ಕಡಬ ಪಟ್ಟಣ ಪಂಚಾಯತ್ ಪ್ರಥಮ ಚುನಾವಣೆ:ಶೇ 79.83 ಮತದಾನ

ಕಡಬ: ಕಡಬ ಪಟ್ಟಣ ಪಂಚಾಯತ್ ನಡೆದ ಪ್ರಥಮ ಚುನಾವಣೆಯಲ್ಲಿ ಶೇ 79.83 ಮತದಾನವಾಗಿದ್ದು, ಯಾವುದೇ ಗೊಂದಲವಿಲ್ಲದೆ ಬೆಳಿಗ್ಗೆ 7 ರಿಂದ ಸಂಜೆ ಐದರ ತನಕ ಶಾಂತಿಯುತ ಮತದಾನವಾಗಿದೆ,
32 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭಧ್ರವಾಗಿದ್ದು, ಒಟ್ಟು ಹದಿಮೂರು ವಾರ್ಡ್ಗಳ ಪೈಕಿ ಕಾಂಗ್ರೆಸ್ ಹಾಗೂ ಬಿಜೆಪಿ ಎಲ್ಲಾ ಕ್ಷೇತ್ರಗಳನ್ನು ಅಭ್ಯರ್ಥಿಗಳನ್ನು ಕಣಕಕ್ಕಿಳಿಸಿದ್ದು, ಎಸ್.ಡಿ.ಪಿ.ಐ
-೩, ಮುಸ್ಲಿಂ ಲೀಗ್-೧, ಪಕ್ಷೇತರರು-೨ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ. 10 ವಾರ್ಡ್ಗಳಲ್ಲಿ ನೇರ ಸ್ಪರ್ಧೆ ಎರ್ಪಟ್ಟರೆ, 3 ವಾರ್ಡ್ಗಳಲ್ಲಿ ಬಹುಕೋನ ಸ್ಪರ್ಧೆ ನಡೆದಿದೆ. ಪುರುಷ ಹಾಗೂ ಮಹಿಳಾ ಮತದಾರರು ಸೇರಿ ಒಟ್ಟು 8336 ಮತದಾರರ ಪೈಕಿ 75೦೦ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು ಶೇ 79. 83 ಮತದಾನವಾಗಿದೆ.

ಹಿಂದುಳಿದ ವರ್ಗ ಎ' ಮಹಿಳೆಗೆ ಮೀಸಲಾದ ಕಳಾರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿoದ ತಮನ್ನಾ ಜಬೀನ್, ಬಿಜೆಪಿಯಿಂದ ಪ್ರೇಮಾ, ಎಸ್‌ಡಿಪಿಐನಿಂದ ಸಮೀರಾ ಹಾರಿಸ್, ಪಕ್ಷೇತರರಾಗಿ ಜೈನಾಬಿ. ಸ್ಪರ್ಧಿಸಿದ್ದು ಕಳಾರ ಶಾಲೆಯಲ್ಲಿ ಮತದಾನ ನಡೆಯಿತು. ಪರಿಶಿಷ್ಠ ಜಾತಿ ಮಹಿಳೆಗೆ ಮೀಸಲಾದ ಕೋಡಿಬೈಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿoದ ಮೋಹಿನಿ, ಬಿಜೆಪಿಯಿಂದ ಕುಸುಮ ಅಂಗಡಿಮನೆ ಸ್ಪರ್ಧಿಸಿದ್ದು. ಕಡಬ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ನಡೆಯಿತು. ಸಾಮಾನ್ಯ ಅಭ್ಯರ್ಥಿಗೆ ಮೀಸಲಾದ ಪನ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿoದ ಮಹಮ್ಮದ್ ಪೈಝಲ್, ಬಿಜೆಪಿಯಿಂದ ಆದಂ ಕುಂಡೋಳಿ, ಎಸ್‌ಡಿಪಿಐನಿಂದ ಹಾರಿಸ್ ಕಳಾರ, ಮುಸ್ಲಿಂ ಲೀಗ್‌ನಿಂದ ಕೆ. ಅಬ್ದುಲ್ ರಝಾಕ್ ಸ್ಪರ್ಧಿಸಿದ್ದು, ಪನ್ಯ ಗುರಿಯಡ್ಕ ಶಾಲೆಯಲ್ಲಿ ಮತದಾನ ನಡೆಯಿತು. ಸಾಮಾನ್ಯ ಮೀಸಲು ಬೆದ್ರಾಜೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿoದ ಸೈಮನ್ ಸಿ.ಜೆ, ಬಿಜೆಪಿಯಿಂದ ಅಶೋಕ್ ಕುಮಾರ್ ಪಿ. ಸ್ಪರ್ಧಿಸಿದ್ದು, ಸಂತ ಜೋಕಿಮ್ ಹಿ.ಪ್ರಾ.ಶಾಲೇಯಲ್ಲಿ ಮತದಾನ ನಡೆಯಿತು. ಹಿಂದುಳಿದ ವರ್ಗ
ಎ’ಗೆ ಮೀಸಲಾದ ಮಾಲೇಶ್ವರ ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರಕಾಶ್ ಎನ್.ಕೆ., ಕಾಂಗ್ರೆಸ್‌ನಿoದ ಹನೀಫ್ ಕೆ.ಎಂ. ಸ್ಪರ್ಧಿಸಿದ್ದು ಮಾಲೇಶ್ವರ ಅಂಗನವಾಡಿ ಕೇಂದ್ರದಲ್ಲಿ ಮತದಾನ ನಡೆಯಿತು.
ಸಾಮಾನ್ಯ ಮಹಿಳೆಗೆ ಮೀಸಲಾದ ಕಡಬ ಕ್ಷೇತ್ರಕ್ಕೆ ಕಾಂಗ್ರೆಸ್‌ನಿoದ ನೀಲಾವತಿ ಶಿವರಾಮ್, ಬಿಜೆಪಿಯಿಂದ ಪ್ರೇಮಾ, ಪಕ್ಷೇತರರಾಗಿ ಆಲೀಸ್ ಚಾಕೊ, ಎಸ್‌ಡಿಪಿಐನಿಂದ ಸ್ವಾಲಿಯತ್ ಜಸೀರಾ ಸ್ಪರ್ಧಿಸಿದ್ದು, ಕಡಬ ಅಂಬೇಡ್ಕರ್ ಭವನದಲ್ಲಿ ಮತದಾನ ನಡೆಯಿತು. ಹಿಂದುಳಿದ ವರ್ಗ ಬಿ'ಗೆ ಮೀಸಲಾದ ಪಣೆಮಜಲು ಕ್ಷೇತ್ರದಲ್ಲಿ ಬಿಜೆಪಿಯಿಂದ ಗಣೇಶ್ ಗೌಡ, ಕಾಂಗ್ರೆಸ್‌ನಿoದ ರೋಹಿತ್ ಗೌಡ ಸ್ಪರ್ಧಿಸಿದ್ದು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದನ ನಡೆಯಿತು. ಸಾಮಾನ್ಯ ಮೀಸಲು ಪಿಜಕ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿoದ ಅಶ್ರಫ್ ಶೇಡಿಗುಂಡಿ, ಬಿಜೆಪಿಯಿಂದ ದಯಾನಂದ ಗೌಡ ಪಿ. ಸ್ಪರ್ಧಿಸಿದ್ದು ಪಿಜಕಳ ಶಾಲೆಯಲ್ಲಿ ಮತದಾನ ನಡೆಯಿತು. ಹಿಂದುಳಿದ ವರ್ಗ
ಎ’ಗೆ ಮೀಸಲಾದ ಮೂರಾಜೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಕುಂಞಣ್ಣ ಕುದ್ರಡ್ಕ, ಕಾಂಗ್ರೆಸ್‌ನಿoದ ಕೃಷ್ಣಪ್ಪ ಪೂಜಾರಿ ಸ್ಪರ್ಧಿಸಿದ್ದು ಕಡಬ ಸ.ಪ.ಪೂರ್ವ ಕಾಲೇಜಿನ ಎಡಭಾಗದ ಮತಗಟ್ಟೆಯಲ್ಲಿ ಮತದಾನ ನಡೆಯಿತು.

