ದಶಕದಲ್ಲಿ ದಲಿತರ ವಿರುದ್ಧ ದೌರ್ಜನ್ಯ 48%ದಷ್ಟು ಹೆಚ್ಚಳ

ಕಳೆದೊಂದು ದಶಕದಲ್ಲಿ ದಲಿತರ ಮೇಲಿನ ಅಪರಾಧಗಳು ಭಾರತದಲ್ಲಿ 48 ಶೇಕಡಾದಷ್ಟು ಹೆಚ್ಚಾಗಿರುವುದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಗ್ರಾಫ್ ಪೋಸ್ಟ್ ಮಾಡುವ ಮೂಲಕ ಬಿಜೆಪಿಯ ಸಬ್ ಕ ಸಾಥ್ ಹೇಳಿಕೆಯನ್ನು ಲೇವಡಿ ಮಾಡಿದ್ದಾರೆ.ಎನ್‍ಸಿಆರ್‍ಬಿ- ರಾಷ್ಟ್ರೀಯ ಅಪರಾಧ ವರದಿಯ ಆಧಾರದ ಮೇಲೆ ಈ ಗ್ರಾಫ್ ತಯಾರಾಗಿದೆ.

ದಲಿತರ ಮೇಲೆ 46.12% ಮತ್ತು ಬುಡಕಟ್ಟು ಜನರ ಮೇಲೆ 48.15% ದೌರ್ಜನ್ಯ ಅಧಿಕವಾಗಿರುವುದು ಅಂಕಿಅಂಶದಲ್ಲಿದೆ.ಚುನಾವಣೆ ಮುಗಿದ ಮಧ್ಯ ಪ್ರದೇಶ, ರಾಜಸ್ತಾನ, ಛತ್ತೀಸಗಡ, ತೆಲಂಗಾಣದಲ್ಲಿ ದಲಿತರ ಮೇಲೆ ದೌರ್ಜನ್ಯ ಹೆಚ್ಚಿದೆ. ದಲಿತರ ವಿರುದ್ಧದ ಅಪರಾಧಗಳಲ್ಲಿ ಉತ್ತರ ಪ್ರದೇಶ, ಬಿಹಾರ, ಒಡಿಶಾ, ಪಂಜಾಬ್‍ಗಳು ಕೂಡ ನಾಗಾಲೋಟದಲ್ಲಿವೆ.

Related Posts

Leave a Reply

Your email address will not be published.