ಕುಂದಾಪುರ : ನಮ್ಮ ಭೂಮಿ ನಮ್ಮ ಹಕ್ಕು, ಕೃಷಿ ಭೂಮಿಗಾಗಿ ಹಕ್ಕೊತ್ತಾಯ

ಕುಂದಾಪುರ: ಕೊರಗರಿಗೆ ಕೃಷಿ ಭೂಮಿ ಇಲ್ಲದಿರುವುದರಿಂದ ಅವರು ಕೃಷಿಕರಾಗದೇ ಇಂದಿಗೂ ದಯನೀಯ ಸ್ಥಿತಿಯಲ್ಲಿ ಇದ್ದಾರೆ. ಹಲವು ಸರ್ಕಾರಗಳು ನಾನಾ ಯೋಜನೆಗಳನ್ನು ತಂದರೂ ಕೊರಗರಿಗೆ ಕೃಷಿ ಮಾಡಿಕೊಳ್ಳಲು ತುಂಡು ಭೂಮಿಯನ್ನೂ ಕೊಟ್ಟಿಲ್ಲ. ಕೊರಗ ಸಮುದಾಯದ ಮನವಿಗಳು ಕೇವಲ ಕುಂದು ಕೊರತೆ ಸಭೆಗೆ ಮಾತ್ರವೇ ಸೀಮಿತವಾಗಬಾರದು. ಅದು ಕಾರ್ಯರೂಪಕ್ಕೂ ಬರಬೇಕು ಎಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ ಹೇಳಿದರು.

ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳದ ವತಿಯಿಂದ ಕುಂದಾಪುರದ ತಹಸೀಲ್ದಾರ್ ಕಚೇರಿ ಎದುರು ಹಮ್ಮಿಕೊಳ್ಳಲಾದ ‘ನಮ್ಮ ಭೂಮಿ ನಮ್ಮ ಹಕ್ಕು’, ‘ಕೃಷಿ ಭೂಮಿಗಾಗಿ ಹಕ್ಕೊತ್ತಾಯ’ದಲ್ಲಿ ಅವರು ಮಾತನಾಡಿದರು.ಕೊರಗರ ಕುಂದು ಕೊರತೆ ಸಭೆಗಳಲ್ಲಿ ನಮ್ಮ ನೋವುಗಳನ್ನು ಆಲಿಸಿ ಅದಕ್ಕೆ ಪರಿಹಾರ ಭರವಸೆ ನೀಡುವ ಅಧಿಕಾರಿಗಳು ಬಳಿಕ ಇತ್ತ ತಲೆಹಾಕುವುದಿಲ್ಲ. ಹಿಂದೆ ಕಂದಾಯ ಸಚಿವರಾಗಿದ್ದ ಆರ್ ಅಶೋಕ್ ಅವರು ಕೆಂಜೂರಿನ ಕೊರಗ ಸಮುದಾಯದ ಮನೆಯಲ್ಲಿ ವಾಸ್ತವ್ಯ ಹೂಡಿದ ವೇಳೆ ಜಿಲ್ಲೆಗಲಯ ಕೊರಗರಿಗೆ ಸಾವಿರ ಎಕರೆ ಕೃಷಿ ಭೂಮಿಯನ್ನು ನೀಡುತ್ತೇವ ಎಂದು ಆಶ್ವಾಸನೆ ಕೊಟ್ಟಿದ್ದರು.

ಆದರೆ ಅದು ಇಂದಿಗೂ ಆಶ್ವಾಸನೆಯಾಗಿಯೇ ಉಳಿದಿದೆ. ಇಂದಿಗೂ ಕೊರಗರು ಭೂಮಿಯ ಹಕ್ಕುಪತ್ರ ಸಿಗದೇ ಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಹಲವಾರು ಕಡತಗಳು ಸರ್ಕಾರಿ ಕಚೇರಿಯಲ್ಲಿ ಧೂಳು ಮೆತ್ತಿಕೊಂಡಿವೆ. ಅಧಿಕಾರಿಗಳು ಬದಲಾಗುತ್ತಾ ಹೋಗುತ್ತಾರೆ. ಆದರೆ ನಮ್ಮಸಮಸ್ಯೆ ಹಾಗೆಯೇ ಉಳಿಯುತ್ತಿದೆ. ತಹಶಿಲ್ದಾರ್ ಶೋಭಾಲಕ್ಷ್ಮಿ ಅವರಿಗೆ ಮನವಿ ಸಲ್ಲಿಸಲಾಯಿತು.ಕುಂದಾಪುರ ತಾಲೂಕು ಅಧ್ಯಕ್ಷ ಶೇಖರ್, ಸಂಯೋಜಕ ಕೆ. ಪುತ್ರನ್, ಪ್ರಮುಖರಾದ ಶಶಿಕಲಾ, ಅಶೋಕ್ ಶೆಟ್ಟಿ, ನಾಗರಾಜ ಕುಂದಾಪುರ ಇದ್ದರು.

Related Posts

Leave a Reply

Your email address will not be published.