ಕಾರ್ಕಳ: ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ ಸಂಪನ್ನ
ಕಾರ್ಕಳದ ಸಂತ ಲರೆನ್ಸ್ ರ ಬಸಿಲಿಕದ ಆರು ದಿನಗಳ ನಡೆದ ವಾರ್ಷಿಕ ಮಹೋತ್ಸವ ತುಂಬಾ ಅದ್ದೂರಿಯಿಂದ ಹಾಗೂ ವಿಜೃಂಭಣೆಯಿಂದ ಜರುಗಿತು. ದೇವರಿಗೆ ಮಹಿಮೆ ಕೊಡಲು ಸ್ವಂತ ಲಾರೆನ್ ಸರ ಪ್ರಾರ್ಥನೆ ಹಾಗೂ ಮಧ್ಯ ಸ್ಥಿತಿಯಿಂದ ಅವರ ಪ್ರಸನ್ನತೆಯಿಂದ ಅತಿ ವಿಜೃಂಭಣೆಯಿಂದ ಜರುಗಿತು.
ಕಳೆದ ಆರು ದಿನಗಳಿಂದ ೫೨ ಬಲಿ ಪೂಜೆಗಳು ನಡೆದಿವೆ ಇನ್ನೂರಕೂ ಹೆಚ್ಚಿನ ಧರ್ಮ ಗುರುಗಳು ಪಾಪ ನಿವೇದನೆಗಾಗಿ ಭಾಗವಹಿಸಿದ್ದರು. ಕಾರ್ಕಳ ಗ್ರಾಮಾಂತರ ಹಾಗೂ ನಗರ ಠಾಣಾ ಪೊಲೀಸ್ ಹಾಗೂ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಅತಿಯಾದ ಮುತವರ್ಜಿ ಹಾಗೂ ಶಿಸ್ತನ್ನು ಗಂಭೀರವಾಗಿ ತೆಗೆದುಕೊಂಡು ನಮ್ಮ ಭಕ್ತಾದಿಗಳಿಗೆ ಅತಿ ಹೆಚ್ಚಿನ ಸಹಕಾರವನ್ನು ನೀಡಿದ್ದಾರೆ. ಅವರಿಂದಾಗಿ ನಮ್ಮ ಎಲ್ಲ ಕಾರ್ಯಕ್ರಮಗಳು ಸಾಂಗವಾಗಿ ನಡೆದಿದೆ. ಅವರಿಗೆ ಈ ಸಂದರ್ಭದಲ್ಲಿ ತುಂಬು ಹೃದಯದ ಕೃತಜ್ಞತೆಯನ್ನು ಸಮರ್ಪಿಸುತ್ತೇವೆ ಧರ್ಮ ಗುರುಗಳಾದ ಅಲ್ಬನ್ ಡಿಸೋಜಾ ಹೇಳಿದರು.