ಸಾಮಾನ್ಯ ಮಹಿಳೆಗೆ ಮಿಸಲಾದ ದೊಡ್ಡಕೊಪ್ಪ ಕ್ಷೇತ್ರದಲ್ಲಿ ಬಿಜೆಪಿಯಿಂದ ಗುಣವತಿ ರಘುರಾಮ, ಕಾಂಗ್ರೆಸ್‌ನಿoದ ತುಳಸಿ ಸ್ಪರ್ಧಿಸಿದ್ದು, ಕಲ್ಲಂತ್ತಡ್ಕ ಅಂಗನವಾಡಿಯಲ್ಲಿ ಮತದಾನ ನಡೆಯಿತು. ಸಾಮಾನ್ಯ ಮಹಿಳೆಗೆ ಮೀಸಲಾದ ಕೋಡಿಂಬಾಳ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿoದ ಜ್ಯೋತಿ ಡಿ.ಕೋಲ್ಪೆ, ಬಿಜೆಪಿಯಿಂದ ಅಕ್ಷತಾ ಬಾಲಕೃಷ್ಣ ಗೌಡ ಸ್ಪರ್ಧಿಸಿದ್ದು, ಓಂತ್ರಡ್ಕ ಶಾಲೆಯಲ್ಲಿ ಮತದನ ನಡೆಯಿತು. ಪರಿಶಿಷ್ಠ ಜಾತಿ ಅಭ್ಯರ್ಥಿಗೆ ಮೀಸಲಾದ ಮಜ್ಜಾರು ಕ್ಷೇತ್ರದಲ್ಲಿ ಬಿಜೆಪಿಯಿಂದ ಮೋಹನ, ಕಾಂಗ್ರೆಸ್‌ನಿoದ ಉಮೇಶ್ ಮಡ್ಯಡ್ಕ ಕಣದಲ್ಲಿದ್ದು ಕೋಡಿಂಬಾಳ ಶಾಲೆಯಲ್ಲಿ ಮತದಾನ ನಡೆಯಿತು. ಪರಿಶಿಷ್ಠ ಪಂಗಡಕ್ಕೆ ಮೀಸಲಾದ ಪುಳಿಕುಕ್ಕು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿoದ ಕೃಷ್ಣ ನಾಯ್ಕ, ಬಿಜೆಪಿಯಿಂದ ಸದಾನಂದ ನಾಯ್ಕ ಸ್ಪರ್ಧಿಸಿದ್ದು, ಓಂತ್ರಡ್ಕ ಶಾಲೆಯಲ್ಲಿ ಮತದಾನ ನಡೆಯಿತು. ಆ.೨೦ರಂದು ಕಡಬ ಆಡಳಿತ ಸೌಧದಲ್ಲಿ ಮತ ಎಣಿಕೆ ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳಲಿದೆ.
ತಹಸೀಲ್ದಾರ್ ಪ್ರಭಾಕರ ಖಜೂರೆ, ಉಪ ತಹಸೀಲ್ದಾರ್ (ಚುನಾವಣಾ ಶಾಖೆ) ಶಾಯಿದ್ದುಲ್ಲಾ ಖಾನ್, ಚುನಾವಣಾಧಿಕಾರಿಗಳಾದ ಪ್ರಮೋದ್ ಕುಮಾರ್, ವಿಮಲ್ ಬಾಬು, ಸಹಾಯಕ ಚುನಾವಣಾಧಿಕಾರಿಗಳಾದ ಭುವನೇಂದ್ರ ಕುಮಾರ್, ಸಂದೇಶ್, ಜಿ.ಪಂ. ಇಂಜಿನಿಯರ್ ಸಂಗಪ್ಪ ಹುಕ್ಕೇರಿ, ಪಟ್ಟಣ ಪಂಚಾಯಿತಿ ಇಂಜಿನಿಯರ್ ಶಿವಕುಮಾರ್ ಎಂ.ಡಿ.ಚುನವಣಾ ಉಸ್ತುವಾರಿ ವಹಿಸಿಕೊಡಿಂದ್ದರು.
