ಕೊನೆಯ ಚುನಾವಣೆ, ರಾಜಕೀಯ ನಿವೃತ್ತಿ ಎಂದು ಹೇಳುವ ಕಾಂಗ್ರೆಸ್ ನಾಯಕರನ್ನು ತಿರಸ್ಕರಿಸಿ: ಪ್ರಧಾನಿ ಮೋದಿ

ಇದು ನಮ್ಮ ಕೊನೆಯ ಚುನಾವಣೆ, ರಾಜಕೀಯ ನಿವೃತ್ತಿ ಎಂದು ಜನರ ಬಳಿಕ ಕಾಂಗ್ರೆಸ್ ತೆರಳಿ ಮತಯಾಚನೆ ಮಾಡುತ್ತಿದೆ. ಆಂತಹ ಕಾಂಗ್ರೆಸ್ ನಾಯಕರನ್ನು ತಿರಸ್ಕರಿಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿನಲ್ಲಿ ಗುಡುಗಿದ್ದಾರೆ.
ಅವರು ಮೂಲ್ಕಿಯ ಕೊಳ್ನಾಡುವಿನಲ್ಲಿ ನಡೆದ ಬಿಜೆಪಿಯ ನವ ಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ನಮ್ಮ ನಾಯಕ ನಿವೃತ್ತಿಯಾಗುತ್ತಿದ್ದಾನೆ. ಅದಕ್ಕಾಗಿ ವೋಟ್ ಕೊಡಿ ಎಂದು ಕಾಂಗ್ರೆಸ್ ಕೇಳುತ್ತಿದೆ. ಒಬ್ಬ ನಾಯಕ ನಿವೃತ್ತಿಯಾಗುತ್ತಿರುವುದಕ್ಕೆ ವೋಟ್ ಹಾಕಬೇಕಂತೆ ಎಂದು ವ್ಯಂಗ್ಯವಾಡಿದರು.