ಮಂಗಳೂರು : ಅನುಮಾನಾಸ್ಪದ ತಿರುಗಾಟ ನಡೆಸುತ್ತಿದ್ದ ಇಬ್ಬರವಶ

ಅನುಮಾನಾಸ್ಪದ ತಿರುಗಾಟ ನಡೆಸುತ್ತಿದ್ದ ಇಬ್ಬರನ್ನು ಉತ್ತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಂಜಾನೆ 3 ಗಂಟೆ ಸುಮಾರಿಗೆ ಪೊಲೀಸರು ರೌಂಡ್ಸ್ ನಲ್ಲಿದ್ದಾಗ ಕುದ್ರೋಳಿ ಅಳಕೆ ಮಾರುಕಟ್ಟೆ ಪ್ರದೇಶದ ಬಳಿ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದ ರೀತಿಯಲ್ಲಿ ತಿರುಗಾಟ ನಡೆಸುತ್ತಿದ್ದರು. ವಿಚಾರಣೆ ನಡೆಸಿದಾಗ ಒಬ್ಬರು ಕೋಡಿಕಲ್ ನಿವಾಸಿ ಪ್ರಮೋದರಾಜ್ ಹಾಗೂ ಚಿಕ್ಕಮಗಳೂರಿನ ಓಂಕಾರ ಮೂರ್ತಿ ಎಂಬುದು ಬೆಳಕಿಗೆ ಬಂದಿದೆ ಇವರಿಬ್ಬರು ಕಳ್ಳತನ ಅಥವಾ ಇನ್ನಾವುದೋ ಅಪರಾಧಕ್ಕೆ ಯೋಜನೆ ರೂಪಿಸಿರುವ ಶಂಕೆ ಇರುವುದರಿಂದ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Posts

Leave a Reply

Your email address will not be published.