ಜೆಡಿಎಸ್‌ನಿಂದ ಅಭೈರ್ಥಿಗಳೇ ಇಲ್ಲ: ರಾಜ್ಯದಲ್ಲಿ ಬಿಜೆಪಿಯೊಂದಿಗೆ ಜೋಸ್ತಿ ಪಕ್ಷವಾಗಿರುವ ಜೆಡಿಎಸ್ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿದಿಲ್ಲ. ಇಲ್ಲಿ ಬೆಜೆಪಿಯವರು ಜೆಡಿಎಸ್‌ನ್ನು ಹತ್ತಿರಕ್ಕೆ ಸೇರಿಸಕೊಳ್ಳಲಿಲ್ಲ. ಕಡಬ ಜೆಡಿಎಸ್ ಅಧ್ಯಕ್ಷ ಸಯ್ಯದ್‌ಮೀರಾ ಸಾಹೇಬ್ ಅವರ ಸೊಸೆ ತಮನ್ನಾ ಜಬಿನ್ ಕಾಂಗ್ರೇಸ್ ಅಭ್ಯರ್ಥಿಯಾಗಿ ಕಳಾರ ಕ್ಷೇತ್ರದಿಂದ ಸ್ಪಧಿಸಿರುವುದು ಕುತೂಹಲ ಮೂಡಿಸಿದೆ.
ಪಿಜಕಳ ವಾರ್ಡ್ನಲ್ಲಿ ವಿಕಲಾಂಗ ಚೇತನೆಯಾಗಿರುವ ವಯೋವೃದ್ಧೆ ಪಿಜಕಳ ಕೊಂಕ್ಯಾಡಿ ನಿವಾಸಿ ಜಾನಕಿ ಶೀನಪ್ಪ ಗೌಡ ಗಾಲಿ ಕುರ್ಚಿಯಲ್ಲಿ ಬಂದು ಮತದಾನ ಮಾಡಿದರು.
ಮತಗಟ್ಟೆಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಮುಖಂಡರಾದ ಕೃಷ್ಣ ಶೆಟ್ಟಿ ಕಡಬ, ವೆಂಕಟ್ ವಳಲಂಬೆ , ರಾಕೇಶ್ ರೈ , ರವೀಂದ್ರ ಶೆಟ್ಟಿ ಉಳಿತೊಟ್ಟು, ಗಣೇಶ್ ಉದನಡ್ಕ, ಕಾಂಗ್ರೇಸ್ ಮುಖಂಡರಾದ ಜಿ.ಕೃಷ್ಣಪ್ಪ ರಾಮಕುಂಜ , ಪಿ.ಪಿ.ವರ್ಗೀಸ್, ಭರತ್ ಮುಂಡೋಡಿ, ಸತೀಶ್ ಕುಮಾರ್ ಕೆಡೆಂಜಿ, ವಿಜಯಕುಮಾರ್ ರೈ, ಸುಧೀರ್ ಕುಮಾರ್ ಶೆಟ್ಟಿ , ಅಭಿಲಾಷ್ ಪಿ.ಕೆ., ಉಷಾ ಅಂಚನ್, ಬಾಲಕೃಷ್ಣ ಬಳ್ಳೇರಿ , ನೂರೂದೀನ್ ಸಾಲ್ಮರ ಮತ್ತಿತರರ ನಾಯಕರು ಆಗಮಿಸ ಕಾರ್ಯಕರ್ತರಿಗೆ ಹುರಿದುಂಬಿಸಿದರು.