ಕಾರವಾರ: ಸಬ್ ಮರೀನ್‌ನಲ್ಲಿ ರಾಷ್ಟ್ರಪತಿ ಮುರ್ಮು ಪಯಣ
ಕಾರವಾರ: ಕದಂಬ ನೌಕಾನೆಲೆಯಲ್ಲಿ ‘ಐಎನ್‌ಎಸ್ ವಾಘಶೀರ್’ ಜಲಾಂತರ್ಗಾಮಿ ನೌಕೆಯಲ್ಲಿ (ಸಬ್‌ಮೆರಿನ್) ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ ಸಂಚಾರ ನಡೆಸಿದರು.

ಎಪಿಜೆ ಅಬ್ದುಲ್ ಕಲಾಂ ಬಳಿಕ ಜಲಾಂತರ್ಗಾಮಿ ನೌಕೆಯಲ್ಲಿ ಸಂಚರಿಸಿದ ಸಾಧನೆ ಮಾಡಿದ ಎರಡನೇ ರಾಷ್ಟ್ರಪತಿ ಅವರಾದರು.ಗೋವಾದಿಂದ ಬೆಳಿಗ್ಗೆ 9 ಗಂಟೆ ಸುಮಾರಿಗೆ ನೌಕಾದಲದ ವಿಶೇಷ ಹೆಲಿಕಾಪ್ಟರ್‌ನಲ್ಲಿ ನೌಕಾನೆಲೆಗೆ ಬಂದಿಳಿದ ರಾಷ್ಟ್ರಪತಿ ಅವರನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಬರಮಾಡಿಕೊಂಡರು.ಬಳಿಕ ಜಲಾಂತರ್ಗಾಮಿ ನೌಕೆಯ ಬಳಿ ತೆರಳಿದ ಅವರು ನೌಕಾದಳದ ಸಿಬ್ಬಂದಿಯತ್ತ ಕೈಬೀಸುತ್ತ ಜಲಮಾಂತರ್ಗಾಮಿ ನೌಕೆಯೊಳಗೆ ತೆರಳಿದರುಸಮುದ್ರದ ಆಳದಲ್ಲಿ ನೌಕೆ ಸಂಚರಿಸುತ್ತಿದ್ದು, ತಾಸಿಗೂ ಹೆಚ್ಚು ಕಾಲ ರಾಷ್ಟ್ರಪತಿ ನೌಕೆಯೊಳಗೆ ಸಂಚರಿಸಲಿದ್ದಾರೆ


















