ಕಾರ್ಕಳ : ಕಾನೂನು ಬಾಹಿರ ಮಣ್ಣು ಸಾಗಾಟ ವಾಹನಗಳಿಗೆ ದಂಡ ವಿಧಿಸಲು ಡಿವೈಎಸ್ಪಿ ಸೂಚನೆ
ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ ತೊಂದರೆಯುಂಟು ಮಾಡಿ ರಸ್ತೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ನಡೆಸುತ್ತಿರುವ ವಾಹನಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಾರ್ಕಳ ಡಿವೈಎಸ್ಪಿ ಅರವಿಂದ ಕಲ್ಲಗುಜ್ಜಿ ಕಾಪು ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಕಟಪಾಡಿ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಯಾವುದೇ ಮೂಲಾಜಿ ಇಲ್ಲದೆ ಟಿಪ್ಪರಲ್ಲಿ ಕ್ಯಾಬಿನ್ ಎತ್ತರಕ್ಕೆ ಮಣ್ಣು ತುಂಬಿಸಿಕೊಂಡು ಯಾವುದೇ ಟರ್ಪಾಲು ಹೊದಿಕೆಯನ್ನು ಹಾಕದೆ ದೂಳೆಬ್ಬಿಸುತ್ತಾ ಸಾಲುಗಟ್ಟಿ ಟಿಪ್ಪರ್ ಗಳು ಸಾಗುತ್ತಿದ್ದು, ಈ ಬಗ್ಗೆ ಮಾಹಿತಿ ಪಡೆದ ಅವರು ಕಾಪು ಪೊಲೀಸರಿಗೆ ಅಂಥಹ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.