ಕುಂದಾಪುರ : ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿತ್ರಾಸಿ-ಮರವಂತೆ ಗ್ರಾಮದ ಗಡಿ ಗುರುತು

ಕುಂದಾಪುರ ತಾಲೂಕಿನ ತ್ರಾಸಿ ಹಾಗೂ ಬೈಂದೂರು ತಾಲೂಕಿನ ಮರವಂತೆ ಈ ಎರಡು ಸ್ಥಳಗಳ ಮಧ್ಯಭಾಗದ ಗಡಿ ಗುರುತು ಮಾಡುವ ಕಾರ್ಯ ರಾಷ್ಟ್ರೀಯ ಹೆದ್ದಾರಿಯ 66 ಬಳಿ ನಡೆದಿದೆ.
ತ್ರಾಸಿ ಮತ್ತು ಮರವಂತೆ ಮಧ್ಯ ಭಾಗದ ನಡುವೆ ತ್ರಾಸಿ ಗ್ರಾಮದ ಗಡಿ ಗುರುತು ಮಾಡಿಕೊಡುವಂತೆ ತ್ರಾಸಿ ಗ್ರಾಮ ಪಂಚಾಯತ್ ಮನವಿ ಮೇರೆಗೆ ಕುಂದಾಪುರ ತಹಶೀಲ್ದಾರ್ ಅವರು ರಾಷ್ಟ್ರೀಯ ಯ ಹೆದ್ದಾರಿ 66ರ ಬಳಿ ತ್ರಾಸಿ ಗ್ರಾಮದ ಗಡಿ ಹಾಗೂ ಅದೇ ಹೆದ್ದಾರಿಯ ಮರವಂತೆ ಈ ಎರಡು ಸ್ಥಳಗಳು ಸಂಧಿಸುವ ಗಡಿ ಗುರುತು ಮಾಡುವಂತೆ, ತ್ರಾಸಿ ಗ್ರಾಮದ ಬೀಚ್ ಬಳಿ ಕುಂದಾಪುರ ಮತ್ತು ಬೈಂದೂರು ತಾಲೂಕು ಗಡಿ ನಿರ್ಧರಿಸುವ ಬಗ್ಗೆ ಜಂಟಿ ಮೋಜಣಿಗೆ ಆದೇಶಿಸಿದ್ದರು.
ತಹಶೀಲ್ದಾರ್ ಆದೇಶದಂತೆ ತ್ರಾಸಿ ಗ್ರಾಮದ ಸೌಪರ್ಣಿಕ ನದಿ ಸೇತುವೆ ಸಮೀಪ ಕುಂದಾಪುರ ಮತ್ತು ಬೈಂದೂರು ತಾಲೂಕು ಗಡಿ ನಿರ್ಧರಿಸಲು ವಂಡ್ಸೆ ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ ಮತ್ತು ತಾಲೂಕು ಸರ್ವೇಯರ್ ಯೂಸೂಫ್ ಮತ್ತು ಮಹೇಶ್ ಅವರು ಸ್ಥಳಕ್ಕೆ ಆಗಮಿಸಿ ಗಡಿ ಗುರುತು ಮಾಡಿದರು.
ಈ ಸಂದರ್ಭ ತ್ರಾಸಿ ಕಂದಾಯ ನಿರೀಕ್ಷಕ ರಾಘವೇಂದ್ರ, ಗ್ರಾಮ ಪಂಚಾಯತ್ ಅಧ್ಯಕ್ಷ ಮಿಥುನ್ ಎಂ.ಡಿ. ಬಿಜೂರು, ಮರವಂತೆ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ್ ಪಟಗಾರ್ , ತ್ರಾಸಿ ಗ್ರಾಪಂ ಪಿಡಿಒ ಶೋಭಾ, ಮರವಂತೆ ಗ್ರಾಪಂ ಪಿಡಿಒ ಗೀತಾ, ತ್ರಾಸಿ ಗ್ರಾಮ ಆಡಳಿತಾಧಿಕಾರಿ ಅನಿಲ್, ಮರವಂತೆ ಗ್ರಾಮ ಆಡಳಿತಾಧಿಕಾರಿ ಸಂದೀಪ್ ಭಂಡಾರ್‌ಕಾರ್, ತ್ರಾಸಿ ಗ್ರಾಪಂ ಲೆಕ್ಕಸಹಾಯಕ ಶಿವಾನಂದ, ತ್ರಾಸಿ ಮತ್ತು ಮರವಂತೆ ಗ್ರಾಪಂ ಸದಸ್ಯರು, ಮಾಜಿ ಸದಸ್ಯರು, ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
