ಕಿರುಚಿತ್ರ ಸ್ಪರ್ಧೆಯಲ್ಲಿ ಎಸ್ ಡಿ ಎಂ ಕಾಲೇಜಿಗೆ ದ್ವಿತೀಯ ಪ್ರಶಸ್ತಿ

ಉಜಿರೆ: ತುಮಕೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಆಯೋಜಿಸಿದ ‘ಇಂಪ್ರೆಶನ್ – 2023’ ರಾಜ್ಯ ಮಟ್ಟದ ಮಾಧ್ಯಮ ಸ್ಪರ್ಧೆಯ ಕಿರುಚಿತ್ರ ವಿಭಾಗದಲ್ಲಿ ಉಜಿರೆಯ ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ನಿರ್ಮಿಸಿದ ಕಿರುಚಿತ್ರ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

‘ನಾದ’ ಎಂಬ ಶೀರ್ಷಿಕೆಯಡಿ ಈ ಕಿರುಚಿತ್ರವು ಮೂಡಿಬಂದಿದೆ. ಈ ಕಿರುಚಿತ್ರವು ಕಿರಣ್ ಕುಲಕಣ ್ ಕಥೆ ಮತ್ತು ನಿರ್ದೇಶನ, ಶ್ಯಾಮ್ ಪ್ರಸಾದ ಛಾಯಗ್ರಹಣ, ಜೆಸ್ವಿನ್, ಶಶಿಧರ್ ಹಾಗು ಅರ್ಪಿತ್ ಇಚ್ಚೆ ಸೃಜನಶೀಲ ತಂಡದ ಮೂಲಕ ಮೂಡಿ ಬಂದಿದೆ. ಈ ಕಿರುಚಿತ್ರದಲ್ಲಿ ಅರವಿಂದ, ಪೂರ್ಣಶ್ರೀ, ದಿವ್ಯ ಲಕ್ಷ್ಮಿ ಮತ್ತು ಮದನ್ ನಟಿಸಿದ್ದು, ಅಮಿತ ಮತ್ತು ಸಂಪತ್‍ಕುಮರ್ ರೈ ಹಿನ್ನೆಲೆ ಧ್ವನಿಯನ್ನು ನೀಡಿದ್ದಾರೆ. ಈ ಚಿತ್ರಕ್ಕೆ ಸಹಾಯಕ ಪ್ರಾಧ್ಯಪಕ ಸುನಿಲ್ ಹೆಗ್ಡೆ ಮತ್ತು ಎಸ್ ಡಿ ಎಂ ಮಲ್ಟಿ ಮೀಡಿಯಾ ಸ್ಟುಡಿಯೋದ ತಂತ್ರಜ್ಞ ರಕ್ಷಿತ್ ರೈಯವರ ಮಾರ್ಗದರ್ಶನದಲ್ಲಿ ಮೂಡಿಬಂದಿದೆ.
ಆಧುನಿಕ ಸಮಾಜದಲ್ಲಿ ಪೂರ್ವಗ್ರಹಪೀಡಿತ ದೃಷ್ಟಿಕೋನವನ್ನು ಬಿಟ್ಟು ವಾಸ್ತವವಾದಿ ಉದಾರತೆ ತೋರಬೇಕು ಎಂಬ ಸಂದೇಶ ಈ ಚಿತ್ರ ಹೊಂದಿದೆ.

Related Posts

Leave a Reply

Your email address will not be published.