ರೈಲಿನಡಿಗೆ ಬೀಳುತ್ತಿದ್ದ ವ್ಯಕ್ತಿಯ ರಕ್ಷಣೆ : ಸಮಯಪ್ರಜ್ಞೆ ಮೆರೆದ ಪೊಲೀಸ್ ಸಿಬ್ಬಂದಿ

ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿಗೆ ಹತ್ತಲು ಪ್ರಯತ್ನಿಸಿ ರೈಲಿನಡಿಗೆ ಬೀಳುತ್ತಿದ್ದ ವ್ಯಕ್ತಿಯನ್ನು ಪೊಲೀಸ್ ಸಿಬ್ಬಂದಿ ರಕ್ಷಿಸಿ ಸಮಯಪ್ರಜ್ಞೆ ಮೆರೆದ ಘಟನೆ ನಡೆದಿದೆ.

ಸೆಂಟ್ರಲ್ ರೈಲು ನಿಲ್ದಾಣದಿಂದ ಗುರುವಾರ ಸಂಜೆ 6.15ರ ವೇಳೆ ಮಲಬಾರ್ ಎಕ್ಸ್‍ಪ್ರೆಸ್ ರೈಲು ಹೊರಡುತ್ತಿದ್ದಾಗ ಶಂಕರ್ ಬಾಬು(70) ಎಂಬ ವ್ಯಕ್ತಿ ರೈಲಿನ ಎಸ್-6 ಕೋಚ್‍ಗೆ ಹತ್ತಲು ಪ್ರಯತ್ನಿಸಿ ಸಾಧ್ಯವಾಗದೆ ಹ್ಯಾಂಡಲ್‍ನಲ್ಲಿ ನೇತಾಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳದಲ್ಲಿದ್ದ ಆರ್‍ಪಿಎಫ್ ಸಿಬ್ಬಂದಿ ಪ್ರಕಾಶ್ ಅವರು ಶಂಕರ್ ಬಾಬು ಅವರನ್ನು ಎಳೆದು ರಕ್ಷಿಸಿದ್ದಾರೆ. ಪ್ರಕಾಶ್ ಗಮನಿಸದಿದ್ದರೆ ಶಂಕರ್ ಅವರು ಹಳಿ ಮತ್ತು ರೈಲಿನ ನಡುವೆ ಸಿಲುಕಿ ಅಪಾಯಕ್ಕೀಡಾಗುವ ಸಾಧ್ಯತೆ ಇತ್ತು.ಕೇರಳದ ಕಣ್ಣೂರು ಜಿಲ್ಲೆಯ ವಯಲ್‍ವೀಡು ನಿವಾಸಿ ಶಂಕರ್ ಬಾಬು ಅವರ ಬಲಗಾಲಿನ ಬೆರಳಿಗೆ ಸ್ವಲ್ಪ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಪೆÇಲೀಸ್ ಸಿಬಂದಿಯ ಸಮಯ ಪ್ರಜ್ಞೆ ಶ್ಲಾಘನೆಗೆ ಪಾತ್ರವಾಗಿದೆ.

Related Posts

Leave a Reply

Your email address will not be published.