ಕಾರ್ಕಳ : ರಕ್ತದಾನ ಶಿಬಿರ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಶ್ರೇಷ್ಠ ವ್ಯಕ್ತಿಗಳಲ್ಲಿ ದೇವರಂತಹ ಹೃದಯವಿರುತ್ತದೆ. ಆದ್ದರಿಂದ ಉದಯ್ ಶೆಟ್ಟಿ ಮುನಿಯಾಲು ಎಲ್ಲರ ಗೌರವಕ್ಕೆ ಪಾತ್ರರಾಗುತ್ತಾರೆ ಎಂದು ಕೆಮಾರು ಸಾಧನ ಆಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅಭಿಪ್ರಾಯಸಿದ್ದಾರೆ.
ಉದಯ ಶೆಟ್ಟಿ ಮುನಿಯಲು ಅಭಿಮಾನಿ ಬಳಗ ಮತ್ತು ಬ್ಲಾಕ್ ಕಾಂಗ್ರೆಸ್ ಹೆಬ್ರಿ ಮತ್ತು ಕಾರ್ಕಳದ ವತಿಯಿಂದ ಉದಯ ಶೆಟ್ಟಿ ಮುನಿಯಾಲು ಇವರ 50ನೇ ಹುಟ್ಟು ಹಬ್ಬದ ಸಂದರ್ಭ ಪುಲ್ಕೇರಿ ಲಕ್ಷ್ಮೀದೇವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಮತ್ತು ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ ಆರ್ ಮಾತನಾಡಿ, ಉದಯ ಶೆಟ್ಟಿ ಕಾರ್ಕಳದ ಜನತೆಯ ಧ್ವನಿಯಾಗಬೇಕು ಜನತೆಯ ಸಂಕಷ್ಟಕ್ಕೆ ಸ್ಪಂದಿಸುವಂತಹ ಕೆಲಸ ಮಾಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಲು ಮಾತನಾಡಿ ಕಾರ್ಕಳದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷವನ್ನು ಕಟ್ಟುವ ಕೆಲಸ ಮಾಡುತ್ತೇನೆ ಕಾರ್ಯಕರ್ತರ ಬೇಡಿಕೆಗೆ ನಿರಂತರ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.
ವೇದಿಕೆಯಲ್ಲಿ ಎಸಿಡಿಸಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ, ಕೆಪಿಸಿಸಿ ಸದಸ್ಯರಾದ ನಿರೆ ಕೃಷ್ಣಶೆಟ್ಟಿ, ಸುರೇಂದ್ರ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದಾಶಿವ ದೇವಾಡಿಗ, ಚಂದ್ರಶೇಖರ ಬಾಯಾರಿ, ಜಿಲ್ಲೆ ಯುವ ಕಾಂಗ್ರೆಸ್ ಅಧ್ಯಕ್ಷ ಮುಂಬೈ ಉದ್ಯಮಿಗಳಾದ ಗಿರೀಶ್ ಶೆಟ್ಟಿ ತೆಳ್ಳಾರು, ಅಮಿತ್ ಶೆಟ್ಟಿ ವೇದಿಕೆ ಉಪಸ್ಥಿತರಿದ್ದರು.