ಕರಾವಳಿ ನದಿ ತೀರಗಳಲ್ಲಿ ಹೆಚ್ಚುತ್ತಿದೆ ಭೂ ಸವೆತ : ನದಿಯ ಒಡಲು ಸೇರಿ ಮಣ್ಣಿನ ನಾಶ

ಕರಾವಳಿ ಜಿಲ್ಲೆಯಲ್ಲಿ ಪಶ್ಚಿಮಘಟ್ಟದಿಂದ ಹರಿದು ಬರುವ50 ಕ್ಕೂ ಹೆಚ್ಚು ಜೀವ ನದಿಗಳಿಂದ ವರ್ಷದಿಂದ ವರ್ಷಕ್ಕೆ ನದಿ ತೀರದ ಭೂಮಿಗಳು ಮಳೆಗಾಲದಲ್ಲಿ ಬರುವ ಬಾರೀ ಪ್ರವಾಹದಿಂದ ನದಿ ತೀರದ ಭೂಮಿಗಳು ನದಿಯ ಒಡಲು ಸೇರಿ ಮಣ್ಣು ನಾಶವಾಗುತ್ತಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ಭಾಗದಲ್ಲಿ ಹರಿಯುವ 3 ನದಿಗಳಾದ ಸೀತಾ . ಸ್ವರ್ಣಾ ಮತ್ತು ಮಡಿ ಸಾಲು ನದಿಗಳಿಂದ ಕಳೆದ ಹಲವಾರು ವರ್ಷದಿಂದ ನದಿ ತೀರದ ಕೃಷಿ ಭೂಮಿ , ತೆಂಗಿನ ತೋಟ ನದಿಯ ಒಡಲು ಸೇರುತ್ತಿದೆ .

ಸೀತಾ ನದಿಯ ನೀಲಾವರ ಕಿಂಡಿ ಅಣೆಕಟ್ಟು ಮತ್ತು ನೀಲಾವರ ಕೂರಾಡಿ ಸೇತುವೆಯ ನಡುವೆ ತಿರುವು ಇರುವ ನದಿತೀರವಾದ ಬಂಡೀಮಠ ,ಕೂರಾಡಿ ,ಹನೆಹಳ್ಳಿ ತನಕದ ಬಾವಲಿ ಕುದ್ರು ಪ್ರದೇಶದ ಉತ್ತರ ಭಾಗದ 3 ಕಿಮಿ ನದಿತೀರ ವರ್ಷದಿಂದ ವರ್ಷಕ್ಕೆ ಸವೆತ ಹೆಚ್ಚಿ ಅನೇಕ ಕೃಷಿ ಭೂಮಿ ನಾಶವಾಗಿ ಇನ್ನುಳಿದ ಭೂ ಪ್ರದೇಶ ಕೂಡಾ ಮಳೆಗಾಲದ ಬಾರಿ ಪ್ರವಾಹಕ್ಕೆ ಕೊಚ್ಚಿ ಹೋಗುವ ಸಾದ್ಯತೆ ಇದೆ . ಭತ್ತ, ಕಬ್ಬು , ತೆಂಗು, ತರಕಾರಿ ಬೆಳೆಯುತ್ತಿರುವ ನದಿ ತೀರದ ಪ್ರದೇಶ ಈಗಾಗಲೆ ಕೊಚ್ಚಿ ಹೋಗಿದ್ದು ಭೂಮಿಯ ಸವೆತ ತಡೆಯಲು ಕೃಷಿಕರೆ ಮರ ಗಿಡಗಳನ್ನು ಬೆಳೆಸಿರುವುದು ಕೂಡಾ ಕುಸಿದು ಬಿದ್ದು ನದಿಯ ಪಾಲಾಗಿದೆ .

ಸಣ್ಣ ನೀರಾವರಿ ಇಲಾಖೆಅಧಿಕಾರಿಗಳು ಕೆಲವು ಭಾಗದಲ್ಲಿ ಕಲ್ಲು ಕಟ್ಟಿ ತಡೆಗೋಡೆಯ ಕಾಮಗಾರಿ ಮಾಡಿ ಸರಕಾರದ ಬೊಕ್ಕಸ ಖಾಲಿ ಮಾಡಿದ್ದಾರೆ. ಆದರೆ ಸಮಸ್ಯೆಯ ತಿರುವಿನ ಜಾಗವನ್ನು ಪರಿಶೀಲನೆ ಮಾಡಿ ನೈಜವಾಗಿ ಭೂ ಸವೆತ ಉಂಟಾಗುವಲ್ಲಿ ತಡೆಗೋಡೆ ಮಾಡಿ ಭೂಮಿಯ ಸವೆತ ತಡೆಯಬೇಕಾಗಿದೆ .
