ಕಟೀಲು ಕ್ಷೇತ್ರದಲ್ಲಿ 31 ವರ್ಷಗಳ ಬಳಿಕ ಜಲಕ್ಷಾಮ : ಶಾಲಾ ಮಕ್ಕಳ ಬಿಸಿಯೂಟ ನಿಲುಗಡೆ

ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ದವಾದ ಧಾರ್ಮಿಕ ದತ್ತಿ ಇಲಾಖೆಯ ಆಡಳಿತಕ್ಕೊಳಪಟ್ಟ ರಾಜ್ಯದಲ್ಲಿ ಕೋಟಿಗೂ ಮಿಕ್ಕಿ ಆದಾಯವನ್ನು ಒಳಗೊಂಡಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಈ ಬಾರಿ ಜಲಕ್ಷಾಮ ಕಂಡು ಬಂದಿದೆ.

ಪ್ರತಿದಿನ ಸುಮಾರು 15000 ಕ್ಕೂ ಮಿಕ್ಕಿ ಆಗಮಿಸುವ ಭಕ್ತರಿಗೆ ಹಾಗೂ ದೇವಳದಿಂದ ನಡೆಸಲ್ಪಡುತ್ತಿರುವ ಶಿಕ್ಷಣ ಸಂಸ್ತೆಗೆ ಸಮಸ್ಯೆ ಉಂಟಾಗಿದ್ದು ಶಿಕ್ಷಣ ಸಂಸ್ತೆಗೆ ಮಧ್ಯಾಹ್ನದ ಬಳಿಕ ರಜೆಯನ್ನು ನಿಡಲಾಗುತ್ತಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ 1992ರಲ್ಲಿ ಈ ರೀತಿ ಜಲ ಕ್ಷಾಮ ಕಂಡುಬಂದಿದ್ದು ಸುಮಾರು 31 ವರ್ಷಗಳ ಬಳಿಕ ದೇವಳದಲ್ಲಿ ಜಲ ಕ್ಷಾಮ ಕಂಡು ಬಂದಿದೆ. ನಂದಿನಿ ನದಿಯು ಸುತ್ತ ಬೋರ್ಗರೆಯುತ್ತ ಮಧ್ಯದಲ್ಲಿ ನೆಲೆಸಿರುವ ಜಲ ವಾಸಿನಿ ಕಟೀಲು ದುರ್ಗೆಯ ದೇವಳದ ಸುತ್ತಲಿನ ನಂದಿನಿ ನದಿಯಲ್ಲಿ ನೀರು ಬತ್ತಿ ಹೋಗಿದೆ

ಕಟೀಲು ದೇವಳಕ್ಕೆ ಸುಮಾರು 7 ಲಕ್ಷ ನೀರಿನಷ್ತು ಅಗತ್ಯವಿದ್ದು ದೇವಳದಲ್ಲಿ ಮೂರು ಬಾವಿಗಳು ಹಾಗೂ 3 ಬೋರ್‍ವೆಲ್‍ಗಳಿದ್ದು ಇದರಿಂದ ನಿರ್ವಹಣೆ ನಡೆಯುತ್ತಿದ್ದು ಇದೀಗ ಬೋರ್ ವೆಲ್ ಹಾಗೂ ಬಾವಿಗಳಲ್ಲಿ ನೀರಿಲ್ಲದ ಕಾರಣ ಸಮಸ್ಯೆಯಾಗಿದೆ. ಪ್ರತಿ ದಿನ 15ರಿಂದ 20 ನಿಮಿಷ ನೀರು ಬರುತ್ತಿದ್ದು ಆಡಳಿತ ಮಂಡಳಿಯು ಉದ್ಯಮಿಗಳಿಂದ ಟ್ಯಾಂಕರ್ ಮೂಲಕ ನೀರು ಪೂರೈ ಕೆಗೆ ವಿನಂತಿಸಿದ್ದು ಲಭ್ಯತೆಯ ಮೇರೆಗೆ ಕೆಲವರು ನೀರು ಪೂರೈಸುತ್ತಿದ್ದಾರೆ.

ಕಟೀಲು ದೇವಳಕ್ಕೆ ಪ್ರತಿದಿನ ಸುಮಾರು 15000 ಕ್ಕೂ ಮಿಕ್ಕಿ ಭಕ್ತರು ರಾಜ್ಯದ ವಿವಿಧ ಕಡೆಗಳಿಂದ ದೇವಳಕ್ಕೆ ಆಗಮಿಸುತ್ತಿದ್ದು ದೇವಳದ ಮುಂಭಾಗದಲ್ಲಿ ಕ್ಯೆ,ಕಾಳು ತೊಳೆಯುವ ವ್ಯವಸ್ತೆಯಿದ್ದು ಇದೀಗ ನಿಲ್ಲಿಸಲಾಗಿದೆ. ಕೆ ದೇವಳದಲ್ಲಿ ಪ್ರತಿ ದಿನ ಬೆಳಿಗ್ಗೆ ಗಂಜಿ ಊಟ, ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡಲಾಗುತ್ತಿದೆ. ನೀರಿನ ಸಮಸ್ಯೆಯಿಂದಾಗಿ ಬಟ್ಟಲಿನಲ್ಲಿ ಅನ್ನದಾನದ ಬದಲಿಗೆ ಯೂಸ್ ಆಂಡ್ ತ್ರೋ ಹಾಳೆ ತಟ್ಟೆಯನ್ನು ಉಪಯೋಗಿಸಲಾಗುತ್ತಿದೆ.

ಕಟೀಲು ದೇವಸ್ಥಾನದಿಂದ ನಡೆಸಲ್ಪಡುವ ಗೋಶಾಲೆಗಳಿಗೂ ನೀರಿನ ಸಮಸ್ಯೆ ಎದುರಾಗಿದ್ದು, ಟ್ಯಾಂಕರ್ ನಲ್ಲಿ ನೀರು ತರಿಸಲಾಗುತ್ತಿದೆ. ದೇವಸ್ಥಾನವನ್ನು ಸುತ್ತುವರಿದು ಹರಿಯುವ ನಂದಿನಿ ನದಿ ಪೂರ್ತಿಯಾಗಿ ಬತ್ತಿ ಹೋಗಿದ್ದು, ನೀರಿನ ಸಂಪನ್ಮೂಲ ಕಂಡುಕೊಳ್ಳಲು ಮತ್ತೆ ಬಾವಿ ಕೊರೆಯಲು ದೇವಸ್ಥಾನದ ಆಡಳಿತ ಮಂಡಳಿ ಚಿಂತನೆ ನಡೆಸಿದೆ.

Related Posts

Leave a Reply

Your email address will not be published.