ಕಾರ್ಕಳ : ಟಿಪ್ಪರ್-ಬೈಕ್ ನಡುವೆ ಅಪಘಾತ : ಬೈಕ್ ಸವಾರರಿಗೆ ಗಾಯ
ಬೈಕ್ ಹಾಗೂ ಟಿಪ್ಪರ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಮುಂಡ್ಕೂರು ಇಂದಿರಾ ನಗರ ಬಜ್ಪೆ ಅತ್ರಾಡಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಮುಂಡ್ಕೂರು ಕಡೆಯಿಂದ ಬೆಳ್ಮಣ್ ಕಡೆ ಸಾಗುತ್ತಿದ್ದ KA 1969 ನಂಬರ್ ನ ಬೈಕ್ ನಲ್ಲಿ ಅಶ್ವಿನ್ ಎಂಬವರು ಆದೇಶ್ ಎಂಬವರನ್ನು ಸಹಸವಾರನಾಗಿ ಕುಳ್ಳರಿಸಿಕೊಂಡು ಹೋಗುತ್ತಿದ್ದಾಗ ಬೆಳ್ಮಣ್ ಕಡೆಯಿಂದ ಮುಂಡ್ಕೂರು ಕಡೆ ಸಾಗುತ್ತಿದ್ದ ಕೆ ಎ 20 ಡಿ 56 66 ನಂಬರಿನ ಲಾರಿ ಮುಖಾಮುಖಿ ಡಿಕ್ಕಿಯಾಗಿದೆ.ಪರಿಣಾಮ ಬೈಕ್ ಮುಂಬಾಗ ಸಂಪೂರ್ಣ ನಜುಗುಜ್ಜಾಗಿದ್ದು ಬೈಕ್ ಸವಾರರು ಗಂಭೀರ ಗಾಯಗೊಂಡಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.