ಕಾರ್ಕಳ: 6ನೇ ದಿನಕ್ಕೆ ಕಾಲಿಟ್ಟ ಕಟ್ಟಡ ಸಾಮಾಗ್ರಿ ವಾಹನ ಸಾಗಾಟ ಚಾಲಕರ ಮುಷ್ಕರ

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಟ್ಟಡ ಸಾಮಾಗ್ರಿ ವಾಹನ ಸಾಗಾಟ ಚಾಲಕರು ಕಳೆದ ಆರು ದಿನಗಳಿಂದ ಮುಷ್ಕರ ನಡೆಸುತ್ತಿದ್ದು, ಇವರ ಸಮಸ್ಯೆಗಳಿಗೆ ಯಾರೂ ಸ್ಪಂದಿಸುತ್ತಿಲ್ಲ.

ಕಟ್ಟಡ ಕಾರ್ಮಿಕರಿಗೆ ಕಟ್ಟಡ ಸಾಮಾಗ್ರಿಗಳನ್ನು ಸರಬರಾಜು ಮಾಡುತ್ತಿದ್ದ ವಾಹನಗಳು ರಸ್ತೆಗೆ ಇಳಿಯದೆ ಪ್ರತಿಭಟನೆಯಲ್ಲಿ ತೊಡಗಿವೆ. ಇದರಿಂದ ಕಟ್ಟಡ ಕೆಲಸವನ್ನು ನಂಬಿಕೊಂಡು ಬಂದಿರುವ ಕಾರ್ಮಿಕರು ಆರು ದಿನಗಳಿಂದ ಕೆಲಸವಿಲ್ಲದೆ ಆಲೆದಾಡುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಇಲ್ಲದ ಕಾನೂನನ್ನು ನಮ್ಮ ಜಿಲ್ಲೆಯಲ್ಲಿ ಅಧಿಕಾರಿಗಳು ಯಾಕೆ ಹೇರಿದ್ದಾರೆಂದು ಅರ್ಥ ಆಗುತ್ತಿಲ್ಲ.

ಇದರಿಂದ ಎಲ್ಲಾ ಕಟ್ಟಡ ಕಾಮಗಾರಿಗೆ ಕೆಲಸಗಳು ನಿಂತು ಹೋಗಿದೆ. ಇದರ ಪರಿಣಾಮದಿಂದ ಕಾರ್ಕಳ ತಾಲೂಕಿನ ಸುಮಾರು 3000 ಕಾರ್ಮಿಕರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಆದಷ್ಟು ಬೇಗ ನಮ್ಮ ಸಮಸ್ಯೆಯನ್ನು ಜಿಲ್ಲೆಯ ಅಧಿಕಾರಿಗಳು ಬಗೆಹರಿಸಬೇಕೆಂದು ಕಟ್ಟಡ ಕಾರ್ಮಿಕರ ಗುತ್ತಿಗೆದಾರರ ಕಾರ್ಯದರ್ಶಿ ಪ್ರವೀಣ್ ಸಾಲಿಯನ್ ಆಗ್ರಹಿಸಿದ್ದಾರೆ. ನಂತರ ಅನಂತ ಶಯನವೃತ್ತದಿಂದ ತಾಲೂಕು ಕಚೇರಿವರೆಗೆ ಕಟ್ಟಡ ಕಾರ್ಮಿಕರು ಮೆರವಣಿಗೆ ಮೂಲಕ ದಂಡಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಡಿಸಿಸಿ ಗುತ್ತಿಗೆದಾರರ ಅಧ್ಯಕ್ಷರಾದ ದಾಮೋದರಾಚಾರ್ಯ, ಚಂದ್ರಶೇಖರ್ ಆಚಾರ್ಯ, ಕೋಶಾಧಿಕಾರಿ ಪ್ರಶಾಂತ್ ಆಚಾರ್ಯ ಉಪಸ್ಥಿತರಿದ್ದರು.

Related Posts

Leave a Reply

Your email address will not be published.