ಮಾಸ್ಟರ್ ಚೆಫ್ ಇಂಡಿಯಾ-2023 ವಿಜೇತರಾಗಿ ಮಂಗಳೂರಿನ ಮೊಹಮ್ಮದ್ ಆಶಿಕ್

ಮಂಗಳೂರಿನ ಮೊಹಮ್ಮದ್ ಆಶಿಕ್ ಮಾಸ್ಟರ್ ಚೆಫ್ ಇಂಡಿಯಾ-2023 ವಿಜೇತರಾಗಿ ಹೊರಹೊಮ್ಮಿದರು. ನಂಬಿ ಜೆಸ್ಸಿಕಾ ಮರಕ್ ಮತ್ತು ರುಖ್ಸಾರ್ ಸಯೀದ್, ಸೂರಜ್ ಅವರೊಂದಿಗೆ ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ ಅಪ್ ಸ್ಥಾನಗಳನ್ನು ಪಡೆದರು.
ಮೊಹಮ್ಮದ್ ಆಶಿಕ್ ಇದಿಗ ಮಂಗಳೂರಿನಲ್ಲಿ ಚಿರಪರಿಚಿತ ಹೆಸರು ಮಂಗಳೂರಿನ ಕುಲುಕಿ ಹಬ್ ಎನ್ನುವ ಸಣ್ಣ ಜ್ಯೂಸ್ ಮಳಿಗೆಯಿಂದ ಸಾಗಿ ಇಂದು ಭಾರತದ ದೊಡ್ಡ ರಿಯಾಲಿಟಿ ಶೋ ಸೋನಿ ಟಿವಿಯ ಮಾಸ್ಟರ್ ಚೆಫ್ ಇಂಡಿಯಾದಲ್ಲಿ ವಿಜೆತರಾದವರು.
ಹೋಟೆಲ್ ಮ್ಯಾನೆಜ್ಮೆಂಟ್ ಕಲಿಯಬೇಕು ಎನ್ನುವ ಆಸೆ ಇದು,್ದ ಕಲಿಯಲು ಸಾಧ್ಯವಾಗದೆ ಇದ್ದರು ತಮ್ಮ ಕನಸಿನ ಕೆಲಸ ಕುಕ್ಕಿಂಗ್‍ನಲ್ಲಿ ಏನಾದರು ಒಂದು ಸಾಧನೆ ಮಾಡಬೇಕು ಎಂದು ಪಣತೊಟ್ಟು ಕನಸಿನ ಹಿಂದೆ ಬಿದ್ದು ಇವರ ಪರಿಶ್ರಮಕ್ಕೆ ಇಂದು ಮಸ್ಟರ್ ಚೆಫ್ ನ ಗೆಲುವಿನ ಗರಿ ಮುಡಿಗೇರಿಕೊಂಡಿದ್ದಾರೆ.
ತಮ್ಮ ಪರಿಶ್ರಮ, ಛಲ ತನ್ನ ಕುಕ್ಕಿಂಗ್‍ನಲ್ಲಿ ಇರುವ ಶ್ರದ್ದೆ ಹಾಗೂ ತನ್ನ ಸ್ವಾದಿಸ್ಟಕರ, ವೈವಿದ್ಯಮಯ ವಿವಿಧ ಆಹಾರಗಳನ್ನು ತಯಾರಿಸಿ ಪ್ರತಿ ಸಂಚಿಕೆಯಲ್ಲೂ ತೀರ್ಪುಗಾರರಿಂದ ಮೆಚ್ಚುಗೆಯನ್ನು ಪಡೆದು ವಿಜೇತ ಪಟ್ಟವನ್ನು ಪಡೆದು, ಮಂಗಳೂರಿಗೆ ಹೆಮ್ಮೆಯನ್ನು ತಂದಿದ್ದಾರೆ. ಇವರ ಸಾಧನೆಯನ್ನು ಮಂಗಳೂರಿನ ಜನತೆ ಯಾವುದೇ ಜಾತಿ ಧರ್ಮದ ಬೇದವಿಲ್ಲದೆ ವಿಜೃಂಬಿಸಿದ್ದಾರೆ.
ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಮಾಸ್ಟರ್ ಚೆಫ್‍ನಲ್ಲಿ ಪೂಜಾ ಧಿಂಗಾ,್ರ ರಣವೀರ್ ಸಿಂಗ್ ಬ್ರಾರ್, ವಿಕಾಸ್ ಖನ್ನಾ ತೀರ್ಪುಗಾರರಾಗಿ ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದರು. 12 ಜನ ವಿವಿಧ ರಾಜ್ಯಗಳ ಚೆಪ್ ಗಳು ಈ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದರು. ಇನ್ನೂ ವಿಜೇತರನ್ನು ಅವರು ತಯಾರಿಸುವ ಆಹಾರದ ರುಚಿ, ಸಂಶೋದನೆ, ಪ್ರೆಸೆಂಟೆಶನ್, ವಿಭಿನ್ನತೆಯನ್ನು ಆಧರಿಸಿ ಆಹಾರದ ತೀರ್ಪನ್ನು ನೀಡಲಾಗಿತ್ತು.
