ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಅಂಬುಲೆನ್ಸ್ : ರೋಗಿಗಳು ಸಣ್ಣಪುಟ್ಟ ಗಾಯಗಳಿಂದ ಪಾರು

ಕಾರ್ಕಳ ಬಂಗ್ಲೆ ಗುಡ್ಡೆ ಬಳಿ, ಖಾಸಗಿ ಆಸ್ಪತ್ರೆಯ ರೋಗಿಗಳನ್ನು ತಮ್ಮ ಮನೆಗೆ ಬಿಡಲು ಕಾರ್ಕಳದಿಂದ ಕಡ್ತಲಕ್ಕೆ ಹೋಗುವಾಗ ಬಂಗ್ಲೆ ಗುಡ್ಡೆ ಬಳಿ ಅತಿ ವೇಗದಿಂದ ಬರುತ್ತಿದ್ದ ದ್ವಿಚಕ್ರ ವಾಹನವನ್ನು ತಪ್ಪಿಸಲು ಹೋಗಿ ಆಂಬುಲೆನ್ಸ್ ಮಾರ್ಗದಲ್ಲಿ ಪಲ್ಟಿ ಯಾದ ಘಟನೆ ನಡೆದಿದೆ. ಈ ವೇಳೆಯಲ್ಲಿ ಅಂಬುಲೆನ್ಸಿನ ಒಳಗಿದ್ದ ರೋಗಿಗಳಿಗೆ ಸಣ್ಣಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾಗಿದ್ದಾರೆ.
ಕಾರ್ಕಳದ ಮಣಿಪಾಲ ರೋಟರಿ ಆಸ್ಪತ್ರೆಗೆ ಸೇರಿದ ಅಂಬುಲೆನ್ಸ್ ಎದುರಿನಿಂದ ವೇಗವಾಗಿ ಬರುತಿದ್ದ ಬೈಕ್ ಸವಾರನ ಸಂಭಾವ್ಯ ಅಪಘಾತ ತಪ್ಪಿಸುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡಲಾಗಿ ಬಿದ್ದಿದೆ ಎನ್ನಲಾಗಿದೆ. ಅಸ್ಪತ್ರೆಯಲ್ಲಿ ಕಣ್ಣಿನ ಚಿಕಿತ್ಸೆ ನಡೆಸಿ ಮನೆಗೆ ಕಡ್ತಲಕ್ಕೆ ಕರೆದೊಯ್ಯಲಾಗುತಿದ್ದ ಸಮಯದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಅಂಬುಲೆನ್ಸ್ ಒಳಗಿದ್ದ ರೋಗಿಗಳಿಗೆ ಸಣ್ಣಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾಗಿದ್ದಾರೆ.
