ಕಾರ್ಕಳ : ಥೀಂ ಪಾರ್ಕಿನಲ್ಲಿ ಪರಶುರಾಮನ ಕಂಚಿನ ಪ್ರತಿಮೆಯೇ ಇರಬೇಕು: ಮುನಿಯಾಲು ಉದಯ ಶೆಟ್ಟಿ

ಕಾರ್ಕಳ : ತಾಲ್ಲೂಕಿನ ಬೈಲೂರು ಉಮಿಕಲ್ ಬೆಟ್ಟದಲ್ಲಿ ಪುನರಪಿ ಪರಶುರಾಮನ ಕಂಚಿನ ಪ್ರತಿಮೆಯನ್ನೇ ಸ್ಥಾಪಿಸಬೇಕು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ಆಗ್ರಹಿಸಿದ್ದಾರೆ.

ತಾಲ್ಲೂಕಿನ ಬೈಲೂರು ಪರಶುರಾಮ ಥೀಮ್ ಪಾರ್ಕ್ ಪರಿಸರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಂಚಿನ ಮೂರ್ತಿಯನ್ನು ಮಾಡಲು ಕನಿಷ್ಠ 2ವರ್ಷವಾದರೂ ಅಗತ್ಯವಿದೆ. ಪ್ರವಾಸೋದ್ಯಮ ಇಲಾಖೆದವರು ನಿರ್ಮಿತಿ ಕೇಂದ್ರದವರಿಗೆ ನೀಡಿದ್ದು, ನಿರ್ಮಿತಿ ಕೇಂದ್ರದವರು ಅದನ್ನು ಮಾಡುವುದು ಯೋಗ್ಯವಲ್ಲ. ಅದನ್ನು ಬದಲಾಯಿಸಿ ಸತ್ಯಶೋಧನಾ ಸಮಿತಿಯ ಉಸ್ತುವಾರಿಯಲ್ಲಿ ಶಾಶ್ವತ ಯೋಜನೆ ರೂಪಿಸಬೇಕು.

ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರ ಶಾಸಕರನ್ನು ಒಳಗೊಂಡ ಸಮಿತಿಯ ನೇತೃತ್ವದಲ್ಲಿ ನಾಡಿನ ಎನ್ ಐಟಿ ಕೆ ಅಥವಾ ಎಂಐಟಿ ಯ ತಂತ್ರಜ್ಞರಿಂದ ಅದರ ಪಂಚಾಂಗದ ಪರಿಶೀಲನೆ ನಡೆಸಿ ಕಾಮಗಾರಿ ನಡೆಸಬೇಕು. ಹಣ ವ್ಯರ್ಥವಾಗದಂತೆ ಕಾಮಗಾರಿ ನಡೆಸಬೇಕು. ರಾಜ್ಯದಲ್ಲಿ ಈಗ ನಮ್ಮ ದೇ ಸರ್ಕಾರವಿದೆ. ಪ್ರವಾಸೋದ್ಯಮ ದೃಷ್ಟಿಯಲ್ಲಿ ನಡೆಯಬೇಕು ಎಂದರು.

ಕಾಂಗ್ರೆಸ್ ಸದಸ್ಯ ಸುರೇಂದ್ರ ಶೆಟ್ಟಿ, ಸುಭಿತ್ ಎನ್ ಆರ್, ಪ್ರತಿಮಾ ರಾಣಿ, ಶುಭದ ರಾವ್, ಅಣ್ಣಪ್ಪ ನಕ್ಷೆ, ಸಂದೀಪ್ ಶೆಟ್ಟಿ, ನಿತೇಶ್ ಶೆಟ್ಟಿ ಇದ್ದರು.

Related Posts

Leave a Reply

Your email address will not be published.