ಯಯನ ಮಾಡುತ್ತಿದ್ದ ಚೈತನ್ಯ ಅವರು ಬಿಳಿನೆಲೆ ಮಹಿಳಾ ಭಜನಾ ತಂಡದ ಸಕ್ರಿಯ ಸದಸ್ಯೆಯಾಗಿದ್ದರು.


















