ಕೊಣಾಜೆ : ಯುವತಿ ನಾಪತ್ತೆ

ಉಳ್ಳಾಲ: ಮನೆ ಕೆಲಸಕ್ಕಿದ್ದ ಯುವತಿ ನಾಪತ್ತೆಯಾಗಿರುವ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಾವೇರಿ ಸವಣೂರು ಮಾರುತಿಪುರ ನಿವಾಸಿ ಪೂಜಾ ಲಮಾಣಿ (20) ನಾಪತ್ತೆಯಾದವರು. ಕೊಣಾಜೆ ಕಕ್ಕೆಮಜಲು ನಿವಾಸಿ ಕುಟುಂಬವೊಂದು ಅನಾರೋಗ್ಯದಲ್ಲಿರುವ ಪ್ರಾಯಸ್ತರನ್ನು ನೋಡಿಕೊಳ್ಳಲು ಖಾಸಗಿ ಏಜೆನ್ಸಿ ಮೂಲಕ ಕೆಲಸಕ್ಕೆ ಇಟ್ಟುಕೊಂಡಿದ್ದು, ತಿಂಗಳಿಗೆ 20,000 ರೂ ಏಜೆನ್ಸಿಗೆ ಪಾವತಿಸುತ್ತಿದ್ದರು. ಫೆ.1 ರಂದು ಸಂಜೆ 3 ಕ್ಕೆ ಮನೆಯಿಂದ ಹೊರಹೋದಾಕೆ ನಂತರ ನಾಪತ್ತೆಯಾಗಿದ್ದಾರೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
