ಖಾಸಗಿ ಬಸ್‍ಗಳಲ್ಲಿ ಕನ್ನಡ ನಾಮಫಲಕ ಬಳಕೆಗೆ ವಿರೋಧ

ಉಡುಪಿ ಮತ್ತು ಮಣಿಪಾಲದಲ್ಲಿ ಸಂಚರಿಸುವ ಬಸ್‍ಗಳಲ್ಲಿ ಕನ್ನಡದಲ್ಲಿ ನಾಮಫಲಕ ಹಾಕುವುದನ್ನು ಪ್ರಾದೇಶಿಕ ಸಾರಿಗೆ ಕಚೇರಿ ಕಡ್ಡಾಯಗೊಳಿಸಿದೆ.ಇತ್ತೀಚೆಗೆ ನಡೆದ ಜನಸ್ಪಂದನ ಸಮಾವೇಶದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈಗಿರುವ ಇಂಗ್ಲಿಷ್ ನಾಮಫಲಕಗಳ ಜೊತೆಗೆ ಕನ್ನಡದಲ್ಲಿ ಮಾರ್ಗ ಸಂಖ್ಯೆಗಳು ಮತ್ತು ಗಮ್ಯಸ್ಥಾನವನ್ನು ನಾಮಫಲಕಗಳಲ್ಲಿ ಪ್ರದರ್ಶಿಸುವಂತೆ ಆರ್‍ಟಿಒ ಎಲ್ಲಾ ಬಸ್ ನಿರ್ವಾಹಕರಿಗೆ ಸೂಚಿಸಿದೆ. ಗಡುವು ಮುಗಿದ ನಂತರ ಬಸ್ ನಿರ್ವಾಹಕರು ಕನ್ನಡದಲ್ಲಿ ನಾಮಫಲಕಗಳನ್ನು ಪ್ರದರ್ಶಿಸದಿದ್ದರೆ ಕಠಿಣ ಕ್ರಮ ಜರುಗಿಸುವುದಾಗಿ ಜಿಲ್ಲಾ ಆರ್‍ಟಿಒ ಅವರು ಸೂಚನೆ ನೀಡಿದ್ದಾರೆ.

ಈಗಾಗಲೇ ಮಂಗಳೂರು ನಗರದ ಖಾಸಗಿ ಬಸ್ಸುಗಳಲ್ಲಿ ನಾಮಫಲಕವನ್ನು ಅಳವಡಿಸಿಸುವ ಕಾರ್ಯ ನಡೆಯುತ್ತಿದ್ದು,ಈ ಬಗ್ಗೆ ಸಾಮಾಜಿಕ ಹೋರಾಟಗಾರ ಜಿ.ಕೆ ಭಟ್ ಅವರು ಮಾತನಾಡಿ ಈಗಾಗಲೇ 20 ರಿಂದ 30ಕ್ಕೂ ಅಧಿಕ ಖಾಸಗಿ ಬಸ್ಸುಗಳಿಗೆ ಕನ್ನಡ ನಾಮಫಲಕವನ್ನು ಅಳವಡಿಸಲಾಗಿದೆ, ಕನ್ನಡ ನಾಮಫಲಕ ಅಭಿಯಾನವು ಯಶಸ್ವಿಯಾಗಿ ನಡೆಯುತ್ತಿದೆ. ಇದಕ್ಕೆ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‍ಟಿಒ) ಹಾಗೂ ಖಾಸಗಿ ಬಸ್ಸಿನವರು ಬಹಳ ಉತ್ತಮವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದರು.

ಇನ್ನೂ ತುಳು ಭಾಷೆಯನ್ನು 8ನೇ ಪರಿಚ್ಛೇದ ಸೇರಿಸಬೇಕು. ಪ್ರತ್ಯೇಕ ತುಳು ರಾಜ್ಯ ಮಾಡಬೇಕೆಂಬ ಎನ್ನುವ ಕೂಗು ಕೇಳಿಬರುತ್ತಿದೆ. ಈ ನಡುವೆ ಕನ್ನಡ ನಾಮಫಲಕ ಅಭಿಯಾನವನ್ನು ನಡೆಸುತ್ತಿರುವುದರ ಬಗ್ಗೆ ತುಳುವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಭಿಯಾನದ ಬಗ್ಗೆ ಹಲವಾರು ಪರ – ವಿರೋಧ ಚರ್ಚೆಗಳು ನಡೆಯುತ್ತಿದೆ.

ಈ ನಡುವೆ ತುಳು ಪರ ಹೋರಾಟಗಾರ ರೋಷನ್ ರೋನಾಲ್ಡ್ ಕನ್ನಡ ಪರ ಅಭಿಯಾನಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಖಾಸಗಿ ಬಸ್ಸಿನವರಿಂದ ಯಾವುದೇ ರಶೀದಿಯನ್ನ ನೀಡದೇ 300 ರೂಪಾಯಿ ತೆಗೆದುಕೊಂಡಿರುವ ಬಗ್ಗೆ ನಾಮಫಲಕ ಅಭಿಯಾನದ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿರುವ ಆಡಿಯೋ ತುಣುಕ ಎಲ್ಲೆಡೆ ವೈರಲ್ ಆಗುತ್ತಿದೆ.

ಖ್ಯಾತ ಯೂ ಟ್ಯೂಬರ್ ಸಚಿನ್ ಶೆಟ್ಟಿಯವರು ಈ ಬಗ್ಗೆ ಜಾಲತಾಣದಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಕನ್ನಡ ನಾಮಫಲಕ ಅಭಿಯಾನಕ್ಕೆ ಬೆಂಬಲ ನೀಡುವುದಿಲ್ಲ, ಇದಕ್ಕೆ ತುಳುವರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ ಕಳೆದ ಅದೇಷ್ಟೋ ವರ್ಷಗಳಿಂದ ಪ್ರತ್ಯೇಕ ತುಳು ರಾಜ್ಯದ ಹೋರಾಟಗಳು ನಡೆಯುತ್ತಿದೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ಅಭಿಯಾನ ಕೂಡ ನಡೆಯುತ್ತಿದೆ. ಮಂಗಳೂರಿನಲ್ಲಿ ಖಾಸಗಿ ಬಸ್‍ಗಳಲ್ಲಿ ಕನ್ನಡ ನಾಮಫಲಕ ಅಳವಡಿಸುವ ಕಾರ್ಯವೂ ನಡೆಯುತ್ತಿದೆ. ಇದಕ್ಕೆ ವಿರೋಧವು ವ್ಯಕ್ತವಾಗುತ್ತಿದೆ. ಕನ್ನಡ ನಾಮಫಲಕ ಅಭಿಯಾನಕ್ಕೆ ಸಹಕರಿಸದಂತೆಯೂ ತುಳುವರು ಮನವಿ ಮಾಡಿಕೊಂಡಿದ್ದಾರೆ.

Related Posts

Leave a Reply

Your email address will not be published.